ಕೆಂಪೇಗೌಡ ಜಯಂತಿ ದಿನ ಸರ್ಕಾರಿ ರಜೆಗೆ ಆಗ್ರಹ
Team Udayavani, Jun 28, 2018, 11:12 AM IST
ಹೊಳೆನರಸೀಪುರ: ನಾಡಿನ ಹಲವು ಮಹಾನ್ ನಾಯಕರ ಮತ್ತು ದಾರ್ಶನಿಕರ ಜಯಂತಿಗಳಿಗೆ ರಾಜ್ಯ ಸರ್ಕಾರ ಸರ್ಕಾರಿ ರಜೆ ನೀಡುತ್ತಿದ್ದು ಅದರಂತೆ ನಾಡ ಪ್ರಭು ಕೆಂಪೇಗೌಡ ಅವರ ಜಯಂತಿ ದಿನದಂದು ಸಹ ಸರ್ಕಾರಿ ರಜೆ ಘೋಷಿಸುವಂತಾಗಬೇಕು ಎಂದು ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಒತ್ತಾಯಿಸಿದರು.
ತಾಲೂಕು ಆಡಳಿತ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಬಗ್ಗೆ ತಾವು ಸಚಿವ ರೇವಣ್ಣ ಅವರಲ್ಲಿ ಮಾತನಾಡಿದ್ದು ಈ ರಜೆ ತರುವ ಸಲುವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಾಸ್ತಾಪಿಸಿ ಮುಂದಿನ ವರ್ಷದಿಂದ ಸರ್ಕಾರಿ ರಜೆ ಅನುಷ್ಠಾನಕ್ಕೆ ಬರುವಂತೆ ಮಾಡಲು ಮನವಿ ಮಾಡಿರುವುದಾಗಿ ತಿಳಿಸಿದ್ದು ನಮ್ಮ ಪ್ರಸ್ತಾವನೆಗೆ ರೇವಣ್ಣ ಸ್ಪಂದಿಸಿದ್ದಾರೆ ಎಂದರು.
ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ ಅವರಿಗೆ ಸ್ವಾರ್ಥ ಎಂಬುದು ಇರಲಿಲ್ಲ ಎಂಬುದಕ್ಕೆ ಬೆಂಗಳೂರಿನಲ್ಲಿ ಎಲ್ಲ ವರ್ಗದವರಿಗೂ ಒಂದೊಂದು ಪ್ರದೇಶವನ್ನು ಕಲ್ಪಿಸಿ ಅಲ್ಲಿಗೆ ಆಯಾ ವರ್ಗದವರ ಪ್ರದೇಶವೆಂದು ಗುರುತಿಸಿದ್ದರು. ಆದರೆ ಕೆಂಪೇಗೌಡ ಅವರು ಬೆಂಗಳೂರಿನಲ್ಲಿ ಎಲ್ಲಿಯೂ ಗೌಡರ ನಗರ, ವಕ್ಕಲಿಗರ ಪಾಳ್ಯ ಎಂಬುದನ್ನು ಗುರುತಿಸದೆ ಇರುವುದೇ ಸಾಕ್ಷಿಯಾಗಿದೆ ಎಂದರು.
ನಾಡ ಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಮತ್ತಷ್ಟು ಆರ್ಥಗರ್ಭಿತವಾಗಿ ಆಚರಿಸುವಂತಾಗಬೇಕು, ಅದಕ್ಕಾಗಿ ಮುಂದಿನ ವರ್ಷ 2019 ರ ಜೂನ್ 27 ಅವರ ಜಯಂತಿ ಆಚರಣೆಗೆ ಮೊದಲು ತಮಗೂ ಮಾಹಿತಿ ದೊರೆತಲ್ಲಿ ತಾವುಗಳು ಸಹಕಾರದ ಹಸ್ತ ನೀಡುವುದಾಗಿ ಭರವಸೆ ನೀಡಿದರು.
ಹಾಸನದ ಎವಿಕೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಎಲ್.ಮಲ್ಲೇಶಗೌಡ ಮಾತನಾಡಿ, ನಾಡಪ್ರಭು ಎಂಬುದನ್ನು ಪಡೆಯುವುದು ಸಾಧಾರಣ ವಿಷಯವಲ್ಲ ಏಕೆಂದರೆ ಈ ನಾಡಪ್ರಭು ಎಂಬುದು ಸಮಾಜದಲ್ಲಿನ ಎಲ್ಲರನ್ನು ಸಮನಾಗಿ ಕಾಣುವವರಿಗೆ ಮಾತ್ರ ಈ ಹೆಗ್ಗಳಿಗೆ ಹೆಸರು ಬರಲು ಸಾಧ್ಯ ಎಂದರು. ತಹಶೀಲ್ದಾರ್ ಎಸ್.ಕೆ.ರಾಜು ಮಾತನಾಡಿ, ಕೆಂಪೇಗೌಡ ಅವರಿಗೆ ದೂರದೃಷ್ಟಿ ಇದಿದ್ದರಿಂದ ಇಂದು ಬೆಂಗಳೂರು ವಿಶ್ವದ ಗಮನ ಸೆಳೆಯಲು ಕಾರಣವಾಯಿತು. ಕೆಂಪೇಗೌಡ ಅವರು ಒಂದು ಸಮಾಜದ ವ್ಯಕ್ತಿಯಾಗಿ ಗುರುತಿಸಿಕೊಂಡಿರಲಿಲ್ಲ, ಅವರು ಸಹ ಕೃಷಿಕರಾಗಿದ್ದು ಕೊಂಡೆ ಬೆಂಗಳೂರನ್ನು ಕಟ್ಟಲು ಕಾರಣರಾದರು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮ ಆರಂಭಕ್ಕೆ ಮೊದಲು ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಲಾರಿ ಮಾಲೀಕ ಕುಮಾರ್ ಅವರು ನಾಡಪ್ರಭು ಕೆಂಪೇಗೌಡ ವೇಷ ಧರಿಸಿ ಕುದುರೆಯೇರಿ ಮೆರವಣಿಗೆಯಲ್ಲಿ ಹೊರಟದ್ದು ಸಾರ್ವಜನಿಕರ ಗಮನ ಸೆಳೆದರು.. ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ಶಿವಣ್ಣ, ಪುರಸಭೆ ಅಧ್ಯಕ್ಷ ಕೆ.ಆರ್.ಸುಬ್ರಮಣ್ಯ, ಮುಖ್ಯಾಧಿಕಾರಿ ಬಿ.ಸಿ.ಬಸವರಾಜು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಆರ್.ರವಿಕುಮಾರ್, ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಹಾಗು ಜಿಲ್ಲಾ ಪಂಚಾಯಿತಿ ಎಕ್ಯುಕಿಟಿಫ್ ಇಂಜಿನಿಯರ್ ಪ್ರಭು, ಬಿಇಒ ಎಂ.ಶಿವರಾಜು, ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಯ್ಯ, ಪೌರಕಾರ್ಮಿಕ ಚಲುವ, ಸಮಾಜ ಸೇವೆಯಲ್ಲಿ ಕೆ.ಎ.ಲೊಕೇಶ್, ಕ್ರೀಡಾಕ್ಷೇತ್ರದ ತರುಣ್ ಕುಮಾರ್, ಯೋಗಕ್ಷೇತ್ರದ ಕೆ.ಜಿ.ಗಣೇಶ್‌ಭಾಬು ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.