ಮಕ್ಕಳಲ್ಲಿ ಪಠ್ಯೇತರ ಪುಸ್ತಕ ಓದುವ ಹವ್ಯಾಸ ಬೆಳೆಯಲಿ


Team Udayavani, Nov 23, 2019, 3:00 AM IST

makkallalli

ಹಾಸನ: ಮಕ್ಕಳಿಗೆ ಪಠ್ಯದ ವಿಷಯದ ಜೊತೆಗೆ ದಿನ ಪತ್ರಿಕೆಗಳು, ಕಥೆ, ಕಾದಂಬರಿ, ಸಣ್ಣ ಕಥೆಗಳು ಸೇರಿದಂತೆ ಆಸಕ್ತಿದಾಯಕ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಬೇಕು ಎಂದು ಟೈಮ್ಸ್‌ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಅಕ್ಷರ್‌ ಬುಕ್‌ಹೌಸ್‌ ಮಾಲೀಕ ಬಿ.ಕೆ.ಗಂಗಾಧರ್‌ ಹೇಳಿದರು. ನಗರದ ಅಕ್ಷರ ಬುಕ್‌ಹೌಸ್‌ನಲ್ಲಿ ಏರ್ಪಡಿಸಿದ್ದ ಡಾ.ವಿ.ಎಲ್‌.ಶಾಲಿನಿ ಅವರ ಜಯಗಾನ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಯುವಕರು ಪುಸ್ತಕ ಓದುವ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ಪ್ರತಿ ಮನೆಯಲ್ಲೂ ಗ್ರಂಥಾಲಯವಿರಬೇಕು, ಆಗ ಮಾತ್ರ ಮನೆ ಕುಟುಂಬದ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯ. ಇದರಿಂದ ಮಕ್ಕಳು ಸಮಾಜದಲ್ಲಿ ಸಂಸ್ಕಾರಯುತವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಸಾಹಿತ್ಯಿಕ ವಾತಾವರಣಕ್ಕೆ ಬೆಂಬಲ ನೀಡಿ: ಜಿಲ್ಲೆಯಲ್ಲಿ ಸಾಹಿತ್ಯಿಕ ವಾತಾವರಣಕ್ಕೆ ಬೆಂಬಲವಾಗಿ ನಿಲ್ಲಬೇಕು ಎನ್ನುವ ಉದ್ದೇಶದಿಂದ ಹಾಸನದಲ್ಲಿ ಅಕ್ಷರ ಬುಕ್‌ಹೌಸ್‌ ತೆರೆದಿದ್ದು, ಈ ಪುಸ್ತಕದ ಅಂಗಡಿಯ ವಿಳಾಸ ಇಂದಿಗೂ ಬಹುತೇಕ ಜನಿರಗೆ ಗೊತ್ತಿಲ್ಲ. ಆದರೆ ಬಾರ್‌ಅಂಡ್‌ ರೆಸ್ಟೋರೆಂಟ್‌ಗಳು ಸುಲಭವಾಗಿ ವಿಳಾಸದ ಗುರುತುಗಳಾಗುತ್ತಿವೆ ಎಂದು ವಿಷಾದಿಸಿದದರು.

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಪ್ರತಿ ಹೋಬಳಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲೂ ಒಂದು ಉತ್ತಮ ಗ್ರಂಥಾಲಯ ಇಲ್ಲವೇ ಪುಸ್ತಕದ ಮಳಿಗೆಗಳು ಇರಬೇಕು. ಸಮಾಜದಲ್ಲಿ ಅನಾಗರಿಕತೆ ಹಾಗೂ ಅನಕ್ಷರತೆ ಹೋಗಲಾಡಿಸಬೇಕಾದರೆ ಅದು ಶಿಕ್ಷಣದಿಂದ ಮಾತ್ರವೇ ಸಾಧ್ಯ. ಹಾಗಾಗಿ ಗ್ರಾಮೀಣ ಭಾಗದ ಜನರಲ್ಲಿಯೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.

