ಸ್ವಾರ್ಥದಿಂದ ಅವಿಭಕ್ತ ಕುಟುಂಬಗಳು ಕಣ್ಮರೆ


Team Udayavani, Mar 22, 2021, 3:05 PM IST

ಸ್ವಾರ್ಥದಿಂದ ಅವಿಭಕ್ತ ಕುಟುಂಬಗಳು ಕಣ್ಮರೆ

ಅರಸೀಕೆರೆ: ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿ ಬಾಳುವ ಉದಾತ್ತ ಚಿಂತನೆ ಹಾಗೂಪರೋಪಕಾರ ಮಾಡುವ ಸದ್ಗುಣಗಳ ಮಾನವೀಯ ಮೌಲ್ಯಗಳನ್ನು ನಮ್ಮ ಸಂಸ್ಕೃತಿಯಲ್ಲಿ ಕಾಣುತ್ತಿದ್ದೇವು,

ಆದರೆ ಇಂದು ಮನುಷ್ಯನಲ್ಲಿ ನಾನು ನನ್ನದು ಎಂಬ ಸ್ವಾರ್ಥಭಾವನೆ ಮನೆ ಮಾಡುತ್ತಿರುವ ಕಾರಣ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಶ್ರೀಗುರುಪರದೇಶಿ ಕೇಂದ್ರ ಸ್ವಾಮೀಜಿ ವಿಷಾದಿಸಿದರು.ತಾಲೂಕಿನ ಕಣಕಟ್ಟೆ ಹೋಬಳಿ ರಾಂಪುರ ತಾಂಡ್ಯದಲ್ಲಿ ಆಯೋಜಿಸಿದ್ದ ದೊಡ್ಡಮ್ಮ ದೇವಿಯವರನೂತನ ವಿಗ್ರಹ ಪ್ರತಿಷ್ಠಾಪನೆ ದೇವಾಲಯದ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಇಂತಹ ಕೋವಿಡ್ ಸಂಕಷ್ಟದಲ್ಲೂ ಗ್ರಾಮಸ್ಥರು ಲಕ್ಷಾಂತರ ರೂ. ವೆಚ್ಚ ಮಾಡಿ ದೇವಾಲಯವನ್ನು ಕಟ್ಟಿಭಕ್ತಿ ಮಾರ್ಗದಲ್ಲಿ ಮುನ್ನೆಡೆಯುತ್ತಿರುವುದು ಸಂತಸದಸಂಗತಿ ಎಂದರು.

ಯುವಜನತೆಯಲ್ಲಿ ಧಾರ್ಮಿಕತೆ ಕಡಿಮೆ: ಇಂದಿನ ಯುವ ಪೀಳಿಗೆ ದೇವರು ಧರ್ಮ ಭಕ್ತಿ ಪೂಜ್ಯಮನೋಭಾವ ಕ್ಷೀಣಿಸುತ್ತಿದೆ ಹಿಂದಿನಿಂದಲೂ ದೇವಾಲಯಗಳು, ಮಠ ಮಾನ್ಯಗಳು,ಧಾರ್ಮಿಕ ಶ್ರದ್ಧಾ ಭಕ್ತಿಕೇಂದ್ರಗಳ ಉಳಿವಿಗೆ ಭಕ್ತರೇ ಕಾರಣರಾಗುತ್ತಿದ್ದಾರೆ.ಮನುಷ್ಯ ಇಂದಿನ ಆಧುನಿಕ ಯುಗದಲ್ಲಿ ಎಷ್ಟೇಬೆಳೆದರೂ ದೇವರು ಧರ್ಮ ಮತ್ತು ಪೂಜೆ ಸೇರಿದಂತೆಧಾರ್ಮಿಕ ವಿಧಿ-ವಿಧಾನಗಳು ನೇರವೇರುತ್ತವೆ.ಆದರೆ ಇಂದಿನ ಯುವ ಪೀಳಿಗೆಯಲ್ಲಿ ಧಾರ್ಮಿಕತೆ ಹಾಗೂ ಆಧ್ಯಾತ್ಮಿಕ ಮನೋಭಾವ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದರು.

ಗುರು ಶಿಷ್ಟರದ್ದು ದೈವ ಸಂಬಂಧ: ದೊಡ್ಡಮೇಟಿ ಕುರ್ಕೆ ಬೂದಿಹಾಳ್‌ ವಿರಕ್ತ ಮಠದ ಶಶಿಶೇಖರ ಸಿದ್ಧ ಬಸವ ಸ್ವಾಮೀಜಿ ಮಾತನಾಡಿ, ಗುರು ಪರಂಪರೆಯ ಮೇಲೆ ನಂಬಿಕೆ ಇಟ್ಟು ಗುರುವಿನ ಮೂಲಕ ದೈವವನ್ನು ಕಾಣುವ ನಮ್ಮ ಸಂಸ್ಕೃತಿ ಆಚಾರ ವಿಚಾರಕ್ಕೆ ಅದರದ್ದೇ ಆದ ಮಹತ್ವವಿದೆ. ಹರ ಮುನಿದರೂ ಗುರು ಕಾಯುವನು ಎಂಬ ನಂಬಿಕೆಯೇ ಶಿಷ್ಯ ಕುಲವನ್ನು ಕೈಹಿಡಿದು ನಡೆಸುತ್ತಿದೆ. ಗುರುವಿನ ಅನುಗ್ರಹ ಹಾಗೂ ಮಾರ್ಗ ದರ್ಶನವಿಲ್ಲದೇ ಯಾರ ಬದುಕು ಪೂರ್ಣವಾಗುವುದಿಲ್ಲ. ಆಗಾಗಿಯೇ ನಮ್ಮ ಹಿರಿಯರು ಹೇಳಿದರು

ಮುಂದೆ ಗುರಿ ಹಿಂದೆ ಗುರು ಬದುಕಿನಲ್ಲಿ ಯಾರು ಹೊಂದಿರುತ್ತಾರೋ ಅವರ ಬದುಕು ಇತರರಿಗೆ ಮಾದರಿಯಾಗಿರುತ್ತದೆ. ಹಾಗಾಗಿ ಗುರು ಶಿಷ್ಯರ ಸಂಬಂಧ ದೈವ ಸಂಬಂಧ ಎಂದು ಹೇಳಿದರು.

