ಜಿಲ್ಲೆಯಲ್ಲಿ ಶೇ.61 ಮುಂಗಾರು ಮಳೆ ಕೊರತೆ
Team Udayavani, Jul 4, 2023, 3:33 PM IST
ಹಾಸನ: ಜಿಲ್ಲೆಯಲ್ಲಿ ಜೂನ್‌ನಲ್ಲಿ ಆರಂಭವಾಗ ಬೇಕಾಗಿದ್ದ ಮುಂಗಾರು ಮಳೆ ವಿಳಂಬವಾಗಿದ್ದು, ಶೇ.61 ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಕಳೆದ ತಿಂಗಳಲ್ಲಿ ವಾಡಿಕೆ ಮಳೆ 171 ಮಿ.ಮೀ. ಆಗಬೇಕಾಗಿತ್ತು. ಆದರೆ, 67.5 ಮಿ.ಮೀ. ಮಾತ್ರ ಸುರಿದಿದ್ದು, ಶೇ.61 ಮಳೆ ಕೊರತೆಯಾಗಿದೆ.
ಈ ವರ್ಷ ಜನವರಿಯಿಂದ ಜೂನ್ ಅಂತ್ಯದವರೆಗೂ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಶೇ.13 ಹೆಚ್ಚು ಮಳೆಯಾಗಿದ್ದು, ಇನ್ನುಳಿದ 6 ತಾಲೂಕುಗಳಲ್ಲಿ ಕುಂಟಿತವಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈ ವರ್ಷ ಜೂನ್ ಅಂತ್ಯದವರೆಗೂ ಶೇ.28 ಮಳೆಯ ಕೊರತೆಯಾಗಿದೆ. ಮಲೆನಾಡು ಭಾಗಗಳಾದ ಸಕಲೇಶಪುರದಲ್ಲಿ ಶೇ.57, ಆಲೂರು ತಾಲೂಕಿನಲ್ಲಿ ಶೇ.35 ಮಳೆ ಕೊರತೆಯಾಗಿದೆ.
ಬೆಳೆಗಳ ಬಿತ್ತನೆ ಶೇ.36.81 ಮಾತ್ರ: ಮಳೆ ಕೊರತೆ ಯಿಂದ ವಿವಿಧ ಬೆಳೆಗಳ ಬಿತ್ತನೆಗೂ ಹಿನ್ನಡೆಯಾಗಿದ್ದು, ಇದುವರೆಗೆ ಕೇವಲ ಶೇ.36.81 ರಷ್ಟು ಮಾತ್ರ ಬಿತ್ತನೆ ಯಾಗಿದೆ. ಜಿಲ್ಲೆಯಲ್ಲಿ 2,45,569 ಹೆಕ್ಟೇರ್ ಬಿತ್ತನೆಯ ಗುರಿಯಿದ್ದು, ಈವರೆಗೆ 90,389 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ರಾಗಿ ಬಿತ್ತನೆ ಗುರಿ 69,000 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಗೆ ಬದಲಾಗಿ 1,240 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಕೇವಲ ಶೇ.1.80ರಷ್ಟು ಗುರಿ ಸಾಧನೆ ಯಾಗಿದೆ. ಮುಸುಕಿನ ಜೋಳದ ಬಿತ್ತನೆ ಗುರಿ 1,05,300 ಹೆಕ್ಟೇರ್‌ಗೆ ಈವರೆಗೆ 63,357 ಹೆಕ್ಟೇರ್ ಸಾಧನೆಯಾಗಿದ್ದು, ಶೇ.60.55 ರಷ್ಟು ಗುರಿ ಸಾಧನೆಯಾಗಿದೆ.
