ಕ್ಯಾನಹಳ್ಳಿ ಚೇತನ್ ಮನೆಯಲ್ಲಿ ಗಾಢಮೌನ
Team Udayavani, Oct 30, 2021, 2:34 PM IST
ಸಕಲೇಶಪುರ: ಹೆಸರಾಂತ ಚಿತ್ರನಟ ಪುನೀತ್ ರಾಜ್ ಕುಮಾರ್‌ರವರ ನಿಧನದಿಂದ ತಾಲೂಕಿನ ಕ್ಯಾನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಚೇತನ್‌ರವರ ಕುಟುಂಬ ದು:ಖದಲ್ಲಿ ಮುಳುಗಿದೆ. ಪುನೀತ್ ರಾಜ್‌ಕುಮಾರ್‌ರವರ ಪತ್ನಿ ಅಶ್ವಿನಿ ಮೂಲತಃ ಚಿಕ್ಕಮಗಳೂರುನವರಾಗಿದ್ದು, ಅಶ್ವಿನಿರವರ ತಂದೆ ರೇವನಾಥ್ ಚಿಕ್ಕಮಗಳೂರು ಜಿಲ್ಲೆಯ ಬಾಗಮನೆ ಗ್ರಾಮದವರು. ತಾಯಿ ವಿಜಯ ಮೂಲತಃ ಹಾಸನದ ಬೇಲೂರು ತಾಲೂಕಿನ ಕುಶಾವರ ಗ್ರಾಮದವರು.
ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಗ್ರಾಮದ ದಿ. ರುದ್ರೇಗೌಡರ ಕುಟುಂಬದ ಜತೆ ನೆಂಟಸ್ಥನ ಹೊಂದಿದ್ದು, ಈ ಎರಡು ಕುಟುಂಬಗಳು ಹಲವು ವರ್ಷಗಳಿಂದ ಸಂಪರ್ಕದಲ್ಲಿದ್ದವು. ಕೆಲವು ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ನಡೆದ ದಿ. ರುದ್ರೇಗೌಡರ ಪುತ್ರ ಚೇತನ್ ರವರ ಮದುವೆಯಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಪತ್ನಿ ಆಶ್ವಿನಿ ಭಾಗಿಯಾಗಿದ್ದಲ್ಲದೆ ಅಲ್ಲದೆ ಕ್ಯಾನಹಳ್ಳಿ ಗ್ರಾಮದಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಮಲೆನಾಡಿನ ಸುಗ್ಗಿಗೆ ನರ್ತನ ಮಾಡಿದ್ದರು.
ಇದನ್ನೂ ಓದಿ:- ಕುಡಿಯುವ ನೀರಿನ ಯೋಜನೆ ಜಾರಿಗೆ ಕ್ರಮ
ಅಲ್ಲದೆ ಚಲನಚಿತ್ರವೊಂದರ ಶೂಟಿಂಗ್‌ಗೆ ಬಂದಾಗ ಚೇತನ್‌ರವರ ಮನೆಗೆ ಭೇಟಿ ನೀಡಿ ಕಾಲ ಕಳೆದಿದ್ದರು. ಕಳೆದ ವರ್ಷ ಕೋವಿಡ್‌ನಿಂದಾಗಿ ತಂದೆಯನ್ನು ರುದ್ರೇಗೌಡರನ್ನು ಕಳೆದುಕೊಂಡಿದ್ದ ಚೇತನ್ ಇದೀಗ ಪುನೀತ್ ರವರ ನಿಧನದಿಂದ ಅವರ ಕುಟುಂಬದಲ್ಲಿ ದುಃಖ ಆವರಿಸಿದೆ.
“ಪುನೀತ್‌ರವರ ಅಕಾಲಿಕ ಮರಣ ನಮಗೆ ಅಪಾರ ದುಃಖ ತಂದಿದೆ. ಸ್ಟಾರ್ ನಟರಾಗಿದ್ದರೂ ಹಮ್ಮು ಬಿಮ್ಮು ತೋರದೆ ಸರಳವಾಗಿರುತ್ತಿದ್ದರು. ಅವರ ಅಂತಿಮ ದರ್ಶನ ಮಾಡಲು ಬೆಂಗಳೂರಿಗೆ ತೆರಳುತ್ತಿದ್ದೇವೆ.” – ಚೇತನ್, ಕ್ಯಾನಹಳ್ಳಿ ಗ್ರಾಮದ ಕಾಫಿ ಬೆಳೆಗಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.