ಕೃಷಿ ಭೂಮಿ ಪೋಡಿ ಸರಳೀಕರಣಕ್ಕೆ ಆಗ್ರಹ
Team Udayavani, Apr 18, 2022, 3:27 PM IST
ಚನ್ನರಾಯಪಟ್ಟಣ: ರಾಜ್ಯ ಸರ್ಕಾರ ಕೃಷಿ ಭೂಮಿ ದುರಸ್ತಿ(ಪೋಡಿಖಾತೆ)ಯನ್ನು ಸರಳೀಕರಣ ಮಾಡುವ ಮೂಲಕ ರೈತರು ಕಂದಾಯ ಇಲಾಖೆಗೆ ಅಲೆಯುವುದ ತಪ್ಪಿಸಬೇಕು ಎಂದು ಶಾಸಕ ಸಿ.ಎನ್ .ಬಾಲಕೃಷ್ಣ ಒತ್ತಾಯಿಸಿರು.
ತಾಲೂಕಿನ ಬರಾಳು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶತಮಾನಗಳಿಂದಲೂ ಸಾವಿರಾರು ಮಂದಿ ಕೃಷಿಕರು ತಮ್ಮ ಭೂಮಿಯನ್ನು ದುರಸ್ತಿ ಮಾಡಿಸಿಕೊಂಡಿಲ್ಲ ಇದಕ್ಕೆ ಕೈ ಹಾಕುವುದು ಹುತ್ತಕ್ಕೆ ಕೈ ಹಾಕಿದಂತೆ ಎಂಬ ಮನೋಭಾವ ರೈತರಲ್ಲಿ ಮೂಡಿದೆ, ಇದನ್ನು ಹೋಗಲಾಡಿಸಲು ಕಂದಾಯ ಇಲಾಖೆ ಮುಂದಾಗಬೇಕು ಎಂದು ಹೇಳಿದರು.
ಭೂಮಿ ದುರಸ್ತಿ ದುಬಾರಿ: ತಲೆ ತಲಾಂತರದಿಂದ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿರುವ ರೈತರು, ತಮ್ಮ ಭೂಮಿ ಪರಭಾರೆ ಮಾಡಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಭೂಮಿ ಕೊಳ್ಳುವವರು ದುರಸ್ತಿ ಕೇಳುತ್ತಾರೆ. ಇದನ್ನು ಮಾಡಿಸಲು ಸಾಕಷ್ಟು ಹಣ ವೆಚ್ಚವಾಗಲಿದೆ ಎಂದು ಹೇಳಿ ರೈತರಿಂದ ಕಡಿಮೆ ಬೆಲೆಗೆ ಭೂಮಿ ಖರೀದಿ ಸುವವರೂ ಇದ್ದಾರೆ. ದುರಸ್ತಿ ಸರಳೀಕರಣ ಮಾಡಿ ದರೆ ರೈತರಿಗೆ ಸಹಕಾರ ಆಗಲಿದೆ ಎಂದು ತಿಳಿಸಿದರು.
ಅಭಿವೃದ್ಧಿ ಕಾಮಗಾರಿ ಶೀಘ್ರ: ರೈತರಿಗೆ ನಿರಂತರವಾಗಿ ವಿದ್ಯುತ್ ಪೂರೈಸಲು ಕಾಂತರಾಜಪುರ ವ್ಯಾಪ್ತಿಯ ಶನಿದೇವರ ದೇಗುಲದ ಬಳಿ ವಿದ್ಯುತ್ ಉಪಕೇಂದ್ರ ತೆರೆಯಲಾಗುವುದು. ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮುಖ್ಯ ರಸ್ತೆಯಿಂದ ಬರಾಳು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಮಾಡಲಾಗುವುದು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇನ್ನೆರಡು ತಿಂಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
128 ಮಂದಿಗೆ ಆದೇಶ ಪತ್ರ ವಿತರಣೆ: ಶ್ರವಣಬೆಳಗೊಳ ಹೋಬಳಿ, ಕಸಬಾ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿನ ವೃದ್ಧಾಪ್ಯ ವೇತನ, ವಿಧವಾ ವೇತನಾ, ಅಂಗವಿಕಲರ ವೇತನಾ, ಸಂಧ್ಯಾ ಸುರಕ್ಷಾ, ಮನಸ್ವಿನಿ ಯೋಜನೆಯ 128 ಫಲಾನುಭವಿಗಳಿಗೆ ಆದೇಶ ಪತ್ರವನ್ನು ಸಮಾರಂಭದಲ್ಲಿ ವಿತರಣೆ ಮಾಡಲಾಯಿತು. ವಿವಿಧ ಇಲಾಖೆಗೆ ಸಂಬಂಧಿಸಿದ 26 ಅರ್ಜಿಯನ್ನು ಸಾರ್ವಜನಿಕರು ನೀಡಿದ್ದು ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಲಾಗಿಯಿತು.
ತಹಶೀಲ್ದಾರ್ ಜೆ.ಬಿ.ಮಾರುತಿ, ಕಂದಾಯ ನಿರೀಕ್ಷಕ ಎಂ.ಆರ್.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿ ಕಾರಿ ಸೋಮನಾಥ್, ಸೆಸ್ಕ್ ಎಇಇ ಹರೀಶ್, ಶ್ರವಣ ಬೆಳಗೊಳ ಹೋಬಳಿ ಉಪತಹಶೀಲ್ದಾರ್ ನಂಜೇಗೌಡ, ಶ್ರವಣಬೆಳಗೊಳ ಸಮು ದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಯುವರಾಜ್, ಕಂದಾಯ ನಿರೀಕ್ಷಕ ಕೆ.ಪಿ.ರಮೇಶ್, ಶಿಕ್ಷಣ ಸಂಯೋಜಕ ರುದ್ರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಮಹೇಂದ್ರ, ಸದಸ್ಯ ಚಂದ್ರಶೇಖರ್, ಮಹದೇವ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.