ಅನುದಾನ ಬಂದರೂ ಗ್ರಾಮಾಭಿವೃದಿ ಮರೀಚಿಕೆ


Team Udayavani, Feb 7, 2022, 1:22 PM IST

ಅನುದಾನ ಬಂದರೂ ಗ್ರಾಮಾಭಿವೃದಿ ಮರೀಚಿಕೆ

ಚನ್ನರಾಯಪಟ್ಟಣ: ಅಧಿಕಾರ ವಿಕೇಂದ್ರಿಕರಣ ಮಾಡಿ, ಗ್ರಾಮಸ್ಥರ ಕೈಗೆ ನೇರ ಮತ್ತು ಹೆಚ್ಚಿನ ಅಧಿಕಾರ ಎಂಬ ಘೋಷಣೆಯೊಂದಿಗೆ ಐದು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಗ್ರಾಪಂಗೆ ಕಳೆದ ಒಂದು ದಶಕದಿಂದ ಸಾಕಷ್ಟು ಬದಲಾವಣೆ ಮಾಡಿ, ಕೇಂದ್ರ ಹಾಗೂ ರಾಜ್ಯಸರ್ಕಾರದಿಂದ ವಿವಿಧ ಯೋಜನೆಯಡಿ ಸಾಕಷ್ಟುಅನುದಾನ ಹರಿದು ಬರುತ್ತಿದೆ. ಆದರೂ, ಗ್ರಾಮಗಳಲ್ಲಿಮಾತ್ರ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದ್ದು,ಅಭಿವೃದ್ಧಿ ಮರೀಚಿಕೆಯಾಗಿದೆ.

ಗ್ರಾಪಂಗಳ ಕಾರ್ಯವೈಖರಿ ಹಾಗೂ ಸಾಧನೆಯ ಬಗ್ಗೆ ಹಲವಾರು ರೀತಿಯ ಅಸಮಾಧಾನ ಜನರಲ್ಲಿದೆ.ಅಧಿಕಾರ ಹಾಗೂ ಅನುದಾನ ಸರಿಯಾಗಿ ಇರುವಾಗಸಮಸ್ಯೆಗಳಿಗೆ ಏಕೆ ಪರಿಹಾರವಿಲ್ಲ ಎಂಬ ಹತ್ತಾರುಪ್ರಶ್ನೆಗಳು ಕಾಡುತ್ತಿವೆ. ವಿಧಾನ ಸಭಾ ಹಾಗೂಲೋಕಸಭಾ ಕ್ಷೇತ್ರಗಳಂತೆ ಗ್ರಾಪಂ ಮತ್ತುಪಂಚಾಯಿತಿಯ ಕ್ಷೇತ್ರಗಳ ಮೌಲ್ಯಮಾಪನ ಸಹ ಆಗಬೇಕು ಎಂಬುದು ಜನರ ಆಗ್ರಹವಾಗಿದೆ.

ಗ್ರಾಮಗಳ ಚಿತ್ರಣ ಬದಲಾವಣೆ ಯಾವಾಗ?: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಬರುವಷ್ಟು ಅನುದಾನ ಬೇರೆ ಯಾವ ಯೋಜನೆಗೆಬರುತ್ತಿಲ್ಲ. ಈ ಅನುದಾನ ಸರಿಯಾಗಿಉಪಯೋಗಿಸಿಕೊಂಡರೆ, ದೇಶದಲ್ಲಿನ ಎಲ್ಲಾ ಗ್ರಾಮಗಳ ಚಿತ್ರಣ ಬದಲಾಗಬೇಕಿತ್ತು. ಅದಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದು, ಈ ಬಗ್ಗೆ ಯಾರೂ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಭಿಪ್ರಾಯ ಶಿಕ್ಷಣವಂತರಲ್ಲಿ ವ್ಯಕ್ತವಾಗುತ್ತಿದೆ. ಕಳೆದ ಮೂರು ವರ್ಷದಿಂದ ದೇಶದಲ್ಲಿಕೊರೊನಾ ಸಂಕಷ್ಟವಿದೆ. ಈ ಸಮಯದಲ್ಲೂ ಯಶಸ್ವಿಚುನಾವಣೆಗಳು ನಡೆಯುತ್ತಿವೆ. ಪ್ರತಿ ಗ್ರಾಪಂಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿವೆ.