ಗುರಿ ಸಾಧನೆಯಲ್ಲೂ ಹಿನ್ನಡೆ: ದ್ವಿದಳ ಧಾನ್ಯಗಳ ಬಿತ್ತನೆ ಗುರಿ 19,380 ಹೆಕ್ಟೇರ್ ಇದ್ದು, ಈವರೆಗೆ 13,979 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.72.11 ಗುರಿ ಸಾಧನೆ ಯಾಗಿದೆ. ಎಣ್ಣೆಕಾಳುಗಳ ಬಿತ್ತನೆ ಗುರಿ 30,25 ಹೆಕ್ಟೇರ್‌ಗೆ ಬದಲಾಗಿ 759 ಹೆಕ್ಟೇರ್ ಬಿತ್ತನೆಯಾಗಿ ಶೇ.25.9 ರಷ್ಟು ಗುರಿ ಸಾಧನೆಯಾಗಿದ್ದರೆ, ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ 12914 ಹೆಕ್ಟೇರ್‌ಗೆ ಬದಲು 10,547 ಹೆಕೇರ್ ಬಿತ್ತನೆಯಾಗಿ ಶೇ.81.6 ಸಾಧನೆಯಾಗಿದೆ.
ಪ್ರಸಕ್ತ 2000 ಹೆಕ್ಟೇರ್ ನಲ್ಲಿ ಮಾತ್ರ ಆಲೂಗಡ್ಡೆ ಬಿತ್ತನೆ:
ಹಾಸನ: ಈ ವರ್ಷ ಮುಂಗಾರು ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೇವಲ 2000 ಹೆಕ್ಟೇರ್‌ನಲ್ಲಿ ಮಾತ್ರ ಆಲೂಗಡ್ಡೆ ಬಿತ್ತನೆಯಾಗಿದೆ.
ಎರಡು ದಶಕಗಳ ಹಿಂದೆ ಜಿಲ್ಲೆಯಲ್ಲಿ 1.50 ಲಕ್ಷ ಎಕರೆಯಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಆದರೆ ಮಳೆ ಹಾಗೂ ರೋಗ ಭಾದೆಯ ಪರಿಣಾಮ ಆಲೂಗಡ್ಡೆ ಬಿತ್ತನೆ ಪ್ರಮಾಣ ಕುಸಿಯುತ್ತಾ ಬಂದಿದ್ದು ಕಳೆದ 7 ಸಾವಿರ ಹೆಕ್ಟೇರ್ ನಲ್ಲಿ ಆಲೂಗಡ್ಡೆ ಬಿತ್ತನೆಯಾಗಿತ್ತು. ಈ ವರ್ಷ 7 ಸಾವಿರ ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆಯ ಗುರಿಯನ್ನು ತೋಟಗಾರಿಕೆ ಇಲಾಖೆ ಹೊಂದಿತ್ತು ಆದರೆ ಈ ವರ್ಷ ಬಿತ್ತನೆ ಪ್ರಮಾಣ 2 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. ಬಿತ್ತನೆಯಾಗಿರುವ ಬೆಳೆಯೂ ಮಳೆ ಕೊರತೆಯಿಂದ ಶೇ. 50 ಕ್ಕಿಂತ ಹೆಚ್ಚು ಪ್ರಮಾಣದ ಬೆಳೆ ನಾಶವಾಗಿದೆ.
ಈ ವರ್ಷ ಜಿಲ್ಲೆಗೆ ಬಿತ್ತನೆ ಆಲೂಗಡ್ಡೆ ಪಂಜಾಬ್‌ನಿಂದ 4.5 ಲಕ್ಷ ಚೀಲಗಳು ಪೂರೈಕೆಯಾಗಿ ಹಾಸನದ ವಿವಿಧ ಶೀತಲಗೃಹಗಳಲ್ಲಿ ದಾಸ್ತಾನಾಗಿತ್ತು. ಆದರೆ ಹಾಸನ ಎಪಿಎಂಸಿಯಲ್ಲಿ ಈ ಬಾರಿ ಕೇವಲ 55 ಸಾವಿರ ಚೀಲಗಳು ಮಾತ್ರ ಮಾರಾಟವಾಗಿವೆ. ನೇರವಾಗಿ ಮಾರಾಟವಾಗಿರುವ ಆಲೂಗಡ್ಡೆಯೂ ಸೇರಿ ಒಟ್ಟು ಮಾರಾಟ ಒಂದು ಲಕ್ಷ ಚೀಲ ತಲಪಬಹುದು. ಆದರೆ ಇನ್ನುಳಿದ ಆಲೂಗಡ್ಡೆ ತರಕಾರಿಗಾಗಿ ಮಾರಾಟವಾಗುತ್ತಿದೆ.
-ಎನ್.ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.