ಎಲ್ಲೆಂದರಲ್ಲಿ ಗಂಡು ಕರು ಬಿಟ್ಟು ಹೋಗುತ್ತಿರುವ ಜನ
Team Udayavani, Apr 19, 2021, 3:46 PM IST
ಜಾವಗಲ್: ಜಿಲ್ಲೆಯಲ್ಲಿ ಅಶಕ್ತ ಹಾಗೂ ರೈತರಿಗೆಬೇಡವಾದ ವಯಸ್ಸಾದ ಗೋವುಗಳು, ಹೈಬ್ರಿಡ್‌ಕರುಗಳು ಬೀದಿಗೆ ಬೀಳುತ್ತಿವೆ.ಗೋವುಗಳು ಕಸಾಯಿಖಾನೆಗಳಿಗೆ ಸಾಗಣೆತಡೆಯಲು ಸರ್ಕಾರ ಗೋಹತ್ಯೆ ನಿಷೇಧಕಾಯ್ದೆಯನ್ನು ಜಾರಿಗೊಳಿಸಿದೆ. ಬಹುಸಂಖ್ಯಾತಸಮುದಾಯ ಸರ್ಕಾರದ ನಿರ್ಧಾರವನ್ನುಸ್ವಾಗತಿಸಿತ್ತು.
ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲೂಒಂದೊಂದು ಗೋಶಾಲೆ ತೆರೆಯುವ ಪ್ರಯತ್ನಆರಂಭವಾದರೂ ಇದುವರೆಗೂ ಗೋಶಾಲೆಗಳುಆರಂಭವಾಗಿಲ್ಲ. ಜಾನುವಾರುಗಳ ಸಂತೆ ಸ್ಥಳದಲ್ಲಿಅಶಕ್ತ ಹಾಗೂ ಸಿಂಧಿ ತಳಿಯ ಹೋರಿ ಕರುಗಳುಅನಾಥವಾಗಿ ಓಡಾಡುವುದು ಸಾಮಾನ್ಯವಾಗಿದೆ.ಮೇವಿನ ವ್ಯವಸ್ಥೆ ಮಾಡಿ: ಜಾವಗಲ್ ಹೋಬಳಿಬಂದೂರು ಗ್ರಾಮದಲ್ಲಿ ನವಜಾತ ಸಿಂದಿ ಹೋರಿಕರುಗಳನ್ನು(ಗಂಡು) ಜಾನುವಾರು ಮಾಲಿಕರುರಸ್ತೆಬದಿ ಪೊದೆಗಳಲ್ಲಿ, ಬೇಲಿಸಾಲುಗಳಲ್ಲಿ ಅನಾಥವಾಗಿ ಬಿಟ್ಟುಹೋಗುತ್ತಿರುವ ಘಟನೆ ನಡೆಯುತ್ತಿದೆ.
ಬಂದೂರು ಗ್ರಾಮದ ವಿವೇಕನಂದ ಯುವಕಸಂಘದ ಅಧ್ಯಕ್ಷ ಬಿ.ಎಸ್ ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಾರದಲ್ಲಿ 2-3 ಇಂತಹ ಘಟನೆಗಳು ಗ್ರಾಮದಲ್ಲಿ ನಡೆಯುತ್ತಿದ್ದು, ಮೂಖಪ್ರಾಣಿಗಳನ್ನು ಗೋಶಾಲೆಗೆಬಿಟ್ಟು ಬರಲು ಸಾಧ್ಯವಾಗುತ್ತಿಲ್ಲ. ಕೂಡಲೇ ಜಿಲ್ಲಾಆಡಳಿತ ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಿಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಗೋಶಾಲೆನಿರ್ಮಿಸಿ ನವಜಾತ ಗಂಡು ಕರು, ವಯಸ್ಸಾದಜಾನುವಾರುಗಳಿಗೆ ನೀರು ,ಮೇವಿನ ವ್ಯವಸ್ಥೆಮಾಡಲು ಆಗ್ರಹಿಸಿದ್ದಾರೆ.
