![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Feb 26, 2022, 3:10 PM IST
ಹಾಸನ: ಸರ್ಕಾರಿ ಜಮೀನು ಹಾಗೂ ಅರಣ್ಯ ಭೂಮಿಗಳ ವ್ಯಾಪ್ತಿ ಆದಷ್ಟು ಶೀಘ್ರ ಇತ್ಯರ್ಥವಾಗಬೇಕು ಆ ಬಗ್ಗೆ ನಿಖರ ಮಾಹಿತಿ ಎಲ್ಲಾ ತಾಲೂಕುಗಳಅಧಿಕಾರಿಗಳಿಗೂ ತಲುಪಬೇಕು ಎಂದು ರಾಜ್ಯಜೆಡಿಎಸ್ ಅಧ್ಯಕ್ಷ, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಅರಣ್ಯ ಭೂಮಿ ಹಾಗೂ ಹೇಮಾವತಿ ಯೋಜನೆ (ಎಚ್‌ಆರ್‌ಪಿ ) ಸಂತ್ರಸ್ತರಿಗೆ ಕಾಯ್ದಿರಿಸಿದ ಭೂಮಿಮಂಜೂರು ಮಾಡುವ ಕುರಿತಂತೆ ಜಿಲ್ಲಾಧಿಕಾರಿಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿಮಾತನಾಡಿದ ಆವರು, ಆಲೂರು ಸಕಲೇಶಪುರವ್ಯಾಪ್ತಿಯಲ್ಲಿ ಆನೆ ಹಾವಳಿ ಹೆಚ್ಚಿದ್ದು, ಒಂದೇಹಂತದಲ್ಲಿ ಬ್ಯಾರಿಕೇಡ್ ಅಳವಡಿಯಾಗಬೇಕು.ಆನೆ ಕಾರಿಡಾರ್ ಯೋಜನೆ ಪ್ರಸ್ತಾವನೆ ಮರುಸಲ್ಲಿಕೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿ ಮಾಡದೆ ಕಾಮಗಾರಿಗಳಿಗೆ ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು. ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಗಳಿಗೆತಡೆಯೊಡ್ಡದೆ ನಿಯಮಾನುಸಾರ ಅನುಮತಿ ನೀಡ ಬೇಕು. ಇಲಾಖೆಗಳು ಪರಸ್ಪರ ಸಹಕಾರ ಸಮನ್ವಯದಿಂದ ಸರ್ಕಾರದ ಯೋಜನೆಗಳ ಅನುಷ್ಠಾನ ಮಾಡುವುದರ ಜತೆಗೆ ಜನಸಾಮಾನ್ಯರ ಶ್ರೇಯಾಭಿ ವೃದ್ಧಿಗೆ ಶ್ರಮಿಸಬೇಕು. ಸಕಲೇಶಪುರ, ಆಲೂರುಹಾಗೂ ಬೇಲೂರಿನ ಹಲವೆಡೆ ಆನೆಗಳ ಸಂಖ್ಯೆಹೆಚ್ಚಾಗಿದ್ದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳುಗಮನ ಹರಿಸಬೇಕು ಎಂದು ಹೇಳಿದರು.
ಶಾಸಕ ಪ್ರೀತಂ.ಜೆ ಗೌಡ ಅವರು ಮಾತನಾಡಿ, ಹಾಸನ ನಗರಕ್ಕೆ ನೀರು ಪೂರೈಸುವ ಅಮೃತ ಯೋಜ ನೆಯ ಪೈಪ್ ಲೈನ್ ಕಾಮಗಾರಿ ಅರಣ್ಯ ಭೂಮಿ ಮಧ್ಯೆ ಹಾದು ಹೋಗುತ್ತಿದ್ದು, ಆದಷ್ಟು ಬೇಗ ನಿಯ ಮಾ ನುಸಾರ ಅದಕ್ಕೆ ಪರಿಹಾರ ಹಣ ಕಟ್ಟಿಸಿ ಕೊಂಡು ಮಂಜೂರಾತಿ ನೀಡುವಂತೆ ಮನವಿ ಮಾಡಿದರು.
