ಕರಿಯಮ್ಮ, ಮಲ್ಲಿಗಮ್ಮ ದೇವಿಯರ ಮಹಾರಥೋತ್ಸವ


Team Udayavani, May 3, 2019, 1:50 PM IST

has-2

ಅರಸೀಕೆರೆ: ನಗರದ ಗ್ರಾಮದೇವತೆ ಗಳಾದ ಕರಿಯಮ್ಮದೇವಿ ಮತ್ತು ಮಲ್ಲಿ ಗಮ್ಮ ದೇವಿಯವರ 50ನೇ ವರ್ಷದ ಸುವರ್ಣ ಸಂಭ್ರಮದ ಮಹಾ ರಥೋತ್ಸ ವವು ಗುರುವಾರ ಮಧ್ಯಾಹ್ನದಂದು ಶಾಸಕ ಕೆ.ಎಂ.ಶಿವಲಿಂಗೇಗೌಡರ ಸಮ್ಮು ಖದಲ್ಲಿ ಸಹಸ್ರಾರು ಭಕ್ತಾದಿಗಳ ನಡುವೆ ವಿಜೃಂಭಣೆಯಿಂದ ನಡೆಯಿತು.

ವಿಶೇಷ ಪೂಜೆ: ನಗರದ ಗ್ರಾಮ ದೇವತೆಗಳಾದ ಕರಿಯಮ್ಮದೇವಿ ಮತ್ತು ಮಲ್ಲಿಗಮ್ಮ ದೇವಿಯವರ 50ನೇ ವರ್ಷದ ಮಹಾರಥೋತ್ಸವದ ಅಂಗ ವಾಗಿ ಗುರುವಾರ ಬೆಳಗ್ಗೆ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯ ಗಳನ್ನು ಸಂಪ್ರದಾಯದಂತೆ ಶಾಸ್ತ್ರೋಕ್ತ ವಾಗಿ ನೆರವೇರಿಸಲಾಯಿತು.

ಮೂಲ ದೇವತೆ ಸನ್ನಿಧಿಯ ಆವರಣದಲ್ಲಿನ ಮಹಾರಥಕ್ಕೆ ವಿವಿಧ ಬಣ್ಣ,ಬಣ್ಣಗಳ ಬಾವುಟಗಳು ಮತ್ತು ಬಗೆ,ಬಗೆಯ ಹೂವು, ಹಾರಗಳಿಂದ ವಿನೂತನವಾಗಿ ಶೃಂಗರಿಸಿ ಪೂಜಾ ಕೈಂಕರ್ಯವನ್ನು ನಡೆಸಲಾಯಿತು.

ಮೆರುಗು ನೀಡಿದ ಮಂಗಳ ವಾದ್ಯ: ಮಂಗಳವಾದ್ಯಗಳಾದ ಚಿಟ್ಟೆ ಮೇಳ, ಕರಡೇ ವಾದ್ಯ, ತಮಟೆ ವಾದ್ಯಗಳು ಚೆಲುವರಾಯಸ್ವಾಮಿ, ದೂತ ರಾಯಸ್ವಾಮಿ, ಮಲ್ಲಿಗಮ್ಮದೇವಿ ಹಾಗೂ ಕೆಂಚರಾಯಸ್ವಾಮಿ ದೇವರು ಗಳ ಕುಣಿತ ಭಕ್ತ ಸಮೂಹಕ್ಕೆ ಆಕರ್ಷಣೆ ಕೇಂದ್ರ ಬಿಂದುವಾಗಿತ್ತು.

