ತಾಲೂಕಿನ 55 ಸಾವಿರ ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ಹಣ

1,059 ಮಂದಿ ರೈತರುಕಿಸಾನ್‌ ಸಮ್ಮಾನ್‌ಯೋಜನೆಯಿಂದ ಹೊರಗೆ

Team Udayavani, Dec 16, 2020, 5:10 PM IST

ತಾಲೂಕಿನ 55 ಸಾವಿರ ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ಹಣ

ಚನ್ನರಾಯಪಟ್ಟಣ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ(ಪಿಎಂಕೆಎಸ್‌)ಯಿಂದ ತಾಲೂಕಿನ 55,597 ಮಂದಿ ರೈತರ ಬ್ಯಾಂಕ್‌ ಖಾತೆಗೆ ಸಹಾಯ ಧನ ಜಮೆ ಆಗಿದೆ.

ತಾಲೂಕಿನಲ್ಲಿ ಒಟ್ಟಾರೆಯಾಗಿ 57,143 ಮಂದಿ ಪಿಎಂಕೆಎಸ್‌ವೈ ಯೋಜನೆಯಡಿ ನೋಂದಣಿಪಡೆದಿದ್ದರು. 55,597 ಮಂದಿ ರೈತರು ಇದರಲಾಭ ಪಡೆಯುತ್ತಿದ್ದಾರೆ, ಇನ್ನು 487 ರೈತರ ಕೃಷಿಭೂಮಿ ಹೊಂದಿದ್ದರೂಖಾತೆಯಲ್ಲಿ ಲೋಪವಿದ್ದು, ಸರ್ಕಾರವೇ ಹಣ ತಡೆ ಹಿಡಿದಿದೆ. ಇನ್ನು 1,059 ಮಂದಿ ರೈತರು ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ಹೊರಗೆ ಉಳಿದಿದ್ದು ಇದಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ.

ಹೋಬಳಿವಾರು ವಿವರ: ಕಸಬಾ ಹೋಬಳಿಯಲ್ಲಿ 9,494 ಮಂದಿ ರೈತರು ತಮ್ಮ ಹೆಸರು ನೋಂದಣಿಮಾಡಿಕೊಂಡಿದ್ದು, ಅವರಲ್ಲಿ 9,303 ಮಂದಿ ರೈತರಖಾತೆಗೆ ನೇರವಾಗಿ ಹಣ ಜಮೆಯಾಗಿದೆ. ಇದೇರೀತಿಯಲ್ಲಿ ಹಿರೀಸಾವೆ ಹೋಬಳಿಯಲ್ಲಿ 9,210ರೈತರು ನೋಂದಣಿ ಮಾಡಿಸಿಕೊಂಡಿದ್ದು, 9,054 ಮಂದಿಗೆ ಸಹಾಯಧನ ಬಂದಿದೆ.

ದಂಡಿಗನಹಳ್ಳಿ ಹೋಬಳಿಯ9,656 ಮಂದಿಯಲ್ಲಿ9,340 ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ಯೋಜನೆಹಣ ಬಂದಿದೆ. ಬಾಗೂರು ಹೋಬಳಿಯ 9,149 ರೈತರಲ್ಲಿ 8880 ಮಂದಿಗೆ ಖಾತೆಗೆ ಜಮೆಯಾಗಿದೆ. ಶ್ರವಣಬೆಳಗೊಳ ಹೋಬಳಿಯ 10,001 ರೈತರಲ್ಲಿ 9,650 ಹಾಗೂ ನುಗ್ಗೇಹಳ್ಳಿ ಹೋಬಳಿಯ 9,633 ರೈತರಲ್ಲಿ9,370 ರೈತರು ಸಹಾಯ ಧನ ಪಡೆದಿದ್ದಾರೆ.

ಯೋಜನೆಯಿಂದ ಹೊರಗುಳಿದವರು:

ಕಸಬಾದಿಂದ 71, ಹಿರೀಸಾವೆ 68, ದಂಡಿಗನಹಳ್ಳಿ 42, ಬಾಗೂರು 86, ಶ್ರವಣಬೆಳಗೊಳ 85, ನುಗ್ಗೇ ಹಳ್ಳಿ 46 ಮಂದಿ ರೈತರು ಫೆ.1.2019ರ ನಂತರ ಕೃಷಿಭೂಮಿ ಹೊಸದಾಗಿ ಖರೀದಿ ಮಾಡಿದ್ದು, ಇಲ್ಲವೆಪೌತಿ ಖಾತೆ ಮಾಡಿಸಿಕೊಂಡಿದ್ದಾರೆ. ಅವರಿಗೆಕಿಸಾನ್‌ ಸಮ್ಮಾನ್‌ ಯೋಜನೆ ಸಹಾಯಧನ ಈವರೆಗೆಬಂದಿಲ್ಲ, ಇನ್ನು ಆರು ಹೋಬಳಿಯಿಂದ 73 ರೈತರಹೆಸರಿನಲ್ಲಿ ಕೃಷಿ ಭೂಮಿ ಖಾತೆಹೊಂದಿದ್ದರೂ ಕಂದಾಯ ಇಲಾಖೆಯ ಭೂಮಿ ತಂತ್ರಾಂಶದಲ್ಲಿ ಅಪ್‌ಲೋಡ್‌ ಆಗದ ಪರಿಣಾಮ ಈವರೆಗೆ ಸಹಾಯ ಧನದಿಂದ ಹೊರಗೆ ಉಳಿದಿದ್ದಾರೆ.

