ಕಲ್ಪತರು ತಾಲೂಕಿನಲ್ಲೂ ಗಂಗೆಗೆ ಬರೆ

41 ಗ್ರಾಪಂ ಪೈಕಿ 12 ಗ್ರಾಪಂ ವ್ಯಾಪ್ತಿಯಲ್ಲಿ ನೀರಿಗೆ ಸಮಸ್ಯೆ

Team Udayavani, Apr 12, 2021, 1:28 PM IST

ಕಲ್ಪತರು ತಾಲೂಕಿನಲ್ಲೂ ಗಂಗೆಗೆ ಬರೆ

ಚನ್ನರಾಯಪಟ್ಟಣ: ಜಿಲ್ಲೆಯ ಹೇಮಾವತಿ ಎಡದಂಡೆ ನಾಲೆ ತಾಲೂಕಿನ ದಂಡಿಗನಹಳ್ಳಿ, ಕಸಬಾ,ಶ್ರವಣಬೆಳಗೊಳ, ಬಾಗೂರು ಹೋಬಳಿಯ ಹೃದಯಭಾಗದಲ್ಲಿ ಹಾದು ಹೋಗಿದ್ದರೂ ಬೇಸಿಗೆಯಲ್ಲಿ ಕಲ್ಪತರು ನಾಡಿನಲ್ಲಿ ಗಂಗೆಗೆ ಬರವಿದೆ.

ಹಾಸನ ಜಿಲ್ಲೆಯ ಕಲ್ಪತರು ತಾಲೂಕು ಎಂಬಹೆಗ್ಗಳಿಕೆ ಹೊಂದಿದ್ದು ತಾಲೂಕಿನ 41 ಗ್ರಾಪಂಗಳ ಪೈಕಿ12 ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಕುಡಿವನೀರಿನ ಸಮಸ್ಯೆ ಉಲ್ಬಣವಾಗಿದ್ದು ಮಹಿಳೆಯರುತಮ್ಮ ಮನೆಗೆ ನೀರು ತರಲು ನಿತ್ಯವೂ ಕಿ.ಮೀ. ವರೆಗೆ ಸಂಚಾರ ಮಾಡುವಂತಾಗಿದೆ.

ತಾಲೂಕಿನ ಕಸಬಾ ಹೊರತುಪಡಿಸಿದರೆ ಹಿರೀಸಾವೆ, ಶ್ರವಣಬೆಳಗೊಳ, ನುಗ್ಗೇಹಳ್ಳಿ, ಬಾಗೂರುಹಾಗೂ ದಂಡಿಗನಹಳ್ಳಿ ಹೋಬಳಿ ಕೆಲ ಗ್ರಾಮದಲ್ಲಿಅಂತರ್ಜಲ ಕುಸಿತವಾಗಿದ್ದು ಕೊಳವೆ ಬಾವಿಯಲ್ಲಿನೀರು ಬರುತ್ತಿಲ್ಲ, ಇದರಿಂದ ಹಲವು ಗ್ರಾಮದಲ್ಲಿನೀರಿನ ಸಮಸ್ಯೆ ಉಲ್ಬಣವಾಗಿದೆ. ಮಹಿಳೆಯರು ಖಾಸಗಿ ಕೊಳವೆ ಬಾವಿ ಇರುವೆಡೆಗೆ ತೆರಳಿ ನಿತ್ಯ ಕುಡಿವ ನೀರು ಹೊತ್ತು ತರುವಂತಾಗಿದೆ.

ಖಾಸಗಿ ಬಾವಿ ಬಂದ್‌: ಮಳೆಗಾಲದಲ್ಲಿ ಗ್ರಾಮದಅನೇಕ ರೈತರ ತೋಟದಲ್ಲಿನ ಕೊಳವೆ ಬಾವಿಯಲ್ಲಿನೀರು ದೊರೆಯುತ್ತಿತ್ತು. ಅಂದು ಅಲ್ಲಿಂದ ನೀರುತಂದು ಜೀವನ ನಡೆಸುತ್ತಿದ್ದರು. ಬೇಸಿಗೆಪ್ರಾರಂಭವಾಗುತ್ತಿರುವ ಸಮಯದಲ್ಲಿ ಗ್ರಾಮಸ್ಥರಿಗೆ ನೀರು ನೀಡಲು ಮುಂದಾದರೆ ತಮ್ಮ ತೋಟಕ್ಕೆಹಾಗೂ ಇತರ ಬೆಳೆಗೆ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ಖಾಸಗಿ ಕೊಳವೆ ಬಾವಿ ಮಾಲೀಕರು ಕುಡಿಯುವ ನೀರು ಕೊಡಲು ಮುಂದಾಗುತ್ತಿಲ್ಲ.

ಏತನೀರಾವರಿ ಯೋಜನೆ: ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆ ಯಾಗಿದೆ. ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿಏತನೀರಾವರಿಯಿಂದಾಗಿ ಬಳದರೆ, ಕುದೂರುಹಾಗೂ ದಂಡಿಗನಹಳ್ಳಿ ಹೋಬಳಿಯ ಹತ್ತಾರುಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ.

ನುಗ್ಗೇಹಳ್ಳಿ, ಹಿರೀಸಾವೆ, ಜುಟ್ಟನಹಳ್ಳಿ ಯೋಜನೆ:

ಶ್ರವಣಬೆಳಗೊಳ ವಿಧಾನ ಸಭಾ ವ್ಯಾಪ್ತಿಯಲ್ಲಿ ನುಗ್ಗೇಹಳ್ಳಿ ಏತನೀರಾವರಿ ಯೋಜನೆ ಪೂರ್ಣ ಗೊಂಡಿದ್ದು ಪ್ರಾಯೋಗಿಕವಾಗಿ ನೀರು ಕೆರೆಗಳಿಗೆ ನೀರು ತುಂಬಿಸಿರು ವುದರಿಂದ ನುಗ್ಗೇಹಳ್ಳಿ, ಜಂಬೂರು, ಕಲ್ಕೆರೆ ಭಾಗದ ಕೆಲ ಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ನೀರು ದೊರೆಯುತ್ತಿದೆ. ಹಿರೀಸಾವೆ- ಜುಟ್ಟನಹಳ್ಳಿ ಯೋಜನೆಯಿಂದ ಬೆಕ್ಕಾ, ಮತಿಗಟ್ಟಜುಟ್ಟನಹಳ್ಳಿ ವ್ಯಾಪ್ತಿಯ ಕೆಲ ಗ್ರಾಮದ ಕೆರೆಗಳಿಗೆನೀರು ತುಂಬಿಸಿರುವುದರಿಂದ ಇಲ್ಲಿಯೂ ಸಮಸ್ಯೆ ಅಷ್ಟಾಗಿ ಕಂಡು ಬಂದಿಲ್ಲ.

ವಾರದಲ್ಲೇ ಕೊಳವೆ ಬಾವಿ ನಿಂತೋಯ್ತು :

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಇರುವುದರಿಂದ ತಾಲೂಕು ಆಡಳಿತಭೇಟಿ ನೀಡಿ ಸಮಸ್ಯೆ ಇರುವ ಗ್ರಾಮವನ್ನುಪತ್ತೆ ಹಚ್ಚಿ ಶಾಸಕ ಸಿ.ಎನ್‌.ಬಾಲಕೃಷ್ಣರಗಮನಕ್ಕೆ ತಂದರೂ ಕೂಡಲೇ ಶಾಸಕರುಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿ ಪಂಪ್‌ಸೆಟ್‌ ಅಳವಡಿಸಿ ನೀರಿನ ಸಮಸ್ಯೆಬಗೆಹರಿಸಿದ್ದರು. ವಾರದಲ್ಲಿಯೇ ಕೊಳವೆಬಾವಿಯಲ್ಲಿ ನೀರು ಬತ್ತಿಹೋಗಿದ್ದು ತಾಲೂಕಿನಲ್ಲಿ ಅಂರ್ಜಲ ಕುಸಿಯುತ್ತಿದೆ.