ಯಂತ್ರಗಳು: ಹೈಬ್ರಿಡ್ ತಳಿಯ ಹೋರಿ ಕರುಗಳಬೆಳೆದ ನಂತರ ಉಳುಮೆಗೆ ಈ ಹಿಂದೆ ರೈತರುಬಳಸುತ್ತಿದ್ದರು. ಈಗ ಕೃಷಿಯಲ್ಲಿ ಯಾಂತ್ರೀಕರಣದಅವಲಂಬನೆ ಹೆಚ್ಚಾಗಿರುವುದರಿಂದ ಉಳುಮೆಗಾಗಿಜಾನುವಾರುಗಳನ್ನು ಸಾಕುವುದನ್ನೇ ರೈತರು ಕೈಬಿಟ್ಟಿದ್ದಾರೆ. ಹಾಲು ಉತ್ಪಾದನೆಗೆ ಮಾತ್ರ ಹಸುಸಾಕುವ ಪದ್ಧತಿ ಹೆಚ್ಚಿದೆ.ಗೋ ಶಾಲೆಗಳು ಪ್ರಾರಂಭವಾದರೂ ಈ ಸಮಸ್ಯೆಪರಿಹಾರವಾಗುವ ನಿರೀಕ್ಷೆಯಿಲ್ಲ.
ರೈತರಿಗೆ ಬೇಡವಾದ ಸಾವಿರಾರು ಜಾನುವಾರುಗಳಿಗೆ ಜಿಲ್ಲೆಗೊಂದುಗೋ ಶಾಲೆಯಲ್ಲಿ ಸಾಕುವುದಾದರೂ ಹೇಗೆ?ಅಂತೂ ಹೈಬ್ರಿàಡ್ ಹಸುಗಳ ಹೋರಿ ಕರುಗಳಭವಿಷ್ಯವಂತೂ ಚಿಂತಾಜನಕ.ಬೀದಿಗಳಲ್ಲೇ ನಾಯಿಗಳ ಪಾಲಾಗುತ್ತಿವೆಗೋ ಹತ್ಯೆ ಕಾಯ್ದೆ ಜಾರಿಯಾಗಿರುವುದರಿಂದ ಕಾಯ್ದೆ ಉಲ್ಲಂ ಸಿದರೆ ಕಠಿಣಕ್ರಮ ಎದುರಿಸಬೇಕಾದ ಹೆದರಿಕೆಯಿಂದ ರೈತರು ಹೈಬ್ರಿàಡ್ ತಳಿಯ ಹೋರಿಕರುಗಳನ್ನು ಬಹಿರಂಗವಾಗಿ ಮಾರಾಟ ಮಾಡಲು ಮುಂದಾಗುತ್ತಿಲ್ಲ.ಖರೀದಿಸುವವರೂ ಮುಂದೆ ಬರುತ್ತಿಲ್ಲ. ರೈತರು ಹೈಬ್ರಿàಡ್ ತಳಿಯ ಹೋರಿಕರುಗಳನ್ನು ಮನೆಯಿಂದ ಹೊರ ಹಾಕುತ್ತಿದ್ದಾರೆ.
ಕೆಲವರು ಕದ್ದು ಮುಚ್ಚಿಮಾರಾಟ ಮಾಡಲು ಜಾನುವಾರು ಸಂತೆಗೆ ತಂದರೆ ಮಾರಾಟವಾಗದಿದ್ದಾಗಸಂತೆ ಮೈದಾನದಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ಇಲ್ಲದಿದ್ದರೆ ನಾಯಿಗಳಪಾಲಾಗುತ್ತಿವೆ. ಇಲ್ಲವೇ ಬಿಡಾಡಿ ದನಗಳಾಗಿ ಸಮಸ್ಯೆ ಸೃಷ್ಟಿಯಾಗುತ್ತಿದ್ದು,ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.
ರವಿಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.