ಸರ್ಕಾರಿ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು
Team Udayavani, Apr 17, 2022, 2:17 PM IST
ಜಾವಗಲ್: ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವೆಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.
ಜಾವಗಲ್ ಹೋಬಳಿ ಉಂಡಿಗನಾಳು ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ(ಗ್ರಾಮವಾಸ್ತವ್ಯ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂದಾಯ ಇಲಾಖೆ ಎಲ್ಲ ಇಲಾಖೆ ಗಳ ಮಾತೃ ಇಲಾಖೆಯಾಗಿದೆ. ಕಂದಾಯ ಇಲಾಖೆ ಹಾಗೂ ಭೂಮಾ ಪನ ಇಲಾಖೆ ರೈತರ ಹಿತದೃಷ್ಟಿಗಾಗಿ ಸಮನಯ್ವತೆಯಿಂದ ಕಾರ್ಯ ನಿರ್ವಹಿಸಿ ರೈತರ ಸಮಸ್ಯೆ ಬಗೆಹರಿಸಿಕೊಡಬೇಕೆಂದರು.
ಸ್ಥಳೀಯ ಜನ ಪ್ರತಿನಿಧಿಗಳು ಗ್ರಾಮಗಳ ಅಭಿವೃದ್ಧಿ ಕಾರ್ಯಗಳೊಂದಿಗೆ ಜನ ಸಾಮಾನ್ಯರಿಗೆ ಸಂಬಂಧಿಸಿದ ವಿವಿಧ ಮಾಸಾಶನ ಮಂಜೂರಾತಿ, ಖಾತೆ ಬದ ಲಾವಣೆ ಮುಂತಾದ ಕೆಲಸ ಕಾರ್ಯ ನಿರ್ವಹಿಸುವ ಮೂಲಕ ದಲ್ಲಾಳಿ ಹಾವಳಿ ತಪ್ಪಿಸುವಂತೆ ಸಲಹೆ ನೀಡಿದರು. ಉಂಡಿಗನಾಳು ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ 8-10 ಕೋಟಿ ರೂ.ವೆಚ್ಚದಲ್ಲಿ ವಿವಿಧ ರಸ್ತೆಗಳ ಕಾಮಗಾರಿ ಮಾಡಿಸಲಾಗಿದೆ ಎಂದರು. ಘನತ್ಯಾಜ್ಯ ವಿಲೇವಾರಿ ಘಟಕ, ಸ್ಮಶಾನಕ್ಕೆ ಜಮೀನು ಕಾಯ್ದಿರಿಸಲಾಗುತ್ತಿದೆ ಎಂದರು.
ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ: ಅರಸೀಕೆರೆ ತಾಲೂಕು ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ಯೋಜನೆ ಉತ್ತಮ ವಾಗಿದ್ದು ಸ್ಥಳದಲ್ಲಿಯೇ ಹಲವಾರು ಸಮಸ್ಯೆ ಪರಿಹರಿಸಿಕೊಳ್ಳಬಹುದು. ತಾಲೂಕು ಕಚೇರಿಯೊಂದಿಗೆ ಸಾರ್ವಜನಿಕರು ನೇರ ಸಂಪರ್ಕ ಹೊಂದಿ ತಮ್ಮ ಕೆಲಸ ಕಾರ್ಯ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಶಾಚಾಲಯ ವ್ಯವಸ್ಥೆಗೆ ಬೇಡಿಕೆ: ತಾಪಂ ಕಾರ್ಯ ನಿರ್ವಹಣಾಧಿಕಾರಿ ನಟರಾಜು ಮಾತನಾಡಿ, ಅಂಗನವಾಡಿ ಶಾಲೆ, ಕಾಲೇಜುಗಳಲ್ಲಿ , ಕಡ್ಡಾಯವಾಗಿ ಶೌಚಾಲಯ ವ್ಯವಸ್ಥೆ ಇರಬೇಕೆಂದರು. ಕೆಲವೆಡೆ ಹೊಸದಾಗಿ ಶೌಚಾಲಯ ಸೌಲಭ್ಯ ಮಾಡಿಸಿ ಕೊಳ್ಳುವಂತೆ ತಿಳಿಸಿದರು.
ಗ್ರೇಡ್-2 ತಹಶೀಲ್ದಾರ್ ಪಾಲಾಕ್ಷ, ಸಮಾಜಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗೋಪಾಲಪ್ಪ, ಕೃಷಿ ಇಲಾಖೆ ಸುಬ್ರಹ್ಮಣ್ಯ, ಬಸವರಾಜು ಕಟ್ಟಿಮನಿ, ಕೆಪಿಟಿಸಿಎಲ್‌ನ ಪುಟ್ಟರಾಜು, ಭೂಮಾಪನ ಇಲಾಖೆ ಹರೀಶ್ ಕುಮಾರ್, ಪಿಡಿಒ ವಾಣಿ ಶ್ರೀ, ಶಿರಸ್ತೇದಾರ್ ಶಿವಶಂಕರ್, ಭಾಗ್ಯಲಕ್ಷ್ಮೀಬಾಂಡ್, ಎನ್‌ಎಸ್‌ಸಿ ಬಾಂಡ್ ವಿವಿಧ ಮಾಸಾಶನ ಸೇರಿದಂತೆ ವಿವಿಧ ಮಂಜೂರಾತಿ ಪತ್ರ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ನವೀನ ಸಿದ್ದರಾಜು, ಉಪಾಧ್ಯಕ್ಷ ಬೃಂಗೇಶ್, ಸದಸ್ಯರುಗಳು, ಜಿಪಂ ಎಇಇ ರಂಗನಾಥ್, ಬಿಸಿಎಂ ಇಲಾಖೆ ನಾರಾಯಣ್, ಲೋಕೋಪ ಯೋಗಿ ಇಲಾಖೆ ಏಇಇ ಉಮೇಶ್, ಪ್ರಕಾಶ್, ಎಪಿಎಂಸಿ ವಸಂತ್ ಕುಮಾರ್, ಎಂಐನ ರವೀಶ, ಪಶುಪಾಲನಾ ಇಲಾಖೆ ಡಾ.ಶಶಿಕಾಂತ್, ಆರ್‌ಐ ಗೋವಿಂದ ರಾಜು, ಸಿಡಿಪಿಒ ಶಂಕರಮೂರ್ತಿ ಗ್ರಾಮ ಲೆಕ್ಕಿಗರು ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥ ಸುತ್ತ ಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಸಲ್ಲಿಸಲಾಗಿದ್ದ 64 ಅರ್ಜಿಗಳ ಪೈಕಿ ಹಲವಾರು ಅರ್ಜಿಗಳನ್ನು ತಹಶೀಲ್ದಾರ್ ಪರೀಶಿಲಿಸಿ ಇತ್ಯರ್ಥಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.