ಹಳ್ಳಿ ಮೈಸೂರು ಬಸ್‌ ನಿಲ್ದಾಣದಲ್ಲಿ ಸೌಲಭ್ಯದ ಕೊರತೆ 


Team Udayavani, Apr 24, 2022, 3:36 PM IST

23bptph-2-2304bg-2

ಹೊಳೆನರಸೀಪುರ: ತಾಲೂಕಿನ ದೊಡ್ಡ ಹೋಬಳಿಗಳಲ್ಲಿ ಒಂದಾದ ಹಳ್ಳಿಮೈಸೂರು ಹೋಬಳಿ ಕೇಂದ್ರದಲ್ಲಿ ಸಾರಿಗೆ ಬಸ್‌ ನಿಲ್ದಾಣವಿದ್ದರೂ ಸಹ ಮೂಲಭೂತ ಸೌಕರ್ಯ ವಂಚಿತಗೊಂಡು ಸಾರ್ವಜನಿಕರಿಗೆ ದೊರಕ ಬೇಕಾದ ಸೌಲಭ್ಯದಿಂದ ವಂಚಿತಗೊಂಡಿದೆ.

ತಾಲೂಕಿನ ಹನ್ನೆರಡು ಗ್ರಾಪಂಗಳನ್ನು ಹೊಂದಿ ರುವ ಹಳ್ಳಿಮೈಸೂರು ಗ್ರಾಮ ವ್ಯಾಪಾರಿ ಕೇಂದ್ರ ವಾಗಿದ್ದು ನಿತ್ಯ ಸಾವಿರಾರು ಮಂದಿ ಹೋಬಳಿ ಕೇಂದ್ರಕ್ಕೆ ಆಗಮಿಸಿ ತಮ್ಮ ವ್ಯಾಪಾರ ವಹಿವಾಟು ನಡೆಸುವ ಕೇಂದ್ರವಾಗಿದೆ. ಆದರೆ, ಕೇಂದ್ರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಿಲ್ದಾಣ ನಿರ್ಮಿಸಿ ದ್ದರೂ ಸಹ ಮೂಲ ಭೂತ ಸೌರ್ಕಯದಿಂದ ವಂಚಿತಗೊಂಡಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಇನ್ನು ಬಸ್‌ನಿಲ್ದಾಣದ ನೆಲ ಸಂಪೂರ್ಣ ದಪ್ಪದಪ್ಪ ಕಲ್ಲುಗಳಿಂದ ಕೂಡಿದ್ದು ಇವುಗಳನ್ನು ಕಲ್ಪಿಸಬೇಕಾದ ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ಸಹ ಹರಿಸಿಲ್ಲ. ಜೊತೆಗೆ ಈ ಹೋಬಳಿ ಕೇಂದ್ರ ಜಿಪಂ, ಗ್ರಾಪಂ ಹೊಳೆನರಸೀಪುರಕ್ಕೆ ಬರುತ್ತದೆ. ಇನ್ನು ವಿಧಾನ ಸಭಾ ಚುನಾವಣೆಯಲ್ಲಿ ಪಕ್ಕದ ಅರಕಲಗೂಡು ಕ್ಷೇತ್ರಕ್ಕೆ ಬರುವುದರಿಂದ ಇಬ್ಬರು ಶಾಸಕರುಗಳಾದ ಎಚ್‌.ಡಿ.ರೇವಣ್ಣ ಮತ್ತು ಎ.ಟಿ.ರಾಮಸ್ವಾಮಿ ಅವರುಗಳ ತಾತ್ಸರದಿಂದ ಇಂದು ಮೂಲ ಭೂತ ಸೌಕರ್ಯದಿಂದ ವಂಚಿತಗೊಂಡು ಪ್ರಯಾಣಿಕರು ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ.