ಭಕ್ತರು ಮಠದ ಆಸ್ತಿ: ಭಕ್ತ ದೈವ ಅಧೀನ ದೈವ ಭಕ್ತ ಅದೀನ ಅದೇ ರೀತಿ ಮಠ ಮಂದಿರಗಳು ಭಕ್ತರ ಆಸ್ತಿಯಾದರೆ ಭಕ್ತರು ಮಠದ ಆಸ್ತಿ ಇದ್ದಂತೆ. ಯಾವುದೇ ಮಠ ಮಂದಿರದ ಗುರುವಿನ ಕಾಯಕವೆಂದರೆ ಜಾತಿ, ಮತ, ಧರ್ಮ, ಬಡವ-ಬಲ್ಲಿಗ, ಮೇಲು-ಕೀಳು ನೋಡದೆ ಎಲ್ಲಾ ಭಕ್ತರನ್ನು ಒಪ್ಪಿಕೊಳ್ಳುವ ಹಾಗೂ ಅಪ್ಪಿ  ಕೊಳ್ಳುವ ಆ ಮೂಲಕ ಭಕ್ತರ ಒಳಿತಿಗೆ ಮಾರ್ಗದರ್ಶನ ನೀಡುವ ಮಹತ್ತರ ಜವಬ್ದಾರಿ ಮಠಾಧೀಶರ ಮೇಲಿದೆ ಎಂದು ಕಿವಿಮಾತು ಹೇಳಿದರು.

ಸ್ವಾಭಿಮಾನದ ಬದುಕು ನಡೆಸುವವರು ಬಂಜಾರರು: ಚಿತ್ರದುರ್ಗ ಬಂಜಾರ ಗುರು ಪೀಠದ ಸರ್ದಾರ್‌ ಸೇವಾ ಲಾಲ್‌ ಸ್ವಾಮೀಜಿ ಮಾತನಾಡಿ, ಇಡೀ ಭಾರತ ದೇಶದಲ್ಲೆ ಬಂಜಾರ ಸಮಾಜಶ್ರೇಷ್ಠತೆಯನ್ನು ಪಡೆದಿದೆ ಬಂಜಾರರು ಪ್ರಕೃತಿ ಪ್ರಿಯರು ಯಾವುದೇ ಮೂಲ ಸೌಲಭ್ಯವಿಲ್ಲದ ಗ್ರಾಮ  ಗಳಲ್ಲಿ ಬಂಜಾರ ಸಮಾಜದವರು ಬದುಕುತ್ತಿದ್ದಾರೆ.ಯಾರಿಗೂ ತೊಂದರೆ ಕೊಡದ ಸಮಾಜವೆಂದರೆ ಬಂಜಾರ ಸಮಾಜವಾಗಿದೆ. ಗ್ರಾಮಗಳಿಂದ ಹೊರಗೆ ತಂಡೋಪ ತಂಡವಾಗಿ ವಾಸಿಸುತ್ತಿರುವುದರಿಂದಬಂಜಾ ರರು ವಾಸಿಸುವ ಗ್ರಾಮಗಳನ್ನು ತಾಂಡ್ಯ ಎಂದು ಕರೆಯಾಗುತ್ತದೆ. ಬಂಜಾರರು ಸ್ವಾಭಿಮಾನದ ಬದುಕು ನಡೆಸುವ ಸಮಾಜವಾಗಿದೆ ಎಂದರು.

ಮಾಡಾಳು ವಿರಕ್ತಮಠದ ರುದ್ರಮುನಿ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ತಿಪಟೂರು ತಾಲೂಕು ಹೊನ್ನವಳ್ಳಿ ಗುರುಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಸಾಪುರತಾಂಡ್ಯದ ಶಕ್ತಿ ಬಂಜಾರ ಗುರುಪೀಠದ ಶಿವಪ್ರಕಾಶ ಮಹಾರಾಜ್‌ ಸ್ವಾಮೀಜಿ, ರಾಂಪುರ ಗ್ರಾಪಂ ಅಧ್ಯಕ್ಷಸುರೇಶ, ಮಾಡಾಳು ಗ್ರಾಪಂ ಸದಸ್ಯ ಬಸವರಾಜ್‌, ಸುಕ್ಷೇತ್ರ  ಅಭಿಮಾನಿಗಳ ಸಂಘದ ಅಧ್ಯಕ್ಷ ಓಂಕಾರಮೂರ್ತಿ ಹಾಗೂ ಎಸ್‌.ಪಿ.ಎಸ್‌.ವಿದ್ಯಾಪೀಠದಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯು.ಎಸ್‌. ಬಸವರಾಜು ಉಪಸ್ಥಿತರಿದ್ದರು

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.