ಶೇ.70 ಪೂರ್ಣ: ತಾಲೂಕಿನಲ್ಲಿ ಅಂದಾಜಿನಪ್ರಕಾರ 1.20500 ಕೃಷಿಕರಿದ್ದು, ಅವರಲ್ಲಿ 57143 ರೈತರು ಪಿಎಂಕೆಎಸ್‌ವೈನಲ್ಲಿ ನೋಂದಣಿ ಮಾಡಿದಿದ್ದಾರೆ. ಒಂದು ಲಕ್ಷ ರೈತರಲ್ಲಿ 10 ಸಾವಿರ ರೈತರಪಾವತಿ ಖಾತೆ ಮಾಡಬೇಕಿದ್ದು, ಈ ಯೋಜನೆ ಒಳಪಟ್ಟಿಲ್ಲ, 10 ಸಾವಿರ ಮಂದಿ ಗ್ರಾಮದಲ್ಲಿ ವಾಸವಾಗಿಲ್ಲ, 6 ಸಾವಿರ ಮಂದಿ ರೈತರು ಕೃಷಿ ರಹಿತಭೂಮಿ ಹೊಂದಿದ್ದಾರೆ. ಸಾವಿರಾರು ಮಂದಿ ಕೃಷಿಭೂಮಿ ಹೊಂದಿದ್ದು, ವ್ಯವಸಾಯ ಮಾಡುತ್ತಿದ್ದುಸೂಕ್ತ ದಾಖಲೆ ಹೊಂದಿಲ್ಲ. ಸರ್ಕಾರಿ ಇಲಾಖೆ ಸಿಬ್ಬಂದಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವವರು, ತಾಪಂ ಹಾಲಿ, ಮಾಜಿ, ಜಿಪಂ ಹಾಲಿ, ಮಾಜಿ, ಲೋಕಸಭೆ ಹಾಲಿ, ಮಾಜಿ ಸದಸ್ಯರು, ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್‌ ಹಾಲಿ, ಮಾಜಿ ಸದಸ್ಯರು, ರಾಜ್ಯಸಭಾಸದಸ್ಯರು ಹೀಗೆ ಜನಪ್ರತಿನಿಧಿಗಳು ಜನಸೇವೆಮಾಡುವ ಹಾಲಿ, ಮಾಜಿ ಜನಪ್ರತಿನಿಧಿಗಳು ಈ ಯೋಜನೆಯಿಂದ ಹೊರಗೆ ಉಳಿದಿದ್ದಾರೆ.

ಕೃಷಿ ಸಾಲ ಮನ್ನಾಯೋಜನೆ ಉಳ್ಳವರ ಪಾಲಾಗುತ್ತಿದೆ.ಕೇಂದ್ರ ಸರ್ಕಾರ ಎಲ್ಲ ರೈತರಿಗೂ ವಾರ್ಷಿಕ 6 ಸಾವಿರ ರೂ. ಹಣಖಾತೆಗೆ ಜಮಾ ಮಾಡುತ್ತಿದೆ. ಇನ್ನು ರಾಜ್ಯಸರ್ಕಾರ ಸಹ ವಾರ್ಷಿಕ 4 ಸಾವಿರ ರೂ.ನೀಡುವ ಮೂಲಕ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಕೆ.ಬಿ.ಶಿವಶಂಕರ್‌, ಕಾಂತರಾಜಪುರ, ಕೃಷಿಕ

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

Hasanamabe

Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್‌ ರದ್ದು

HD-Revanna

Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್‌.ಡಿ.ರೇವಣ್ಣ ಕಿಡಿ

BYV-Hasan

Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್‌: ಬಿ.ವೈ.ವಿಜಯೇಂದ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

6

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

5

Udupi: ಜಿಲ್ಲೆಯ ಬ್ಲ್ಯಾಕ್‌ ಸ್ಪಾಟ್‌ 30ರಿಂದ 20ಕ್ಕೆ ಇಳಿಕೆ

Suvarna-obama

Belagavi Session: ಬರಾಕ್‌ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.