ಹೆಂಡತಿ ಸತ್ತು ವರ್ಷದೊಳಗೆ ಅಪ್ರಾಪ್ತೆ ಜತೆ ವಿವಾಹ: ಬಂಧನ
Team Udayavani, Jun 6, 2021, 5:15 PM IST
ಆಲೂರು: ಹೆಂಡತಿ ಸತ್ತು ವರ್ಷದೊಳಗೆ ಮನೆಗೆ ಮತ್ತೂಬ್ಬಳು ಮಡದಿ ಬರಲೆಂಬ ದುರಾಸೆಯೊಂದಿಗೆ ಅಪ್ರಾಪ್ತೆಯನ್ನುಮದುವೆಯಾಗಲು ಹೋಗಿದ್ದ ವ್ಯಕ್ತಿಯೋರ್ವ ಕೊನೆಗೆ ಜೈಲುಪಾಲಾಗಿರೋ ಘಟನೆ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.
ಅರಕಲಗೂಡು ತಾಲೂಕು ದೊಡ್ಡಗಾವನಹಳ್ಳಿ ಯೋಗೇಶ್ ಗೌಡ(47) ಅಪ್ರಾಪ್ತೆಯನ್ನು ಮದುವೆಯಾಗಿರೋ ಆರೋಪಿಯಾಗಿದ್ದು, ವರ್ಷದ ಹಿಂದೆ ಈತನ ಪತ್ನಿ ಅಕಾಲಿಕ ಮರಣಕ್ಕೆತುತ್ತಾಗಿದ್ದಳು. ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನಡೆಯಬೇಕೆಂಬ ಸಂಪ್ರದಾಯದ ಹಿನ್ನೆಲೆಯಲ್ಲಿ ಈತ ಈಗ ಅಪ್ರಾಪ್ತೆಯನ್ನು ಮದುವೆಯಾಗಿದ್ದು, ಸದ್ಯ ಮದುವೆಯಾಗಿರೋ ಆ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಯೋಗೇಶ್ ಗೌಡ ಅರಣ್ಯ ಇಲಾಖೆಯಲ್ಲಿ ಹೊರ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು, ದಾವಣಗೆರೆ ಮೂಲದ ಅಪ್ರಾಪ್ತೆಗೆ ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಬಳಿಕ ಆಲೂರು ತಾಲೂಕಿನ ಮುದಿಗೆರೆ ಗ್ರಾಮದ ದೇವಾಲಯವೊಂದರಲ್ಲಿ ಮದುವೆ ಯಾಗಿದ್ದಾನೆ ಎನ್ನಲಾಗಿದೆ.
ಯೋಗೇಶ್ ಗೌಡಗೆ ಈಗಾಗಲೇ ಮದುವೆ ವಯಸ್ಸಿಗೆ ಬಂದಿರೋ ಮಗಳಿದ್ದು, ಮಗಳ ಮದುವೆ ಕೂಡ ಜುಲೈತಿಂಗಳಲ್ಲಿ ನಿಶ್ಚಯವಾಗಿತ್ತು. ಮಗಳ ಮದುವೆಗೂ ಮುನ್ನ ಈತ ಅಪ್ರಾಪೆ¤ಯನ್ನು ಮದುವೆಯಾಗಿ ಮನೆ ತುಂಬಿಸಿಕೊಳ್ಳುವಷ್ಟರಲ್ಲಿ ವಿಚಾರ ತಿಳಿದ ಅಧಿಕಾರಿಗಳು, ದಾಳಿ ನಡೆಸಿ ಸದ್ಯ ಬಾಲಕಿಯನ್ನುರಕ್ಷಣೆ ಮಾಡಿದ್ದಾರೆ. ಯೋಗೇಶ್ ಗೌಡ ವಿರುದ್ಧ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರುತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.