ನಗರಸಭೆಯಲ್ಲಿ ಜೆಡಿಎಸ್‌ ಸದಸ್ಯರ ಗದ್ದಲ

ನಿಯಮಬಾಹಿರವಾಗಿ ಸಾಮಾನ್ಯ ಸಭೆ ನಿಗದಿ ಆರೋಪ ಬಹುಮತವಿಲ್ಲದ ಬಿಜೆಪಿಯ ಅಸಹಾಯಕತೆ

Team Udayavani, Aug 10, 2021, 4:32 PM IST

ನಗರಸಭೆಯಲ್ಲಿ ಜೆಡಿಎಸ್‌ ಸದಸ್ಯರ ಗದ್ದಲ

ಹಾಸನ: ಮೂರು ವರ್ಷಗಳ ನಂತರ ಹಾಸನ ನಗರಸಭೆಯ ಸಾಮಾನ್ಯ ಸಭೆ ಸೋಮವಾರ ಮೊದಲ ಬಾರಿಗೆ ಸಮಾವೇಶಗೊಂಡರೂ ಜೆಡಿಎಸ್‌ ಸದಸ್ಯರ ಗದ್ದಲದಿಂದ ಯಾವುದೇ ವಿಷಯಗಳ ಚರ್ಚೆಗೆ ಸಾಧ್ಯವಾಗದೆ ಸಭೆ ಮುಂದೂಡಲ್ಪಟ್ಟಿತು.

ಮೊದಲ ಸಭೆಯಲ್ಲೇ ಗದ್ದಲ: ಬಹುಮತವಿಲ್ಲದಿದ್ದರೂ ಮೀಸಲಾತಿ ಬಲದಿಂದ ಹಾಸನ ನಗರಸಭೆಯಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸದಸ್ಯರು, ಜೆಡಿಎಸ್‌ ಸದಸ್ಯರ ಗದ್ದಲ ನಿಯಂತ್ರಿಸಲಾಗದೆ ಅಸಹಾಯಕರಾದರು.37 ಸದಸ್ಯ ಬಲದ ಹಾಸನ ನಗರಸಭೆಯಲ್ಲಿ ಜೆಡಿಎಸ್‌ನ 17 ಸದಸ್ಯರಿದ್ದರೆ, ಬಿಜೆಪಿಯ14 ಸದಸ್ಯರಿದ್ದಾರೆ. ಇಬ್ಬರು ಪಕ್ಷೇತರರು ಜೆಡಿಎಸ್‌ ಬೆಂಬಲಕ್ಕಿದ್ದಾರೆ. ಇಬ್ಬರು ಕಾಂಗ್ರೆಸ್‌ ಸದಸ್ಯರಿದ್ದಾರೆ. ಮೀಸಲಾತಿ ಬಲದಿಂದ ಅಧ್ಯಕ್ಷರಾಗಿರುವ ಪರಿಶಿಷ್ಟ ಪಂಗಡದ ಏಕೈಕ ಬಿಜೆಪಿ ಸದಸ್ಯ ಮೋಹನ್‌ ಕುಮಾರ್‌ ಅಧ್ಯಕ್ಷರಾದ ನಂತರ ಮೊದಲ ಸಭೆಯೇ ಗದ್ದಲಕ್ಕೆ ಬಲಿಯಾಯಿತು.