ಸಮಸ್ಯೆ ಇರುವ ಗ್ರಾಮಗಳು : ಹಿರೀಸಾವೆ ಗ್ರಾಪಂ ವ್ಯಾಪ್ತಿಯ ಕಲ್ಲಹಳ್ಳಿ ಹಾಗೂ ಹಿರೀಸಾವೆಹೋಬಳಿ ಕೇಂದ್ರ, ಬಾಳಗಂಚಿ ಗ್ರಾಪಂ ವ್ಯಾಪ್ತಿಯ ತಿಮ್ಮಾಪುರ,ಬ್ಯಾಡರಹಳ್ಳಿ, ಕಾವಲು ಹೊಸೂರು. ದಮ್ಮನಿಂಗಲ ಗ್ರಾಪಂನಮಜ್ಜನಹಳ್ಳಿ, ಮತ್ತಿಗಟ್ಟ ಗ್ರಾಪಂನ ಕಮರವಹಳ್ಳಿ, ಜೋಳಂಬಳ್ಳಿ,ಕಬ್ಟಾಳು ಗ್ರಾಪಂನ ಡಿಂಕ ಕೊಪ್ಪಲು, ಗೌಡಗಡರೆ ಗ್ರಾಪಂನಬಡಕನಹಳ್ಳಿ, ದಿಡಗ ಗ್ರಾಪಂ ಕೇಂದ್ರದಲ್ಲಿಯೂ ನೀರಿನ ಸಮಸ್ಯೆಇದೆ. ಸಂತೆಶಿವರ ಗ್ರಾಪಂನ ಯಾಚನಘಟ್ಟ, ಕಲ್ಕೆರೆ ಗ್ರಾಪಂನೆಟ್ಟೆಕೆರೆ, ತಗಡೂರು ಗ್ರಾಪಂನ ಕಲ್ಲುಮಲ್ಲೇನಹಳ್ಳಿ ಇನ್ನುಮಟ್ಟನವಿಲೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಯೂಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬಾಗೂರುಹೋಬಳಿ ಕೇಂದ್ರ ಗಡಿಯಲ್ಲಿನ ಕೆಲ ಗ್ರಾಮದಲ್ಲಿ ಮುಂದಿನ ತಿಂಗಳಲ್ಲಿ ಸಮಸ್ಯೆ ಉಂಟಾಗುವ ಲಕ್ಷಣಗಳು ಕಾಣುತ್ತಿವೆ.

ಸಮಸ್ಯೆ ಇರುವ ಕಡೆ ಕೊಳವೆ ಬಾವಿ ಕೊರಿಸಲಾಗಿದೆ. ಎಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ. ಆ ಭಾಗದಲ್ಲಿಖಾಸಗಿ ಕೊಳವೆ ಬಾವಿಯಿಂದ ಜನರಿಗೆ ನೀರುಕೊಡಿಸುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ.ಕೆಲ ಕಡೆಯಲ್ಲಿ ಟ್ಯಾಂಕರ್‌ ಮೂಲಕ ನೀರುಸರಬರಾಜು ಮಾಡಲಾಗುತ್ತಿದೆ. ಸುನಿಲ್‌ಕುಮಾರ್‌, ತಾಪಂ ಇಒ

ಪ್ರತಿ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುತ್ತದೆ. ಯಾರಾದರೂ ತೋಟಕ್ಕೆ ನೀರು ಬಿಟ್ಟುಕೊಂಡಾಗ ಅಲ್ಲಿಗೆ ತೆರಳಿ ನೀರು ಪಡೆಯುತ್ತೇವೆ. ಆದಷ್ಟು ಬೇಗ ತೋಟಿ ಏತನೀರಾವರಿ ಯೋಜನೆ ಮುಗಿಸಿದರೆ ಶಾಶ್ವತವಾಗಿ ಸಮಸ್ಯೆ ಬಗೆಹರಿಯಲಿದೆ. ಶಾರದಮ್ಮ, ದಿಡಗ ನಿವಾಸಿ

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.