ಜಮೀನಿಗೆ ರಸ್ತೆ ಬಿಡುವ ವಿಚಾರ: ಜೆಡಿಎಸ್-ಬಿಜೆಪಿ ಘರ್ಷಣೆ
Team Udayavani, Apr 14, 2021, 11:48 AM IST
ಅರಸೀಕೆರೆ: ಜಮೀನಿಗೆ ದಾರಿ ಬಿಡುವ ವಿಚಾರ ಸಂಬಂಧ ಬಿಜೆಪಿ-ಜೆಡಿಎಸ್ ಕಾರ್ಯಕರ್ತರನಡುವೆ ಪರಸ್ಪರ ಮಾತಿನ ವಾಗ್ವಾದ ನಡೆದುತೋಟದ ಒಂಟಿ ಮನೆಯ ಮೇಲೆ ಏಕಾಏಕಿ ದಾಳಿನಡೆಸಿರುವ ಗುಂಪು, ಮನೆಯ ಕಿಟಿಕಿ ಬಾಗಿಲುಗಳ ಗಾಜುಗಳನ್ನು ಕಲ್ಲಿನಿಂದ ಪುಡಿಪುಡಿ ಮಾಡಿ ಮೋಟಾರ್ ಬೈಕ್, ಕಾರಿನ ಗಾಜುಗಳಿಗೂ ಹಾನಿ ಮಾಡಿರುವ ಘಟನೆ ಭಾನುವಾರ ರಾತ್ರಿ ತಾಲೂಕಿನ ಕಣಕಟ್ಟೆ ಹೋಬಳಿ ರಾಂಪುರ ಗ್ರಾಮದಲ್ಲಿ ನಡೆದಿದೆ.
ಜೀವ ರಕ್ಷಣೆ: ಘಟನೆ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬಿಜೆಪಿ ಕಾರ್ಯಕರ್ತರಾದ ಶೇಖರಪ್ಪ ಹಾಗೂ ಪತ್ನಿಮಮತಾ ಸುದ್ದಿಗಾರರೊಂದಿಗೆ ಮಾತನಾಡಿ,ಭಾನುವಾರ ಸಂಜೆ 6.30ರಲ್ಲಿ ಬೈಕ್‌ನಲ್ಲಿ ಬರುತ್ತಿದ್ದವೇಳೆ ರಾಂಪುರ ಗ್ರಾಪಂ ಅಧ್ಯಕ್ಷ ಆರ್.ಈ. ಸುರೇಶ್‌ಟಾಟಾ ಸುಮೋದಲ್ಲಿ ವೇಗವಾಗಿ ಬಂದು ಅಡ್ಡಗಟ್ಟಿ ಜಮೀನಿನ ರಸ್ತೆ ವಿಷಯದಲ್ಲಿ ವಾಗ್ವಾದಕ್ಕೆ ಇಳಿದರು. ಬಳಿಕ, ರಾತ್ರಿ ಸುಮಾರು 8.15ರ ವೇಳೆ ಆರ್.ಈ. ಸುರೇಶ್ ಹಾಗೂ ಪುನೀತ್ ಎಂಬವರ ಜತೆಗೆ ನೂರಾರು ಮಂದಿ ಮನೆ ಮುಂಭಾಗದಗೇಟ್ ಮುರಿದರು. ಕಿಟಿಕಿಗಳ ಗಾಜುಗಳನ್ನು
ಕಲ್ಲಿನಿಂದ ಪುಡಿಪುಡಿ ಮಾಡಿದರು. ಬಾಗಿಲು ತೆರೆಯದಿದ್ದರೇ ಪೆಟ್ರೊಲ್ ಸುರಿದು ಸುಟ್ಟು ಹಾಕುತ್ತೇವೆಂದು ಆರೋಪಿಗಳು ತಿಳಿಸಿ ದರು. ಈವೇಳೆ ಮೂವರು ಪುರುಷರು, ಏಳು ಮಂದಿಹೆಂಗಸರು ಮತ್ತು ಸಣ್ಣ ಮಕ್ಕಳು ಇದ್ದ ಕಾರಣಪ್ರಾಣ ಭಯದಿಂದ ಕೂಗಾಡಿದರೂ ಯಾರಿಗೂ ಕೇಳಿಸಲಿಲ್ಲ, ಮುನ್ನೆಚ್ಚರಿಕೆಯಿಂದ ಗ್ರಾಮಾಂತರ ಠಾಣೆಗೆ ಸುದ್ದಿ ಮುಟ್ಟಿಸಿದ್ದ ಕಾರಣ ಪೊಲೀಸರು ಆಗಮಿಸಿ ರಕ್ಷಣೆ ನೀಡಿದರು. ಈ ವೇಳೆಆರೋಪಿಗಳ ಗುಂಪು ಪರಾರಿಯಾಗಿದ್ದು, ನಮ್ಮಗಳ ಜೀವ ರಕ್ಷಣೆ ಆಗಿದೆ ಎಂದು ದಂಪತಿ ನುಡಿದರು.
