ಅಕ್ರಮ ಗಣಿಗಾರಿಕೆ: ಟ್ರ್ಯಾಕ್ಟರ್ ವಶ
Team Udayavani, May 8, 2019, 2:34 PM IST
ಅಕ್ರಮ ಗಣಿಗಾರಿಕೆಯ ಮೇಲೆ ತಹಶೀಲ್ದಾರ್ ಶಿವರಾಜ್ ದಾಳಿ ನಡೆಸಿ ಪರಿಶೀಲಿಸಿದರು.
ಅರಕಲಗೂಡು: ಅಕ್ರಮ ಗಣಿಗಾರಿಕೆ ಮೇಲೆ ತಹಶೀಲ್ದಾರ್ ಶಿವರಾಜ್ ದಾಳಿ, ಟ್ರ್ಯಾಕ್ಟರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಹಲವಾರು ವರ್ಷಗಳಿಂದ ಪಟ್ಟಣದ ಹೊರ ವಲಯದಲ್ಲಿ ಕಾನೂನು ಕಣ್ಣಿಗೆ ಮಣ್ಣೆರಚಿ ನಡೆಯು ತ್ತಿದ್ದ ಕಲ್ಲು ಗಣಿಗಾರಿಕೆಯ ಸ್ಥಳ ಹಂದಿಕಟ್ಟೆಬಾರೆಗೆ ತಮ್ಮ ಸಿಬ್ಬಂದಿಯೊಂದಿಗೆ ತೆರಳಿ ಏಕಾ ಏಕಿ ದಾಳಿ ನಡೆಸಿದರು.
ಕೆಲಸಗಾರರು ಪರಾರಿ: ದಾಳಿ ಸಂದರ್ಭದಲ್ಲಿ ಕಲ್ಲು ಬ್ಲಾಸ್ಟ್ ಮಾಡಲು ಬಳಸುವ ಕಂಪ್ರಸರ್ , ಟ್ರ್ಯಾಕ್ಟರ್ ಹಾಗೂ 15ಕ್ಕೂ ಹೆಚ್ಚು ಜನ ಕೆಲಸಗಾರರು ಟ್ರ್ಯಾಕ್ಟರ್‌ನಲ್ಲಿ ಜಲ್ಲಿ ತುಂಬುತ್ತಿದ್ದರು. ತಹಶೀಲ್ದಾರ್ ವಾಹನ ಕಂಡ ಜನರು ಕಂಪ್ರಸರ್ ಹಾಗೂ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾದರು.
22 ಎಕರೆಯಲ್ಲಿ ಅಕ್ರಮ ಗಣಿಗಾರಿಕೆ: ಅರಕಲ ಗೂಡು ಪಟ್ಟಣಕ್ಕೆ ಸೇರಿರುವ ತಾಲೂಕು ಕಚೇರಿ ಪೋಲೀಸ್ ಠಾಣೆಯಿಂದ 1.5 ಕಿ.ಮೀ. ದೂರದಲ್ಲಿ ಪ್ರತಿ ದಿನ ಬ್ಲಾಸ್ಟ್ ಮಾಡುತ್ತಿದ್ದರೂ ಶಬ್ಧ ಕೇಳಿದರು ಕೇಳದಂತೆ ಮೌನವಾಗಿದ್ದ ಅಧಿಕಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಪುಡಿ ರಾಜಕಾರಣಿ ಗಳು ಸರ್ಕಾರಿ ಭೂಮಿ ಸರ್ವೆ ನಂ 246ರಲ್ಲಿ 22 ಎಕರೆಯನ್ನು 8-10 ಜನರು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ಈ ವ್ಯಕ್ತಿಗಳು ಯಾರಿಗೂ ಹೆದರದೇ ರಾಜಾರೋಷವಾಗಿ ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಿದ್ದರೂ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಅಕ್ರಮ ಗಣಿಗಾರಿಕೆ ತಡೆಗೆ ಕ್ರಮ: ಸಾರ್ವಜನಿಕರ ದೂರಿನ ಮೇರೆಗೆ ಗಣಿಗಾರಿಕೆಯ ಮೇಲೆ ನಡೆಸಿದ ತಹಶೀಲ್ದಾರ್ ಗಣಿಗಾರಿಕೆ ಸ್ಥಳ ಕಂಡು ಆಶ್ಚರ್ಯಗೊಂಡರು. ಭೂಮಿಯ ಮಟ್ಟದಿಂದ 80 ರಿಂದ 90 ಅಡಿ ಭೂಮಿಯನ್ನು ಅಗೆದಿರುವು ದನ್ನು ಕಂಡುಕುಪಿತರಾದ ತಹಶೀಲ್ದಾರ್ ಈ ಗಣಿಗಾರಿಕೆ ನಡೆಸುತ್ತಿರುವ ವ್ಯಕ್ತಿ ಯಾರೇ ಆಗಿದ್ದರೂ ಪರವಾಗಿಲ್ಲ ಅಂತವರಿಗೆ ಬುದ್ದಿ ಕಲಿಸೋಣ, ಇವರ ಮೇಲೆ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿ ಮುಂದೆ ಈ ಸ್ಥಳಕ್ಕೆ ವಾಹನಗಳು ಬರದಂತೆ ಸಂಪರ್ಕ ರಸ್ತೆಗಳನ್ನು ಗುಂಡಿ ತೆಗೆಸಿ ಕಡಿವಾಣ ಹಾಕೋಣ ಎಂದು ಕಂದಾಯಾಧಿಕಾರಿ ಶಿವಕುಮಾರ್ ಅವರಿಗೆ ಆದೇಶಿಸಿದರು.
ಪೊಲೀಸರಿಗಾಗಿ ಕಾಯ್ದ ತಹಶೀಲ್ದಾರ್: ಗಣಿಗಾರಿಕೆ ಸ್ಥಳಕ್ಕೆ ದಾಳಿ ನಡೆಸಿದ ನಂತರ ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲು ಸ್ಥಳಕ್ಕೆ ಪೋಲೀಸರನ್ನು ಬರುವಂತೆ ದೂರವಾಣಿ ಮೂಲಕ ತಿಳಿಸಿದರು. ಆದರೆ ಪೋಲೀಸರ ಬರುವಿಕೆಗಾಗಿ 2 ಗಂಟೆಗಳ ಕಾಲ ಸ್ಥಳದಲ್ಲೇ ಕಾದು ಕುಳಿತರು ಬರಲಿಲ್ಲ. ನಂತರ ಬಂದ ಒಬ್ಬರು ದೆಫೇದಾರ್ ಬಂದರು.
ಕಣ್ಣೊರೆಸುವ ನಾಟಕ? ಗಣಿಗಾರಿಕೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ಸುತ್ತಮುತ್ತಲಿನ ಸಾರ್ವಜನಿಕರು ಎಷ್ಟು ವರ್ಷಗಳಿಂದ ಇದರಿಂದ ತೊಂದರೆಗೆ ಒಳಗಾಗಿ ಇದರ ವಿರುದ್ಧ ಧ್ವನಿ ಎತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ದೂರು ನೀಡಿದರೆ ಅದೇ ಅಧಿಕಾರಿಗಳು ಗಣಿಗಾರಿಕೆ ಮಾಡುವವರಿಗೆ ಇಂತಹ ವ್ಯಕ್ತಿ ದೂರು ನೀಡಿದ್ದಾನೆ ಎಂದು ತಿಳಿಸಿ ದೂರು ನೀಡಿದವರ ಮೇಲೆ ಗಲಾಟೆಯನ್ನು ಮಾಡಿರುವ ಅನೇಕ ನಿದರ್ಶನ ಗಳಿವೆ. ನಮ್ಮ ಜಮೀನಿನಲ್ಲಿ ವ್ಯವಸಾಯ ನಿಲ್ಲಿಸಿ ಎಷ್ಟೋ ವರ್ಷಗಳು ಕಳೆದಿದೆ. ಅರೆಮಾದನಹಳ್ಳಿ, ಅಡಿಕೆಬೊಮ್ಮನಹಳ್ಳಿ, ಕೋಟೆಹಿಂದಲ ಕೊಪ್ಪಲು, ಎ.ಡಿ.ಕಾಲೋನಿಗಳ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಮೌನವಾಗಿರುವ ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ದಾಳಿ ನಡೆಸಿದ್ದಾ ರಂದು ಸ್ಥಳೀಯರು ಆಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.