ಅಭಿವೃದ್ಧಿಗೆ ಇಚ್ಛಾ ಶಕ್ತಿ ಕೊರತೆ: ಕಳೆದ 2008 ರವರೆಗೆ ಈ ಹೋಬಳಿ ಕೇಂದ್ರ ಹೊಳೇನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. ಆದರೆ, 2008ರಲ್ಲಿ ಕ್ಷೇತ್ರ ವಿಂಗಡಣೆಯಾದ ಹಳ್ಳಿಮೈಸೂರು ಅರಕಲಗೂಡು ಕ್ಷೇತ್ರಕ್ಕೆ ಹೋಯಿತು. ಇದರ ಪರಿಣಾಮ ಇಂದು ಈ ಹೋಬಳಿ ಕೇಂದ್ರ ಜನಪ್ರತಿನಿಧಿಗಳ ಅಸಡ್ಡೆ ಮತ್ತು ತಿರಸ್ಕಾರದಿಂದ ಇಂದು ಸಂಪೂರ್ಣ ಮೂಲೆಗುಂಪಾಗಿದೆ. ಸೌಲಭ್ಯ ವಂಚಿತ: ಕಳೆದ 2008 ರಿಂದ 2018 ರವರೆಗೆ ಎ.ಮಂಜು ಶಾಸಕರಾಗಿ ಪ್ರತಿನಿಧಿಸಿದ್ದರು. ಅದರಂತೆ 2018ರಲ್ಲಿ ಎ.ಟಿ. ರಾಮಸ್ವಾಮಿ ಶಾಸಕರಾಗಿದ್ದು ಆಲ್ಲಿಂದ ಇಂದಿನವರೆಗೆ ಈ ಹೋಬಳಿ ಕೇಂದ್ರಕ್ಕೆ ದೊರಕಬೇಕಾದ ಸವಲತ್ತುಗಳು ದೊರಕದೆ ಪೂರ್ಣ ವಂಚಿತವಾಗಿದೆ. ಈ ಹೋಬಳಿ ಕೇಂದ್ರದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಸ್ಪಂದಿಸಿ ಹೋಬಳಿ ಕೇಂದ್ರದಲ್ಲಿನ ಸಾರಿಗೆ ಬಸ್‌ ನಿಲ್ದಾಣದ ಆಭಿವೃದ್ಧಿಗೆ ಕೈ ಜೋಡಿಸುವರೆ ಎಂಬದುನ್ನು ಕಾದು ನೋಡಬೇಕಿದೆ.

ಮೂಲ ಸೌಕರ್ಯ ಕೊರತೆ : ಬಸ್‌ ನಿಲ್ದಾಣ ನಿರ್ಮಾಣಗೊಂಡು ಹತ್ತಾರು ವರ್ಷಗಳೇ ಕಳೆದಿದೆ. ಬಸ್‌ ನಿಲ್ದಾಣಕ್ಕೆ ಮೇಲ್ಛಾವಣಿಯೇ ಇಲ್ಲ. ಈ ಗ್ರಾಮಕ್ಕೆ ಸುಮಾರು ನೂರಕ್ಕೂ ಹೆಚ್ಚು ಸಾರಿಗೆ ಬಸ್ಸುಗಳು ಬಂದು ಹೋಗುತ್ತದೆ. ಆದರೆ ಬಹುತೇಕ ಬಸ್ಸುಗಳು ನಿಲ್ದಾಣಕ್ಕೆ ಬರದೆ ನೇರವಾಗಿ ಬಸ್‌ ನಿಲ್ದಾಣದ ಮುಂದೆ ಸಾಗುತ್ತವೆ. ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೂರಲು ಆಸನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಇಲ್ಲವಾಗಿದೆ. ಪ್ರಸ್ತುತ ಸಾರಿಗೆ ಬಸ್‌ನಿಲ್ದಾಣದಲ್ಲಿ ಈಗ ಖಾಸಾಗಿ ಕಾರುಗಳು, ಲಾರಿಗಳು ಮತ್ತು ಎತ್ತಿನಗಾಡಿಗಳು ನಿಲ್ಲುವ ಕೇಂದ್ರವಾಗಿ ಪರಿವರ್ತನೆ ಆಗಿದೆ. ಸಾರಿಗೆ ಇಲಾಖೆಯ ಸಂಚಾರಿ ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಬೀಗ ಜಡಿದಿದರುವುದು ಕಾಣಬಹುದಾಗಿದೆ.

ಟಾಪ್ ನ್ಯೂಸ್

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.