ದೃಶ್ಯಾವಳಿ ದಾಖಲು: ಶೇಖರಪ್ಪ ಮಾತನಾಡಿ, ಇತ್ತೀಚೆಗೆ ತಾವು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಜತೆಗೆಗುರುತಿಸಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿ ದ್ದನ್ನೇ ಸಹಿಸದೆ ರಾಂಪುರ ಗ್ರಾಪಂ ಅಧ್ಯಕ್ಷರಾದ ಆರ್.ಈ.ಸುರೇಶ್ ಸಂಗಡಿಗರ ಗುಂಪು, ರಾಜ ಕೀಯ ಪ್ರೇರಿತವಾಗಿ ಪ್ರಾಣಾಂತಿಕ ಹಲ್ಲೆಗೆ ವಿಫಲ ಪ್ರಯತ್ನ ಮಾಡಿದೆ. ದೃಶ್ಯಗಳು ಮನೆ ಮುಂದಿನ ಸಿ.ಸಿ.ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಎಲ್ಲವನ್ನೂಪೊಲೀಸರಿಗೆ ನೀಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎನ್.ಆರ್.ಸಂತೋಷ್ ಮಾತನಾಡಿ, ಈ ಹಿಂದೆಇದೇ ಆರ್.ಈ.ಸುರೇಶ್ ಮತ್ತು ಸಂಗಡಿಗರಗುಂಪು ಮೇಳೇನಹಳ್ಳಿ ಗೊಲ್ಲರಹಟ್ಟಿ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು ಎಂದರು.
ಯಾವುದೇ ತಪ್ಪು ಮಾಡಿಲ್ಲ: ರಾಂಪುರ ಗ್ರಾಪಂ ಅಧ್ಯಕ್ಷ ಆರ್.ಈ.ಸುರೇಶ್ ಮಾತನಾಡಿ, ಭಾನುವಾರ ಸಂಜೆ ನಾವು ಟಾಟಾ ಸುಮೋದಲ್ಲಿ ಜೆ.ಸಿ. ಪುರದಿಂದ ರಾಂಪುರಕ್ಕೆ ಹೋಗುವಾಗ ರಸ್ತೆ ಮಧ್ಯೆ ಅಡ್ಡಗಟ್ಟಿದಮಮತಾ, ಶೇಖರಪ್ಪ ನಮ್ಮ ಜಮೀನಿನಲ್ಲಿ ಏಕೆ ಬಂದಿರಿ ಎಂದು ನಿಂದಿಸಿದರು.
ನಂತರ ತಾನು ಮನೆಗೆ ಹಿಂದಿರುಗಿ ಜಮೀನಿನ ಬಳಿ ಬೈಕ್‌ನಲ್ಲಿಹೋಗಿದ್ದಾಗ ಅಲ್ಲಿಗೆ ತಮ್ಮ ಬೆಂಬಲಿಗರ ಜತೆ ಬಂದಅವರು, ಬೈಕ್ ಜಖಂಗೊಳಿಸಿ ಹಲ್ಲೆ ನಡೆಸಿದ್ದಾರೆ.ಆಸ್ಪತ್ರೆಗೆ ಸೇರಲು ನಗರಕ್ಕೆ ಬಂದಾಗ ತನ್ನ ಮೇಲೆ ಹಲ್ಲೆನಡೆದ ವಿಚಾರ ತಿಳಿದು ಗ್ರಾಮಸ್ಥರು ರೊಚ್ಚಿಗೆದ್ದು, ಈರೀತಿ ನಡೆಸಿರಬಹುದು. ನಮ್ಮ ಬೆಂಬಲಿಗರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ ಎಂದರು.
ರಾಜಕೀಯ ಬಣ್ಣ ಬೇಡ: ನಗರದ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜೆಡಿಎಸ್ ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಶಾಂತಿ ಕದಡುವ ಕಾರ್ಯ ಮಾಡಬಾರದೆಂದು ಎಲ್ಲರಲ್ಲೂ ಮನವಿ ಮಾಡುತ್ತೇನೆ. ತಪ್ಪಿಗೆ ತಕ್ಕ ಶಿಕ್ಷೆಯಾಗಲಿ.ಆಕಸ್ಮಿಕವಾಗಿ ನಡೆದಿರುವ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.