ಶಾಸಕರಾದ ಲಿಂಗೇಶ್ ಮಾತನಾಡಿ, ಅಕ್ರಮ ಸಾಗುವಳಿ ಸಕ್ರಮದ ಭೂ ಮಂಜೂರಾತಿ ವೇಳೆಆಗುವ ಗೊಂದಲಗಳನ್ನು ಆದಷ್ಟು ಬೇಗ ಪರಿಹರಿಸಬೇಕು. ಐದಳ್ಳ ಕಾವಲು ಭೂಮಿ ಸಮಸ್ಯೆ ಪರಿಹರಿಸಬೇಕು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜು ಮಾತನಾಡಿ, ನಿಯಮಾನುಸಾರ ಸಾರ್ವಜನಿಕರಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಲಾಗುತ್ತಿದೆ.ಕುಡಿವ ನೀರು, ಕಾಮಗಾರಿಗಳಿಗೆ ಯಾವುದೇಅಡ್ಡಿಯಾಗುತ್ತಿಲ್ಲ ಜಿಲ್ಲಾಡಳಿತದೊಂದಿಗೆ ಸಮನ್ವಯಸಾಧಿಸಿ ಕಾನೂನಿನ ುತಿಯೊಳಗೆ ಹೆಚ್ಚಿನ ನೆರವುನೀಡಲು ಶ್ರಮಿಸಲಾಗುವುದು ಎಂದರು.
ಸರ್ಕಾರಿ ಯೋಜನೆಗಳಿಗೆ ಅರಣ್ಯ ಭೂಮಿ ಹಾಗೂ ಹೇಮಾವತಿ ಜಲಾಶಯ ಯೋಜನೆಗೆ ಭೂಮಿಕಳೆದುಕೊಂಡ ಸಂತ್ರಸ್ತರಿಗೆ ಮಂಜೂರಾದ ಭೂಮಿ ಒದಗಿಸುವುದು ಹಾಗೂ ಮಾಜಿ ಸೈನಿಕರಿಗೆ ಜಮೀನುಒದಗಿಸುವುದು ಆನೆ-ಮಾನವ ಸಂರ್ಘಕ್ಕೆ ಶಾಶ್ವತಪರಿಹಾರ ಒದಗಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಿಶೇಷ ಭೂ ಸ್ವಾಧಿನಾಧಿಕಾರಿಮಂಜುನಾಥ್, ಭೂ ದಾಖಲಾತಿಗಳ ಉಪ ನೊಂದಣಾಧಿಕಾರಿ ಹೇಮಲತಾ ಹಾಗೂ ಎಲ್ಲ ತಾಲೂಕು ತಹಶೀಲ್ದಾರ್ ಇತರರಿದ್ದರು
ತ್ವರಿತಗತಿಯಲ್ಲಿ ದಾಖಲೆ ಸರಿಪಡಿಸುವ ಕಾರ್ಯ :
ಮಾಜಿ ಸೈನಿಕರಿಗೆ ಮೀಸಲಿರುವ ಜಮೀನಿನಲ್ಲಿ ಆದಷ್ಟು ತ್ವರಿತವಾಗಿ ಜೇಷ್ಠತೆ ಆಧಾರದ ಮೇಲೆ ಮಂಜೂರಾತಿ ನೀಡಲಾಗುವುದು. ಕಂದಾಯ ಹಾಗೂ ಅರಣ್ಯ ಇಲಾಖೆ ಜಮೀನುಗಳನ್ನು ಗುರುತಿಸಿ ದಾಖಲೆ ಸರಿಪಡಿಸಿ
ಕಾರ್ಯ ನಡೆಸಲಾಗುತ್ತಿದೆ. 1978ಕ್ಕೂ ಮುನ್ನ ಮಂಜೂಗರಾದ ಅರಣ್ಯ ಪ್ರದೇಶದ ಭೂಮಿಯ ಹಕ್ಕು ಪತ್ರ ರೈತರಿಗೆ ನೀಡಲಾಗುತ್ತಿದೆ. ಅದೇ ರೀತಿ 2005ರ ಅರಣ್ಯ ಹಕ್ಕು ಕಾಯ್ದೆಯಡಿ ಬರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಾಮಾನ್ಯ ವರ್ಗದ ಜನರಿಗೆ ಮಾನದಂಡ ಅನುಸರಿಸಿ ಭೂಮಿಯ ಒಡೆತನ ಮಂಜೂರುಮಾಡಲಾಗುತ್ತದೆ. ನಮೂನೆ 50,53,57 ಅನ್ವಯ ವಿಲೇವಾರಿ ಮಾಡಲಾಗುತ್ತಿದ್ದು, ಎಲ್ಲಾ ತಾಲೂಕುಗಳಲ್ಲಿ ಅರಣ್ಯ ಜಮೀನುಗಳ ವಿವರ ಒದಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.