ಜಿಲ್ಲಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ಕೆಎಸ್‌ಆರ್‌ಪಿ ಕೇಂದ್ರದಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ
Team Udayavani, Jul 27, 2019, 11:30 AM IST
ಹಾಸನದ ಕೆಎಸ್‌ಆರ್‌ಪಿ ಬೆಟಾಲಿಯನ್ ಆವರಣದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್‌ನಲ್ಲಿ ಡೀಸಿ ಅಕ್ರಂಪಾಷಾ ಮತ್ತು ಅತಿಥಿಗಳೊಂದಿಗೆ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಹಾಸನ: ಶಾಂತಿಗ್ರಾಮದ ಬಳಿ ಇರುವ ಗಾಡೇನಹಳ್ಳಿಯ 11ನೇ ಕೆಎಸ್‌ಆರ್‌ಪಿ ಪಡೆ ಕೇಂದ್ರದ ಆವರಣದಲ್ಲಿ ಕಾರ್ಗಿಲ್ ವಿಜಯ ದಿವಸ್ ಹಾಗೂ ಜಲಶಕ್ತಿ ಅಭಿಯಾನವನ್ನು ವಿಭಿನ್ನವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಅಕ್ರಂಪಾಷಾ, 11ನೇ ಕೆಎಸ್‌ಆರ್‌ಪಿ ಪಡೆಯ ಕಮಾಂಡೆಂಟ್ ಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಹಾಸನ ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಸಸಿ ನೆಟ್ಟು ಕಾರ್ಗಿಲ್ ವಿಜಯ ದಿನವನ್ನು ಆಚರಿಸಿದರು.
ಕೆಎಸ್‌ಆರ್‌ಪಿ ಬೆಟಾಲಿನ್ ಆವರಣದ ಸ್ವಚ್ಛತೆ ಅಭಿವೃದ್ಧಿ ಕಾರ್ಯ, ಜಲಸಂರಕ್ಷಣೆ, ವನಸಂವರ್ಧನೆ ಕಾರ್ಯಗಳನ್ನು ಕಂಡು ಜಿಲ್ಲಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದರು. ಸಂಸ್ಥೆ ಅಭಿವೃದ್ಧಿಗೆ ಸಹಕಾರ ನೀಡಲಿದ್ದು ಇನ್ನಷ್ಟು ಗಿಡಮರಗಳನ್ನು ನೆಟ್ಟು ಬೆಳೆಸಿ ಎಂದು ಪ್ರೋತ್ಸಾಹಿಸಿದರು.
ಕಮಾಂಡೆಂಟ್ ಕೃಷ್ಣಪ್ಪ ಅವರು ಕಳೆದ 5 ವರ್ಷಗಳಿಂದ ಗಾಡೇನಹಳ್ಳಿ ಕೇಂದ್ರದಲ್ಲಿ ಮಾಡ ಲಾಗಿರುವ ರಚನಾತ್ಮಕ ಅಭಿವೃದ್ಧಿಯನ್ನು ವಿವರಿಸಿ ದರು. ತಹಶೀಲ್ದಾರ್ ಮೇಘನಾ, ಜಿಲ್ಲಾ ವಾರ್ತಾ ಧಿಕಾರಿ ವಿನೋದ್‌ಚಂದ್ರ ಮತ್ತಿತರರು ಇದ್ದರು.
ಹುತಾತ್ಮರಿಗೆ ಶ್ರದ್ಧಾಂಜಲಿ: ಕುವೆಂಪು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪಾರ್ಕ್ ಆವರಣದಲ್ಲಿ ಕಾರ್ಗಿಲ್ ದಿನಾಚರಣೆ ಅಂಗವಾಗಿ ಮಡಿದ ಯೋಧರಿಗೆ ಜಿಲ್ಲಾಧಿಕಾರಿ ಅಕ್ರಂಪಾಷಾ ಶ್ರದ್ಧಾಂಜಲಿ ಅರ್ಪಿಸಿದರು. ಇದೇ ವೇಳೆ ನಿವೃತ್ತ ಯೋಧ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.