ಮೌಲ್ಯಮಾಪನವಾಗಲಿ: ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಸುಸಂಸ್ಕೃತರು, ವಿದ್ಯಾವಂತಯುವ ಸಮುದಾಯ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಆಯ್ಕೆಯಬೆನ್ನಹಿಂದೆಯೇ ನೂತನ ಸದಸ್ಯರ ಕಾರ್ಯವೈಖರಿ ಮತ್ತು ಗ್ರಾಪಂಗಳ ಮೌಲ್ಯಮಾಪನ ಪ್ರಶ್ನೆ ಕೇಳಿಬಂದಿವೆ. ಇದನ್ನು ಸರ್ಕಾರ ಶೀಘ್ರದಲ್ಲೇ ಜಾರಿ ಮಾಡಬೇಕಿದೆ.

ಗುತ್ತಿಗೆ ಆಸೆ: ಗ್ರಾಪಂಗೆ ವಿವಿಧ ಯೋಜನೆಯಡಿಕೋಟ್ಯಂತರ ಅನುದಾನ ಬರಲಾರಂಭಿಸಿದಂತೆ, ಗ್ರಾಪಂಗೆ ಸದಸ್ಯರಾಗುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಸದಸ್ಯರಾದರೆ ಪಂಚಾಯಿತಿ ಎಲ್ಲಾಕಾಮಗಾರಿಯ ಗುತ್ತಿಗೆಯನ್ನು ತಾವೇ ಪಡೆಯಬಹುದುಎಂಬ ಆಸೆ ಜೀವ ಪಡೆದಿದೆ. ಇದೇ ಅವ್ಯವಹಾರಕ್ಕೆಕಾರಣವಾಗಿದೆ. ಹೀಗಾದರೆ ಗ್ರಾಮದ ಅಭಿವೃದ್ಧಿ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಅಧಿಕಾರಿ ದಾಹ: ದಶಕದ ಹಿಂದೆ ಗ್ರಾಮ ಚುನಾವಣೆಎಂದರೆ ಅದಕ್ಕೊಂದು ಬೆಲೆ ಇತ್ತು. ಅಭ್ಯರ್ಥಿಗಳನ್ನು ಹುಡುಕಬೇಕಿತ್ತು. ಆಗ ಪಂಚಾಯಿತಿಗಳಿಗೆ ಅಷ್ಟೇನುಅನುದಾನ ಬರುತ್ತಿರಲಿಲ್ಲ. ಅಭಿವೃದ್ಧಿ ಕೆಲಸಕ್ಕೆ ಸರ್ಕಾರನೀಡುವ ಹಣ ಸಾಲುತ್ತಿರಲಿಲ್ಲ. ಹೀಗಾಗಿ ಗ್ರಾಪಂಗೆಸ್ಪರ್ಧೆ ಮಾಡಲು ಯಾರೂ ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ.ಆದರೆ, ಈಗ ಎಲ್ಲವೂ ಬದಲಾಗಿದ್ದು, ಸ್ಪರ್ಧೆಗೆ ಪೈಪೋಟಿನಡೆಯುತ್ತಿದೆ. ಭರವಸೆಗಳ ಜೊತೆ ಹಣದ ಹೊಳೆಹರಿಯುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಹಣ ಎಲ್ಲಿಗೆ ಹೋಗುತ್ತಿದೆ: ಗ್ರಾಪಂಗಳು ಈಗಮೊದಲಿನಂತಿಲ್ಲ. ಇಲ್ಲಿ ಇರುವ ರಾಜಕಾರಣ ದೇಶಹಾಗೂ ರಾಜ್ಯದ ಶಕ್ತಿ ಕೇಂದ್ರದಲ್ಲೂ ಕಾಣುವುದಿಲ್ಲ.ರಾಜಕಾರಣದ ಜೊತೆಗೆ ಅನುದಾನದ ಪ್ರಮಾಣ ಹೆಚ್ಚಾಗಿದೆ. ಆದರೆ, ಸಮಸ್ಯೆಗಳು ಮಾತ್ರ ಸಮಸ್ಯೆಯಾಗಿಯೇ ಉಳಿದಿವೆ, ಉಳಿಯುತ್ತಿವೆ.ಸರ್ಕಾರದಿಂದ ಬರುವ ಅನುದಾನ ಏನಾಗುತ್ತಿದೆ

