ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ
Team Udayavani, Feb 6, 2020, 3:00 AM IST
ಹಳೇಬೀಡು: ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ. ಎಸ್.ಕಿರಣ್ ಕುಮಾರ್ ಹೇಳಿದರು. ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಐದನೇ ದಿನದ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶದ ಬಗ್ಗೆ ಉಪನ್ಯಾಸ ನೀಡಿದರು.
ರಾಕೇಟ್ ಎಂಜಿನ್, ತಯಾರಿಕೆಯಲ್ಲಿ ಇತರೆ ರಾಷ್ಟ್ರಗಳು ಮುಂದಿದ್ದರೂ ಉಪಗ್ರಹದ ತಂತ್ರಜ್ಞಾನವನ್ನು ಸಾಮಜಿಕ ಜಾಲತಾಣ ವ್ಯವಸ್ಥೆಯಲ್ಲಿ ಬಳಸಿಕೊಂಡು ಶ್ರೀಸಾಮಾನ್ಯರಿಗೂ ತಂತ್ರಜ್ಞಾನದ ಉಪಯೋಗ ಬಳಕೆಯಾಗುವಂತೆ ಮಾಡಿದ್ದೇವೆ ಎಟಿಎಂ, ಹವಾಮಾನ ಮುನ್ಸೂಚನೆ, ಟೀವಿ, ಮೊಬೈಲ್ ಮೊದಲಾದ ದಿನನಿತ್ಯದ ಬಳಕೆಯಲ್ಲಿ ಉಪಗ್ರಹ ತಂತ್ರಜ್ಞಾನ ಉಪಯೋಗಿಸುತ್ತಿದ್ದೇವೆ ಎಂದರು.
ಇಸ್ರೋ ಸಾಧನೆ: ಮೊದಲು ಚಂದ್ರಯಾನ ಸಂದರ್ಭದಲ್ಲಿ ಚಂದ್ರನ ಮೇಲೆ ನೀರಿನ ಅಂಶ ಇದೆ ಎಂದು ಪತ್ತೆ ಮಾಡಿದ್ದು , ನಮ್ಮ ದೇಶದ ಉಪಗ್ರಹ. ಮಂಗಳ ಗ್ರಹದ ಕಕ್ಷೆಗೆ ಸೇರಿಸಿದ್ದು, ನಮ್ಮ ದೇಶಲ್ಲಿ ತಯಾರಾದ ಉಪಗ್ರದಿಂದ ಎಂಬುದು ಹೆಮ್ಮೆಯ ವಿಚಾರ ಎಂದು. ಇತ್ತೀಚಿನ ದಿನಗಳಲ್ಲಿ ಉಪಗ್ರಗಹದಿಂದ ದೇಶದಲ್ಲಿ ಮುಂದೆ ಸಂಭವಿಸುವ ನೈಸರ್ಗಿಕ ಅವಗಢಗಳನ್ನು ಪತ್ತೆ ಮಾಡಬಹುದಾಗಿದೆ.
ಮೀನುಗಾರರು, ಯಾವ ಭಾಗಕ್ಕೆ ಹೋದರೆ ಹೆಚ್ಚು ಮೀನು ಸಿಗುತ್ತದೆ ಎಂಬ ಖಚಿತ ಮಾಹಿತಿಯನ್ನು ಉಪಗ್ರಹ ಒದಗಿಸುತ್ತದೆ ಇದರಿಂದ ಮೀನುಗಾರರ ಸಮಯ ಹಾಗೂ ವರ್ಷಕ್ಕೆ 15ರಿಂದ 20 ಸಾವಿರ ಕೋಟಿ ರೂ.ಗಳಷ್ಟು ಹಣ, ಪೆಟ್ರೋಲ್, ಡೀಸೆಲ್ ಖರ್ಚಾಗುವುದು ಉಳಿಯುತ್ತಿದೆ ಎಂದು ಹೇಳಿದರು.
ತಂತ್ರಜ್ಞಾನ ಆವಿಷ್ಕಾರ ಅಗತ್ಯ: ಭಾರತ ದೇಶ ಆರ್ಥಿಕವಾಗಿ ಐದನೇ ಅತಿ ದೊಡ್ಡ ರಾಷ್ಟ್ರಗಳ ಪಟ್ಟಿಯಲ್ಲಿದ್ದು, ಮೊದಲನೇ ಸ್ಥಾನಕ್ಕೆ ಬರಬೇಕಾದರೆ ದೇಶದ ಯುವಜನತೆ, ತಂತ್ರಜ್ಞಾನ ಬಳಸಿಕೊಂಡು ಹೊಸ ಆವಿಷ್ಕಾರ ಮಾಡಲು ಮುಂದಾಗಬೇಕು. ವಿಜ್ಞಾನದ ಜತೆಗೆ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು.
ಎಲ್ಲಾ ಜಾತಿ ಧರ್ಮವರು ಒಟ್ಟಾಗಿ ಜೀವನ ನಡೆಸಿದರೆ ನಮ್ಮ ದೇಶದ ಏಳಿಗೆ ಸಾದ್ಯ ಎಂಬುದು ತರಳಬಾಳು ಶ್ರೀಗಳ ಆಶಯವಾಗಿದ್ದು, ಅದರಂತೆ ನಾವು ಜೀವನ ನಡೆಸಬೇಕು ಎಂದು ತಿಳಿಸಿದರು. ಹಳೇಬೀಡು ಪೋಟೊ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ. ಎಸ್ .ಕಿರಣ್ ಕುಮಾರ್ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.