ಮೂರು ದಿನ ಹಿಂದೆ ನೋಟಿಸ್‌: ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಇಂದಿನ ಸಭೆಯ ನೋಟಿಸ್‌ನ್ನು ನಿಯಮಾವಳಿಗಳ ಪ್ರಕಾರ ಸದಸ್ಯರಿಗೆ ತಲಪಿಸಿಲ್ಲ. ಜು.28 ರಂದು ನಿಗದಿಯಾಗಿದ್ದ ಸಭೆಯನ್ನು ಕಾರಣಾಂತರದಿಂದ ಮುಂದೂಡಿದ್ದಾಗಿ ಹೇಳಿದ ಮೇಲೆ ಮುಂದೆ ನಡೆಯುವ
ಸಭೆಗೆ 7 ದಿನ ಮೊದಲು ಸದಸ್ಯರಿಗೆ ನೋಟಿಸ್‌ ಜಾರಿ ಮಾಡಬೇಕು. ಆದರೆ, ಮೂರು ದಿನಗಳ ಹಿಂದೆಯಷ್ಟೇ ಸದಸ್ಯರಿಗೆ ನೋಟಿಸ್‌ ನೀಡಲಾಗಿದೆ. ಹಾಗಾಗಿ ಈ ಸಭೆ ನಿಯಮ ಬಾಹಿರವಾಗಿ ನಿಗದಿಯಾಗದೆ ಎಂದು ಗದ್ದಲ ಆರಂಭಿಸಿದ ಜೆಡಿಎಸ್‌ ಸದಸ್ಯರು ಅಧ್ಯಕ್ಷ
ಮೋಹನ್‌ ಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿಯಮ ಬಾಹಿರವಾಗಿರುವ ಸಭೆಯನ್ನು ಮುಂದೂಡಬೇಕು
ಎಂದು ಪಟ್ಟು ಹಿಡಿದರು.

ಕ್ರಮ ಕೈಗೊಂಡಿಲ್ಲ:
ನಗರಸಭೆಯಲ್ಲಿ ಆಡಳಿತ ಸರಿಯಾಗಿ ನಡೆಯುತ್ತಿಲ್ಲ. ನಗರಸಭೆಯಲ್ಲಿಎರಡುಬಾರಿಲೋಕಾಯುಕ್ತ ದಾಳಿ ನಡೆದಿದೆ. ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಆಯುಕ್ತರು ಯಾವುದೇ ಕಠಿಣ ಕ್ರಮ ಕೈಗೊಂಡಿರುವುದಿಲ್ಲ ಎಂದು ಜೆಡಿಎಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಾನು ಟಾಸ್ಕ್ ಮಾಸ್ಟರ್‌.ಪ್ರೀತಂಗೌಡ
ನಾನು ಟಾಸ್ಕ್ ಮಾಸ್ಟರ್‌. ಮುಂದೇನು ಮಾಡಬೇಕು ಅದನ್ನು ಮಾಡ್ತೀನಿ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು. ಮಾಜಿ ಪ್ರಧಾನಿ ದೇವೇಗೌಡರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರೀತಂಗೌಡ, ಹಾಸನ ನಗರಸಭೆಯಲ್ಲಿ ಜೆಡಿಎಸ್‌ ಸದಸ್ಯರ ಗದ್ದಲದಿಂದಾಗ ಸಾಮಾನ್ಯ ಸಭೆ ಮುಂದೂಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾತಾಡೋದೇ ಸಾಧನೆ ಆಗಬಾರದು. ಸಾಧನೆಗಳು ಮಾತಾಡಬೇಕು. ಹಾಸನ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿಯಾಗಬೇಕೆಂಬ ನನ್ನಕಲ್ಪನೆ ಇದೆಯೋಆ ಕಲ್ಪನೆಗಳ ಸಾಕಾರಕ್ಕೆ ಹೋರಾಟ ಮಾಡುವೆ ಎಂದರು. ಈ ದಿನವೇ (ಸೋಮವಾರ) ಬೆಂಗಳೂರಿಗೆ ಹೋಗುತ್ತಿದ್ದು, ಮುಖ್ಯಮಂತ್ರಿ, ಹಿರಿಯ ಸಚಿವರನ್ನು ಭೇಟಿಯಾಗಿ ಮನವಿ ಮಾಡುವೆ. ಹಾಸನ ಕ್ಷೇತ್ರದ ಅಭಿವೃದ್ಧಿ, ಹಾಸನ ನಗರಸಭೆಯಲ್ಲಿ ಜೆಡಿಎಸ್‌
ಸದಸ್ಯರ ಗದ್ದಲ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆಯೂ ಗಮನ ಸೆಳೆಯುವೆ ಎಂದರು.

