ಐಟಿ ಅಧಿಕಾರಿಗಳ ಆಗಮನ: ಮಳಿಗೆ ಬಂದ್ ಮಾಡಿ ನಾಪತ್ತೆ
Team Udayavani, Sep 10, 2021, 3:36 PM IST
ಹೊಳೆನರಸೀಪುರ: ಪಟ್ಟಣಕ್ಕೆ ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆ ಕಮೀಷನರ್ ಏಕಾಏಕಿ ಆಗಮನ ಹಿನ್ನೆಲೆಯಲ್ಲಿ ಹೆದರಿದ ಪಟ್ಟಣದ ವರ್ತಕರು ತಮ್ಮ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ನಾಪತ್ತೆಯಾದರು.
ಗೌರಿ ಹಬ್ಬದ ದಿನವಾದ ಗುರುವಾರ ಹಾಸನ ಜಿಲ್ಲಾ ವಾಣಿಜ್ಯ ಇಲಾಖೆ ಕಮೀಷನರ್ ಭರತೇಶ್ ಅವರು ಏಕಾಏಕಿ ಪಟ್ಟಣಕ್ಕೆ ಆಗಮಿಸಿ ಕೆಲ
ಅಂಗಡಿಗಳಿಗೆದಾಳಿಮಾಡಿದವಿಷಯ ತಿಳಿದಮುಖ್ಯ ರಸ್ತೆಯ ಚಿನ್ನ ಬೆಳ್ಳಿ, ಜವಳಿ ವರ್ತಕರು ಹಾಗೂ ಇನ್ನಿತರೆ ಅಂಗಡಿ ಮಾಲಿಕರು, ಅಧಿಕಾರಿಗಳ ದಾಳಿಗೆ ಬೆದರಿ ಏಕಾಏಕಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಕೆಲವೇ ನಿಮಿಷಗಳಲ್ಲಿಕಣ್ಮರೆ ಆದರು.
ಪರಿಶೀಲಿಸಿದರು:ಆದರೆ, ಕೆಲ ವರ್ತಕರು ತಮ್ಮ ಎಂದಿನ ವಹಿವಾಟು ಮಾಡುತ್ತಕುಳಿತಿದ್ದರು. ವಾಣಿಜ್ಯ ಇಲಾಖೆ ಅಧಿಕಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಗಳಿಗೆ ತೆರಳಿ ಜಿಎಸ್‌ಟಿ ನೋಂದಣಿ ಮತ್ತು ವ್ಯಾಪಾರದ ಸರಕಿಗೆ ಬಿಲ್ ಅನ್ನು ಗ್ರಾಹಕರಿಗೆ ನೀಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿದರೆಂದು ಗೊತ್ತಾಗಿದೆ.
ಇದನ್ನೂ ಓದಿ:ಭವಾನಿಪುರ ಉ.ಚುನಾವಣೆ: ನಾಮಪತ್ರ ಸಲ್ಲಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಚರ್ಚೆ: ವಾಣಿಜ್ಯ ಇಲಾಖೆ ಅಧಿಕಾರಿಗಳ ಆಗಮನದಿಂದ ವರ್ತಕರು ತಮ್ಮ ವಹಿವಾಟು ಮೊಟಕು ಗೊಳಿಸಿದ ವಿಷಯ ತಿಳಿದ ವರ್ತಕರ ಸಂಘದ ಕಾರ್ಯದರ್ಶಿ ಕೆ.ಎಸ್.ಭರತ್‌ಕುಮಾರ್ ಮಧ್ಯೆ ಪ್ರವೇಶಿಸಿ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ಅಲ್ಲದೇ, ಕಳೆದ 3-4ತಿಂಗಳಿಂದ
ಕೋವಿಡ್ ಆರ್ಭಟದಲ್ಲಿ ವ್ಯಾಪಾರ ವಹಿವಾಟು ಇಲ್ಲದೆ ವರ್ತಕರು ಬಸವಳಿದು ಕುಳಿತು ಜೀವನ ನಡೆಸುವುದೇ ಕಷ್ಟವಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳಾದ ತಾವುಗಳು ಏಕಾಏಕಿ ಪಟ್ಟಣಕ್ಕೆ ಆಗಮಿಸಿದ್ದು ಬಹುತೇಕ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿದ್ದಾರೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟರೆಂದು ಗೊತ್ತಾಗಿದೆ. ಆಗ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಪಟ್ಟಣದಲ್ಲಿನ ಕೆಲ ವರ್ತಕರು ಜಿಎಸ್‌ಟಿ ನೋಂದಣಿ ಮಾಡಿಸದೆ ವಹಿವಾಟು ನಡೆಸುತ್ತಿದ್ದಾರಾ, ಅಥವಾ ಗ್ರಾಹಕರಿಗೆ ಬಿಲ್ ನೀಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ತಾವು ಬಂದಿರುವುದಾಗಿ ಮಾಹಿತಿ ನೀಡಿದರು.
ತೊಂದರೆ ನೀಡುವ
ಉದ್ದೇಶವಿಲ್ಲ: ಸ್ಪಷ್ಟನೆ
ಹಬ್ಬದ ದಿನಗಳಾದ ವ್ಯಾಪಾರ ವಹಿವಾಟಿಗೆ ತೊಂದರೆ ನೀಡಬೇಕೆಂಬ ಉದ್ದೇಶ ನಮ್ಮದಲ್ಲ. ನಮಗೂನಮ್ಮ ಮೇಲಿನ ಅಧಿಕಾರಿಗಳ ಸೂಚನೆ ಮೇರೆಗೆ ಬಂದಿದ್ದೇವೆ. ತಾವು ಮುಂದಿನ ವಾರ ಪಟ್ಟಣಕ್ಕೆ ಆಗಮಿಸಿ ವರ್ತಕರಲ್ಲಿನ ಜಿಎಸ್‌ಟಿಮತ್ತಿತರೆ ತನಿಖೆ ಮಾಡುವುದಾಗಿ ವರ್ತಕ ರಲ್ಲಿ ಅರಿವು ಮೂಡಿಸುತ್ತೇವೆಂದರು. ಇನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಪಟ್ಟಣದಿಂದ ಹೊರಹೋಗುತ್ತಿದ್ದಂತೆ ಮುಚ್ಚಿದ್ದ ಅಂಗಡ ಮುಂಗಟ್ಟುಗಳು ಪುನಃ ತೆರೆದು ವರ್ತಕರು ತಮ್ಮ ವಹಿವಾಟು ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.