ಎಂದು ಯಾರೂ ಪ್ರಶ್ನೆ ಮಾಡುತ್ತಿಲ್ಲ. ಎಲ್ಲರಿಗೂ ಅಧಿಕಾರದಲ್ಲಿ ಉಳಿಯುವ ಆಸೆ, ಎಷ್ಟು ಅನುದಾನಯಾವುದಕ್ಕೆ ಖರ್ಚಾಗಿದೆ. ಯಾವ ಕ್ಷೇತ್ರಕ್ಕೆ ಎಷ್ಟುಪ್ರಮಾಣದಲ್ಲಿ ಹಣವಿದೆ. ಕಾಮಗಾರಿ ಮಾಡಿಲ್ಲವೆಂದಮೇಲೆ ಹಣ ಎಲ್ಲಿ ಹೋಯಿತು ಎಂಬುದರ ಬಗ್ಗೆಆಲೋಚನೆ ಮಾಡುವವರು ಜಾಣ ಕುರುಡುಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಶಾಸಕರ ಮನೆಯಲ್ಲಿ ಆಯ್ಕೆ: ಗ್ರಾಪಂಗಳು ಶಕ್ತಿಯುತವಾಗಿ ಕಾರ್ಯನಿರ್ವಹಿಸಬೇಕಾದರೆ,ಮೊದಲು ಗ್ರಾಮಸಭೆ ಪ್ರಾಮಾಣಿಕ ಹಾಗೂವ್ಯವಸ್ಥಿತವಾಗಿ ನಡೆಯಬೇಕು. ಸರ್ಕಾರದಯೋಜನೆಗಳು ಸರಿಯಾಗಿ ಜನರಿಗೆ ತಲುಪಬೇಕುಎಂಬ ಉದ್ದೇಶದಿಂದ ಗ್ರಾಮ ಸಭೆ ನಡೆಸಲಾಗುತ್ತದೆ.ಆದರೆ, ಈ ಸಭೆಗಳಿಗೆ ಬೆಲೆಯೇ ಇಲ್ಲ. ರಾಜಕಾರಣ ಗ್ರಾಮ ಸಭೆಯಲ್ಲಿ ನೇರವಾಗಿ ಕಾಣುತ್ತಿವೆ. ಸಭೆನಡೆದರೂ ಕಾಟಾಚಾರಕ್ಕೆ ಎಂಬುದು ಜನರ ನೇರ ಆರೋಪ. ಆಶ್ರಯ ಮನೆ ಗ್ರಾಮಸಭೆ ಮೂಲಕಹಂಚಿಕೆ ಮಾಡಬೇಕು. ಅದರೆ, ಹಲವು ಯೋಜನೆಗಳಫ‌ಲಾನುಭವಿಗಳ ಆಯ್ಕೆ ಇಲ್ಲಿಯೇ ನಡೆಯಬೇಕು.ಇದಾಗುತ್ತಿಲ್ಲ. ಶಾಸಕರ ಮನೆಯಲ್ಲಿ ಫ‌ಲಾನುಭವಿಗಳಆಯ್ಕೆ ನಡೆಯುತ್ತಿವೆ ಎಂದು ಜನರು ಆರೋಪಿಸಿದ್ದಾರೆ.

ಗ್ರಾಮ ಸಭೆಗೆ ಶಕ್ತಿ ತುಂಬಿ: ನಿಜವಾದ ಫ‌ಲಾನುಭವಿಗಳು ಆಶ್ರಯ ಮನೆಗಳಿಂದ ವಂಚಿತ ರಾಗುತ್ತಿರುವುದಲ್ಲದೆ, ಹಲವು ಯೋಜನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಶಾಸಕರ ಬೆಂಬಲಿಗರು ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರಿ ಯೋಜನಯನ್ನು ಪಡೆಯುತ್ತಿದ್ದಾರೆ. ಇದರ ಬಗ್ಗೆಸರ್ಕಾರ ಅಥವಾ ಗ್ರಾಮೀಣಾಭಿವೃದ್ಧಿ ಇಲಾಖೆಪರಿಶೀಲನೆ ಮಾಡುವ ಗೋಜಿಗೆ ಹೋಗಿಲ್ಲ. ಗ್ರಾಮಸಭೆಗೆ ಶಕ್ತಿ ತುಂಬಿದರೆ, ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಗ್ರಾಪಂ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪರಿಣಾಮಕಾರಿಯಾಗಿ ಗ್ರಾಮ ಸಭೆ ನಡೆಯಲಿ :

