ಉಳ್ಳಾವಳ್ಳಿಯಲ್ಲಿ ವೈಭವದ ಕಾರಹಬ್ಬ
Team Udayavani, Sep 8, 2021, 4:29 PM IST
ಚನ್ನರಾಯಪಟ್ಟಣ/ಹಿರೀಸಾವೆ: ತಾಲೂಕಿನ ಹಿರೀಸಾವೆ ಹೋಬಳಿ ಉಳ್ಳಾವಳ್ಳಿ ಗ್ರಾಮದಲ್ಲಿಕಾರಹಬ್ಬದ ಪ್ರಯುಕ್ತಕರಿಗಲ್ಲು, ಬ್ರಹ್ಮದೇವರಕಲ್ಲು ಪೂಜೆ ಹಾಗೂ ಜಾನುವಾರುಗಳ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಪೂಜೆ ಸಲ್ಲಿಸುವ ವಾಡಿಕೆ:ಕೃಷಿ ಚಟುವಟಿಕೆ ಮುಗಿದ ಹಿನ್ನೆಲೆಯಲ್ಲಿ ಜಾನುವಾರು ಹಾಗೂ ನೇಗಿಲು-ಮುಟ್ಟುಗಳಿಗೆ ಪೂಜೆ ಸಲ್ಲಿಸುವ ಪುರಾತನ ಹಬ್ಬ ಇದಾಗಿದೆ. ಗೌರಿ-ಗಣೇಶ ವ್ರತಕ್ಕೆ ಮೊದಲು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಹಬ್ಬದ ಆಚರಣೆಯಿಂದಕೃಷಿಯಲ್ಲಿ ಅಭಿವೃದ್ಧಿ, ಜಾನುವಾರುಗಳಿಗೆ ಆರೋಗ್ಯ ಹಾಗೂ ಆಯಸ್ಸು ಲಭಿಸುತ್ತದೆ ಎಂಬುದು ಗ್ರಾಮಸ್ಥರ ಬಲವಾದ ನಂಬಿಕೆ. ಜತೆಗೆ ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವಕಾರಹಬ್ಬದ ದಿನ ಶ್ರೀಬ್ರಹ್ಮದೇವರಕಲ್ಲಿಗೆ ಇಲ್ಲಿ ವಿಶೇಷ ಪೂಜಾಕೈಂಕರ್ಯ ನಡೆಯುತ್ತವೆ.
ಕೊಂಡ ಬೆಲೆ ಜಾನುವಾರು ಮೇಲೆ ನಮೂದು: ಜಾನುವಾರುಗಳ ಮೈ ತೊಳೆದು,ಕೊಂಬುಗಳಿಗೆ ವಿವಿಧ ಬಗೆಯ ಬಣ್ಣ ಹಚ್ಚಿ ಬಲೂನ್ ಮತ್ತು ಸುನ್ನಾರಿ ಸುತ್ತಲಾಯಿತು.ಕುತ್ತಿಗೆಗೆ ಗೆಜ್ಜೆಹಾರ ಹಾಗೂ ಕಾಲಿಗೆಕರಿದಾರಕಟ್ಟಿ ಸಿಂಗರಿಸಿ ಜಾನುವಾರುಗಳ ಮೈಮೇಲೆ ಸಂತೆಯಲ್ಲಿ ಎಷ್ಟು ಬೆಲೆಗೆಕೊಂಡಿರುತ್ತಾರೆಯೋ ಅಷ್ಟು ಬೆಲೆಯನ್ನು ಬಣ್ಣದಿಂದ ಬರೆಯುವುದು ವಿಶೇಷ. ಇದರಿಂದ ಗ್ರಾಮದಲ್ಲಿ ಹೆಚ್ಚು ಹಣಕೊಟ್ಟು ಯಾರು ಜಾನುವಾರ ತಂದು ಸಾಕಿರುತ್ತಾರೆ ಎನ್ನುವುದು ತಿಳಿಯಲಿದೆ.
ಇದನ್ನೂ ಓದಿ:‘ಕುಟುಂಬದಲ್ಲಿ ಐಕ್ಯತೆಯಿಂದ ಸಹಬಾಳ್ವೆ ಸಾಧ್ಯ’ : ಮನೋಹರ್ ಡಿಸೋಜ
ಗ್ರಾಮ ಸುತ್ತಿದ ಜಾನುವಾರು: ಗ್ರಾಮದ ಜನತೆ ತಮ್ಮ ತಮ್ಮ ಜಾನುವಾರುಗಳೊಂದಿಗೆಕರಿಗಲ್ಲು ಇರುವಲ್ಲಿ ಒಟ್ಟಾಗಿ ಸೇರಿದ್ದು,ಕರಿಗಲ್ಲಿಗೆ
ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜಾನುವಾರುಗಳಿಗೆ ತೀರ್ಥ ಪ್ರೋಕ್ಷಣೆ ಮಾಡಿ ನಂತರ ವಾಡಿಕೆಯಂತೆ ಮೂರು ಹೋರಿಯನ್ನು ಓಡಿಸಿಕೊಂಡು ಯುವಕರು ಗ್ರಾಮವನ್ನು ಒಂದು ಸುತ್ತು ಬಳಸಿ ಪ್ರದಕ್ಷಿಣೆ ಮಾಡಿದರು. ಅವರಲ್ಲಿ ಮೊದಲು ಬಂದ ಯುವಕ ಹೆಬ್ಟಾಗಿಲಿಗೆಕಟ್ಟಿರುವ ದಂಡೆ (ತೋರಣ)ಕೀಳುವ ಮೂಲಕ ಕಾರಹಬ್ಬಕ್ಕೆ ತೆರೆ ಎಳೆದರು.
ಮಾಂಗಲ್ಯ ಗಟ್ಟಿ
ಗೊಳಿಸಲು ಪಾದಪೂಜೆ
ಸಿಂಗಾರಗೊಳಿಸಿದ್ದ ಜಾನುವಾರುಗಳನ್ನು ಸಂಜೆ ಮನೆ ಬಾಗಿಲಲ್ಲಿ ನಿಲ್ಲಿಸಿ ಮುಖ ತೊಳೆದು ಕುಂಕುಮ ಬಳಿದು ಹೂವು ಮುಡಿ ಪೂಜೆ ಮಾಡಿದ
ಮುತ್ತೈದೆಯರು ತಮ್ಮ ತಾಲಿಯನ್ನು ಜಾನುವಾರುಗಳ ಪಾದಕ್ಕೆ ಸ್ಪರ್ಶಿಸಿ, ಹಣೆಗೆ ಹೊತ್ತಿ ಮಾಂಗಲ್ಯ ಭಾಗ್ಯ ಗಟ್ಟಿಗೊಳಿಸುವಂತೆ ಬೇಡಿಕೊಳ್ಳುವುದು ಗೋವಿನ ಪಾದ ಪೂಜೆಯ ವಿಶೇಷ. ಆಧುನಿಕ ಯುಗದಲ್ಲಿಯೂ ಹಲವು ದಶಕಗಳಿಂದ ಇಂತಹ ಪದ್ಧತಿಯನ್ನು ನಡೆಸಿಕೊಂಡು ಬರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.