ಖೇಲೋ ಇಂಡಿಯಾ:ಕ್ರೀಡಾಂಗಣ ಅಭಿವೃದ್ಧಿ
Team Udayavani, Jul 6, 2021, 2:40 PM IST
ಹಾಸನ: ಖೇಲೋ ಇಂಡಿಯಾ ಯೋಜನೆ ಬಳಸಿ ರಾಜ್ಯದಲ್ಲಿ ಎಲ್ಲ ಕ್ರೀಡಾಂಗಣಗಳ ಅಭಿವೃದ್ಧಿ ಮಾಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೋಜನೆಕಾರ್ಯಕ್ರಮ ಸಂಯೋ ಜನೆ ಮತ್ತು ಸಾಂಖ್ಯೀಕ ಇಲಾಖೆ ಸಚಿವ ನಾರಾಯಣ ಗೌಡ ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ, ಸ್ಥಳೀಯ ಶಾಸಕರು,ಸಂಸದರ ಪ್ರದೇಶಾಭಿವೃದ್ಧಿ, ಬಯಲು ಸೀಮೆ ಪ್ರದೇ ಶಾಭಿವೃದ್ಧಿ ಅನುದಾನ ಬಳಕೆ ಹಾಗೂ ಯೋಜನೆಗಳಪಗ್ರತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆ ಹಾಗೂ ಯುವ ಸಬಲೀಕರಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಎಲ್ಲ ತಾಲೂಕು ಕ್ರೀಡಾಂಗಣಗಳಿಗೂ ತರಬೇತುದಾರರನ್ನು ನೇಮಕ ಮಾಡಲಾಗುವುದು. ಆಟಗಾರರಿಗೆ ಪ್ರೋತ್ಸಾಹ ನೀಡಿ ಕ್ರೀಡೆಯನ್ನು ಉತ್ತಮ ಸ್ಥಿತಿಗೆಕೊಂಡೊಯ್ಯಲಾಗುವುದು ಎಂದರು.
ವಿಶ್ವಾಸಕ್ಕೆ ಪಡೆಯಿರಿ:ಯೋಜನಾ ಇಲಾಖೆಯಲ್ಲಿ ನಂಜುಂಡಪ್ಪ ವರದಿಯಡಿ ಅನುದಾನ ಹಂಚಿಕೆಹಾಗೂ ಅನುಷ್ಠಾನದಲ್ಲಿರುವ ವ್ಯತ್ಯಾಸವನ್ನುಮುಂದಿನ ಸಾಲಿನಿಂದ ಸರಿಪಡಿಸಲಾಗುವುದು.ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆಗಳನ್ನು ಪಡೆದುಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚರ್ಚೆ ನಡೆಸಿ: ಎಸ್‌ಡಿಪಿ ಅನುದಾನದಲ್ಲಿ ಕೃಷಿ ಹೊಂಡ ತೆಗೆಯುವುದನ್ನು ನಿಲ್ಲಿಸಿ ಜಿಪಂ ಕೆರೆಗಳ ಅಭಿವೃದ್ಧಿಕಾಮಗಾರಿಗಳನ್ನುಕೈಗೊಳ್ಳಬೇಕು. ಎಲ್ಲ ಇಲಾಖೆ ಗಳು ನಂಜುಂಡಪ್ಪ ವರದಿಯಡಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಬಿಡುಗಡೆಯಾಗುವ ಹಣ, ಅನುಷ್ಠಾನದ ವೇಳೆ ಶಾಸಕರೊಂದಿಗೆ ಚರ್ಚೆ ನಡೆಸಿ ಕಾಮಗಾರಿ ಆಯ್ಕೆ ಮಾಡಬೇಕುಎಂದು ನಿರ್ದೇಶನ ನೀಡಿದರು.
ಶಾಸಕರಾದ ಎ.ಟಿ.ರಾಮಸ್ವಾಮಿ, ಎಚ್.ಕೆ.ಕುಮಾರಸ್ವಾಮಿ,ಕೆ.ಎಂ.ಶಿವಲಿಂಗೇಗೌಡ,ಕೆ.ಎಸ್.ಲಿಂಗೇಶ್, ಪೀತಂ ಜೆ.ಗೌಡ ಮತ್ತು ಎಂ.ಎ.ಗೋಪಾಲ ಸ್ವಾಮಿ ಮಾತನಾಡಿ, ಯೋಜನೆ ರೂಪಿಸುವಾಗ ಹಾಗೂ ಹಣ ಬಿಡುಗಡೆ ಮಾಡುವುದರಲ್ಲಿ ಆಗುತ್ತಿ ರುವ ವ್ಯತ್ಯಾಸಸರಿಪಡಿಸಬೇಕು ಎಂದರು. ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಮಾಡಿ ತರ ಬೇತುದಾರರನ್ನು ನೇಮಿಸಬೇಕು. ಎಲ್ಲ ತಾಲೂಕು ಗಳಲ್ಲಿ ಕ್ರೀಡಾ ಶಾಲೆ ಪ್ರಾರಂಭಿಸಿ ಎಂದು ಆಗ್ರಹಿಸಿದ ಶಾಸಕರು ತಮ್ಮ ಕ್ಷೇತ್ರದಲ್ಲಿನ ಕ್ರೀಡಾಂಗಣಗಳ ಸ್ಥಿತಿಗತಿಗಳ ಬಗ್ಗೆ ಗಮನ ಸೆಳೆದರು.