ಇದನ್ನೂ ಓದಿ:ಚಿತ್ರೀಕರಣ ಮುಗಿಸಿದ ಮರ್ದಿನಿ

ಸಲಹೆ ಪರಿಗಣಿಸದಿದ್ದರೆ ಪ್ರತಿಭಟಿಸಿ
ಅಧ್ಯಕ್ಷರು ಸಭೆ ನಡೆಸಲು ಮುಂದಾದಾಗ ನಗರಸಭೆಯ ಮಾಜಿ ಅಧ್ಯಕ್ಷರೂ ಆದ ಹಿರಿಯ ಸದಸ್ಯ ಸಿ.ಆರ್‌.ಶಂಕರ್‌, ಗಿರೀಶ್‌ ಚನ್ನವೀರಪ್ಪ, ವಾಸುದೇವ್‌, ಕ್ರಾಂತಿ ತ್ಯಾಗಿ ಮತ್ತಿತರ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ನಿಂತು ಪ್ರತಿಭಟನೆ ನಡೆಸಿದರು. ಸಭೆಯ ಕಾರ್ಯಸೂಚಿ (ಅಜೆಂಡಾ) ಒದುತ್ತಿದ್ದ ನಗರಸಭೆ ಅಧಿಕಾರಿ ಪ್ರಕಾಶ್‌ ಅವರಿಂದ ಅಜೆಂಡಾ ಪ್ರತಿ ಕಿತ್ತುಕೊಂಡರು. ಜೆಡಿಎಸ್‌ ಸದಸ್ಯರ ನಡೆ ಖಂಡಿಸಿ ಮಾತನಾಡಿದ ಶಾಸಕ ಪ್ರೀತಂ ಜೆ.ಗೌಡ, ಸದಸ್ಯರು ಸಭೆಯಲ್ಲಿ ಮಾತನಾಡುವ ಮೊದಲು ಸಭಾ ನಡಾವಳಿ ಪುಸ್ತಕಕ್ಕೆ ಸಹಿಮಾಡಿ ಆನಂತರ ಮಾತನಾಡುವುದು ಸಭೆಯ ನಿಯಮ. ಮೊದಲು ಸಹಿ ಮಾಡಿ ಯಾವುದೇ ವಿರೋಧ ಇದ್ದರೂ ದಾಖಲು ಮಾಡಿ.ಲೋಪಗಳಿದ್ದರೆ ತಿದ್ದಿಕೊಳ್ಳೋಣ. ನಾವು ನಿಮ್ಮ ಸಲಹೆಗಳನ್ನು ಪರಿಗಣಿಸದಿದ್ದರೆ ನೀವು ಪ್ರತಿಭಟನೆ ಮಾಡಬಹುದು ಎಂದರು.

ನಗರಸಭೆಯ ಸಾಮಾನ್ಯ ಸಭೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಬೇಡ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಈಗ ನಗರದ ಅಭಿವೃದ್ಧಿಗೆ ಆದ್ಯತೆ ಕೊಡೋಣ. ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸೋಣ ಎಂದು ಸಲಹೆ ನೀಡಿದರು. ಶಾಸಕರ ಸಲಹೆಗೆ ಮನ್ನಣೆ ನೀಡದ ಜೆಡಿಎಸ್‌ ಸದಸ್ಯರು ಗದ್ದಲ ಮುಂದುವರಿಸಿದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆ ಗದ್ದಲದಲ್ಲೇ ಮುಳುಗಿತು. ಆನಂತರ ಅಧ್ಯಕ್ಷ ಮೋಹನ್‌ ಕುಮಾರ್‌ ಸಭೆ ಊಟದ ವಿರಾಮಕ್ಕೆ ಮುಂದೂಡಿದರು.

ಟಾಪ್ ನ್ಯೂಸ್

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

Hasanamabe

Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್‌ ರದ್ದು

HD-Revanna

Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್‌.ಡಿ.ರೇವಣ್ಣ ಕಿಡಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.