ಮಧ್ಯಾಹ್ನ 1.20 ಗಂಟೆಗೆ ಮಹಾ ರಥದಲ್ಲಿ ಕರಿಯಮ್ಮದೇವಿ ಮತ್ತು ಮಲ್ಲಿಗಮ್ಮದೇವಿಯ ಉತ್ಸವಮೂರ್ತಿ ಗಳನ್ನು ಕೂರಿಸಿದ ನಂತರ ಮಹಾರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥಾ ರೋಹಣಕ್ಕೆ ಚಾಲನೆ ನೀಡುತ್ತಿದಂತೆ ಜಾತ್ರಾ ಮಹೋತ್ಸವದಲ್ಲಿ ನೆರದಿದ್ದ ಸಹಸ್ರಾರು ಭಕ್ತರು ಶ್ರೀದೇವಿ ನಾಮ ಸ್ಮರಣೆಯಲ್ಲಿ ಬಾಳೇಹಣ್ಣು ಹಾಗೂ ದವನ ಪುಷ್ಪಗಳನ್ನು ಮಹಾರಥದ ಮೇಲೆ ಎಸೆದು ತಮ್ಮ ಭಕ್ತಿಭಾವನೆಗಳನ್ನು ಸಮರ್ಪಿಸಿದರು.

ಗ್ರಾಮದೇವತೆ ದೇವಾಲಯ ಆಡ ಳಿತ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಅನೇಕ ಗಣ್ಯರು ಮಹಾ ರಥೋತ್ಸವದಲ್ಲಿ ಭಾಗವಹಿಸಿ ದೇವರಿಗೆ ಧನ್ಯತಾ ಭಾವನೆಯ ಭಕ್ತಿ ಸಮರ್ಪಣೆ ಯನ್ನು ಮಾಡಿದರು. ಮಹಾರಥೋತ್ಸವ ನೇರವೇರಿದ ನಂತರ ದೇವಾಲಯ ಅಕ್ಕಪಕ್ಕದಲ್ಲಿ, ರಸ್ತೆಯ ಬದಿಗಳಲ್ಲಿ ಸಾರ್ವಜನಿಕರಿಗೆ ಪಾನಕ ಮತ್ತು ನೀರು ಮಜ್ಜಿಗೆ ಹಾಗೂ ಕೊಸಂಬರಿ ಪ್ರಸಾದ ವಿತರಿಸಲಾಯಿತು. ದೇವಾಲಯ ಆಡಳಿತ ಸಮಿತಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಿತ್ತು.

ಅಂಬಾರಿ ಮೆರವಣಿಗೆ: ಶುಕ್ರವಾರ ಸಂಜೆ 4 ಗಂಟೆಗೆ ಶ್ರೀದೇವಿಯವರ ಮೂಲಸನ್ನಿಧಿಯಿಂದ ಸಕಲ ಬಿರು ದಾವಳಿಗಳ ಜೊತೆಗೆ ಮಂಗಳ ವಾದ್ಯ ಗಳೊಂದಿಗೆ ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಆನೆಯ ಅಂಬಾರಿ ಯಲ್ಲಿ ಕರಿಯಮ್ಮದೇವಿ ಮತ್ತು ಮಲ್ಲಿಗಮ್ಮ ದೇವಿಯವರ ಆದ್ದೂರಿ ಮೆರವಣಿಗೆಯನ್ನ ಏರ್ಪಡಿಸಲಾಗಿದೆ. ಭಕ್ತಾದಿಗಳು ತಮ್ಮ ತಮ್ಮ ಮನೆಗಳ ಮುಂದೆ ತಳಿರು ತೋರಣ ಹಾಗೂ ರಂಗೋಲಿ ಹಾಕುವ ಮೂಲಕ ಮೆರವಣಿಗೆಯನ್ನು ಸ್ವಾಗತಿಸಲು ಸಜ್ಜಾಗುವಮತೆ ದೇವಾಲಯ ಸಮಿತಿ ಮನವಿ ಮಾಡಿದೆ.

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajawal-Revanna-Case

Enquiry: ತನ್ನದೇ ವೀಡಿಯೋ ಕೋರ್ಟ್‌ನಲ್ಲಿ ವೀಕ್ಷಿಸಲು ಮಾಜಿ ಸಂಸದ ಪ್ರಜ್ವಲ್‌ಗೆ ಅನುಮತಿ

Preetham-Gowda

Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ? 

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

POlice

Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್‌; ವಶಕ್ಕೆ ಪಡೆದುಕೊಂಡ ಪೊಲೀಸರು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.