ತಾಲೂಕು ಗುರುತಿಸಿ: ಆಲೂರು ತಾಲೂಕು ತುಂಬಾ ಹಿಂದುಳಿದಿದ್ದು, ನಂಜುಂಡಪ್ಪ ವರದಿಯಲ್ಲಿ ಬಿಟ್ಟು ಹೋಗಿದೆ. ಇನ್ನೊಂದು ಸಮಿತಿ ಅಥವಾ ಆಯೋಗ ರಚಿಸಿ ಸದ್ಯದ ಪರಿಸ್ಥಿತಿಯಲ್ಲಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಎಂದು ಶಾಸಕ ಎಚ್.ಕೆ. ಕುಮಾರ ಸ್ವಾಮಿಮನವಿಮಾಡಿದರು.ಈಗಿರುವಪಟ್ಟಿಯಲ್ಲಿಹಾಲಿ ಅಭಿವೃದ್ಧಿ ಹೊಂದಿ ರುವ ತಾಲೂಕು ಗಳನ್ನು ಕೈ ಬಿಟ್ಟು ಇನ್ನೂ ಹಿಂದುಳಿದ ತಾಲೂಕುಗಳನ್ನು ಸೇರಿಸಿ ಎಂದು ಶಾಸಕಪ್ರೀತಂಜೆ ಗೌಡ ಸಲಹೆ ನೀಡಿದರು.
ಕ್ರೀಡೆಗಳಿಗೆ ಒತ್ತು ನೀಡಿ: ಯುವ ಸಬಲೀಕರಣಕ್ಕೆ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಯುವಕರ ಸಬಲೀಕರಣಕ್ಕೆ ಶಿಬಿರಗಳ ಆಯೋಜಿಸ ಬೇಕು ಹಾಗೂ ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡ ಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ಒತ್ತಾಯಿದರು.
ಯುವಕರ ಅಭಿವೃದ್ಧಿಗೆ ಸ್ವ ಸಹಾಯ ಸಂಘಗಳ ರಚಿಸುವುದರ ಮೂಲಕ ಪ್ರೋತ್ಸಾಹ ನೀಡು ವುದರಿಂದ ಸದೃಢಭಾರತ ನಿರ್ಮಾಣಮಾಡಲು ಸಾಧ್ಯ.ಈ ನಿಟ್ಟಿನಲ್ಲಿ ಯುವ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದು ಶಾಸಕ ಕೆ.ಎಂ ಶಿವಲಿಗೇಗೌಡಹೇಳಿದರು.
ಸಿಎಂ ಬದಲಿಸುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ, 100 ರಿಂದ 150 ಸ್ಥಾನ ಗೆಲ್ಲುತ್ತೇವೆ ಎಂದು ಯುವಜನ ಮತ್ತು ಕ್ರೀಡಾ ಸಬಲೀಕರಣ ಸಚಿವ ನಾರಾಯಣ ಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ತಲೆಕೆಡಿಸಿ ಕೊಳ್ಳುವ ಅಗತ್ಯವಿಲ್ಲ. ಸರ್ಕಾರಕ್ಕೆ ತೊಂದರೆ ಆಗಿಲ್ಲ. ಅಭಿವೃದ್ಧಿ ಕಾರ್ಯಗಳಿಗೂ ಹಿನ್ನೆಡೆಯಾಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ನಂಬಿ ಬಿಜೆಪಿಗೆ ಬಂದಿದ್ದೇವೆ ಹೊರತು ಬೇರೆ ಯಾರನ್ನೂ ನಂಬಿ ಬಂದಿಲ್ಲ ಎಂದರು.
ಸಭೆಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಡಾ. ಎಚ್.ಎನ್.ಗೋಪಾಲ ಕೃಷ್ಣ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯೀಕ ಇಲಾಖೆಯ ನಿರ್ದೇಶಕ ಚಂದ್ರಶೇಖರ್, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಪಂ ಸಿಇಒ ಬಿ.ಎ.ಪರಮೇಶ್, ಹಾಸನ ನಗರಸಭೆ ಅಧ್ಯಕ್ಷ ಮೋಹನ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.