ಕ್ಯಾಂಟರ್ ಡಿಕ್ಕಿ : ಪೆಟ್ಟಿಗೆ ಅಂಗಡಿ ಧ್ವಂಸ
Team Udayavani, May 27, 2021, 7:24 PM IST
ಸಕಲೇಶಪುರ: ಕ್ಯಾಂಟರ್ ಲಾರಿಯೊಂದುಚಾಲಕನ ನಿರ್ಲಕ್ಷ್ಯದ ಪರಿಣಾಮ ಡಿಕ್ಕಿಹೊಡೆದ ಪರಿಣಾಮ ಎರಡು ಪೆಟ್ಟಿಗೆ ಅಂಗಡಿಗಳು ಧ್ವಂಸವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ತೇಜಸ್ವಿ ಚಿತ್ರಮಂದಿರದ ಸಮೀಪ ಮಂಗಳವಾರ ರಾತ್ರಿ1.30ರ ಸಮಯದಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕ್ಯಾಂಟರ್‌ಲಾರಿಯೊಂದು ಚಾಲಕನ ನಿರ್ಲಕ್ಷ್ಯದ ಪರಿಣಾಮ ವೇಗವಾಗಿ ಬಂದು ಹೆದ್ದಾರಿ ಬದಿಯಲ್ಲಿದ್ದ ಎರಡು ಪೆಟ್ಟಿಗೆ ಅಂಗಡಿಗಳಿಗೆನುಗ್ಗಿದ ಪರಿಣಾಮ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಜೊತೆಗೆ ವಿದ್ಯುತ್‌ಕಂಬವೊಂದು ಮುರಿದು ಬಿದ್ದಿದೆ.
ಈ ಸಮಯದಲ್ಲಿ ಪೆಟ್ಟಿಗೆ ಅಂಗಡಿಯಹಿಂಭಾಗದಲ್ಲಿ ನಾಗರಾಜ್ ಹಾಗೂ ಅವರ ಪತ್ನಿಇದ್ದಿದ್ದು ಅದೃಷ್ಟವಷಾತ್ ಅವರಿಗೆ ಯಾವುದೇಅಪಾಯ ಸಂಭವಿಸಿಲ್ಲ. ಕ್ಯಾಂಟರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿದ್ಯುತ್ ಕಂಬಬಿದ್ದಿದ್ದರಿಂದ ದಿನವಿಡೀ ಪಟ್ಟಣದ ಕೆಲವುಬಡಾವಣೆಗಳಿಗೆ ವಿದ್ಯುತ್ ಪೂರೈಕೆ ಇರಲಿಲ್ಲ.ನಂತರ ಚೆಸ್ಕಾಂ ಸಿಬ್ಬಂದಿಗಳು ದಿನವಿಡೀ ಕೆಲಸಮಾಡಿ ವಿದ್ಯುತ್ ಸಂಪರ್ಕ ನೀಡಿದರು. ತೇಜಸ್ವಿಚಿತ್ರಮಂದಿರ ಸಮೀಪ ರಾಷ್ಟ್ರೀಯ ಹೆದ್ದಾರಿ75 ಹಾಗೂ ಸಕಲೇಶಪುರ-ಬೇಲೂರು ರಾಜ್ಯಹೆದ್ದಾರಿಯಿಂದ ಬರುವ ವಾಹನಗಳುಒಂದೆಡೆಗೆ ಹೋಗಬೇಕಾಗಿದ್ದು, ಈ ವೃತ್ತವುಸಂಪೂರ್ಣ ಕಿರಿದಾಗಿರುವುದರಿಂದಅಪಘಾತಗಳು ಸಾಮಾನ್ಯವಾಗಿದೆ. ಕೂಡಲೇಈ ವೃತ್ತವನ್ನು ಅಗಲೀಕರಿಸಲು ತಾಲೂಕುಆಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ನಗರಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Enquiry: ತನ್ನದೇ ವೀಡಿಯೋ ಕೋರ್ಟ್‌ನಲ್ಲಿ ವೀಕ್ಷಿಸಲು ಮಾಜಿ ಸಂಸದ ಪ್ರಜ್ವಲ್‌ಗೆ ಅನುಮತಿ
Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ?
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