ಗ್ರಾಪಂ ಮೌಲ್ಯಮಾಪನ ಆಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಪಂನಿಂದ ದೊಡ್ಡ ಪ್ರಮಾಣದ ನಿರೀಕ್ಷೆ ಮಾಡುವುದು ಕಷ್ಟವಾಗಿದೆ. ಪಂಚಾಯತ್‌ ಆಶಯ ಬಹಳ ಒಳ್ಳೆಯದು. ಆದರೆ, ಅದರ ಸದ್ಬಳಕೆ ಯಾಗುತ್ತಿಲ್ಲ. ಗ್ರಾಮ ಸಭೆಗಳು ಪರಿಣಾಮಕಾರಿಯಾಗಿ ನಡೆಯಬೇಕು. ಇದು ಜಾರಿಗೆ ಬಂದರೆ ಅರ್ಧದಷ್ಟು ಮೌಲ್ಯಮಾಪನ ಮಾಡಿದಂತೆ. ಗ್ರಾಪಂ ವ್ಯಾಪ್ತಿಯಲ್ಲಿ 25 ಇಲಾಖೆಗಳಿದ್ದರೂ ಯಾವುದರ ಮೇಲೂ ನಿಯಂತ್ರಣವಿಲ್ಲ. ಸದಸ್ಯರು ಇದರ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿಜನರಿಗೆ ಮೌಲ್ಯಮಾಪನ ಎಂದರೆ ಏನು ಎಂಬಂತಾಗಿದೆ ಎಂದು ಬೀಮ್‌ ಆರ್ಮಿ ಮುಖ್ಯಸ್ಥ ರವಿಚಂದ್ರ ತಿಳಿಸಿದ್ದಾರೆ.

ಗ್ರಾಪಂಗೆ ಸಾಕಷ್ಟು ಅನುದಾನವನ್ನು ಸರ್ಕಾರ ನೀಡಲಿದೆ. ಇದರೊಂದಿಗೆಎನ್‌ಆರ್‌ಇಜಿ ಮೂಲಕವೂ ರೈತರಿಗೆಸಾಕಷ್ಟು ಪ್ರಯೋಜನೆ ದೊರೆಯಲಿದೆ.ಇದನ್ನು ಸಮರ್ಪಕವಾಗಿ ಜನರಿಗೆತಲುಪಿಸುವ ಕೆಲಸ ಗ್ರಾಪಂ ಪಿಡಿಒಮಾಡಬೇಕು. ಇನ್ನು ಪ್ರತಿ 6 ತಿಂಗಳಿಗೆ ಒಮ್ಮೆಗ್ರಾಮ ಸಭೆ ಮಾಡಿ, ಫ‌ಲಾನುಭವಿಗಳ ಆಯ್ಕೆ ಮಾಡಬೇಕಿದೆ. -ಸುನಿಲ್‌, ತಾಪಂ ಇಒ

ಗ್ರಾಪಂಗಳ ಮೂಲ ಉದ್ದೇಶಈಡೇರಿಲ್ಲ. ಪ್ರತಿ ಗ್ರಾಪಂಗೆ ಸಾಕಷ್ಟುಅನುದಾನ ಬರುತ್ತದೆ. ಆದರೆ, ಈ ಹಣ ಹೇಗೆ, ಯಾವುದಕ್ಕೆ ವಿನಿಯೋಗವಾಗಿದೆಎಂಬ ಮಾಹಿತಿ ಜನರಿಗೆ ಇಲ್ಲದಿರುವುದು ನೋಡಿದರೆ ಭ್ರಷ್ಟಾಚಾರಕ್ಕೆಎಡೆಮಾಡಿಕೊಡುತ್ತಿದೆ. ಅಧಿಕಾರಿಗಳುಇದರತ್ತ ಗಮನ ನೀಡುತ್ತಿಲ್ಲ. ಆದ್ದರಿಂದನಿಯಂತ್ರಣವೇ ಇಲ್ಲದಂತಾಗಿದೆ. ಈಗನೂತನ ಸದಸ್ಯರು ಜಾಗೃತರಾಗಬೇಕು. ಪ್ರತಿಯೋಜನೆ ಅನುಷ್ಠಾನದ ಪರಿಶೀಲನೆ ನಡೆಯಬೇಕು. – ಅಡಗೂರು ಶ್ರೀನಿವಾಸ್‌, ಮಾಹಿತಿ ಹಕ್ಕು ಹೋರಾಟಗಾರ

– ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.