ಸಾಹಿತಿಗಳು ಗಟ್ಟಿತನ ಸಾಬೀತುಪಡಿಸಿ: ಪುಸ್ತಕಗಳನ್ನು ಓದುವವರಿಲ್ಲ ಎನ್ನುವ ನಾವು ಮಕ್ಕಳಿಗೆ ಮೊಬೈಲ್‌ ಕೊಟ್ಟು ಕೂರಿಸುತ್ತೇವೆ. ಇಂದಿಗೂ ಎಸ್‌.ಎಲ್‌.ಭೈರಪ್ಪ, ಪೂರ್ಣಚಂದ್ರ ತೇಜಸ್ವಿ ಅವರಂತಹ ಮೇರು ಸಾತಿಗಳ ಪುಸ್ತಕಗಳ ಸಾವಿರಾರು ಪ್ರತಿಗಳು ನಿತ್ಯವೂ ಮಾರಾಟವಾಗುತ್ತವೆ. ಲೇಖಕಕರು ಸತ್ವಯುತವಾಗಿ ಬರೆದರೆ ಅದನ್ನು ಓದುವವರು ಇದ್ದೇ ಇರುತ್ತಾರೆ.

ಹಾಗಾಗಿ ಯುವ ಸಾಹಿತಿಗಳು ತಮ್ಮ ಗಟ್ಟಿತನವನ್ನು ಸಾಬೀತು ಮಾಡುವ ಮೂಲಕ ಓದುಗ ವಲಯ ಸೃಷ್ಟಿಸಿಕೊಳ್ಳಬೇಕು ಎಂದು ಹೇಳಿದರು. ಆಲೂರು ತಾಲೂಕು ವೈದ್ಯಾಧಿಕಾರಿ ಡಾ.ತಿಮ್ಮಯ್ಯ ಮಾತನಾಡಿ, ಡಾ.ಶಾಲಿನಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದರೂ ವೃತ್ತಿ ಒತ್ತಡದ ನಡುವೆ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಮಕ್ಕಳಿಗೆ ಪುಸ್ತಕ ಪರಿಚಯ: ಕೃತಿ ಕುರಿತು ಸಾಹಿತಿ ಶೈಲಜಾ ಹಾಸನ ಮಾತನಾಡಿ, ಡಾ..ಎಲ್‌.ಶಾಲಿನಿ ತಮ್ಮ ಮೂರನೇ ಕಾದಂಬರಿಯಲ್ಲಿ ಕ್ರೀಡಾಲೋಕದ ಹೋರಾಟವನ್ನು ತೆರೆದಿಟ್ಟಿದ್ದಾರೆ. ಪಾಲಕರು ತಮ್ಮ ಮಕ್ಕಳ ಕ್ರೀಡಾಸಕ್ತಿಯನ್ನು ಪ್ರೋತ್ಸಾಹಿಸುವುದರಿಂದ ಅವರು ಹೇಗೆ ಸಾಧಕರಾಗಬಲ್ಲರು ಎನ್ನುವ ಸಾಮಾನ್ಯ ಕತೆಯನ್ನು ಅತ್ಯಂತ ಆಸಕ್ತಿದಾಯಕವಾಗಿ ಓದುಗರ ಮುಂದಿಟ್ಟಿದ್ದಾರೆ.

ಮಕ್ಕಳಿಗೆ ಪುಸ್ತಕಗಳನ್ನು ಪರಿಚುಸುವ ಮೂಲಕ ಮುಂದಿನ ಪೀಳಿಗೆಯನ್ನು ಸಾಹಿತ್ಯದ ಓದುಗರಾಗಿ ರೂಪಿಸಬೇಕಿದೆ ಎಂದರು. ಹಾಸನ ಪ್ರಕಾಶನದ ಪ್ರಕಾಶಕ ಶಿವಕುಮಾರ್‌, ಟೈಮ್ಸ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಸುರೇಂದ್ರ, ಅಕ್ಷರ ಬುಕ್‌ ಹೌಸ್‌ನ ಶ್ರೀನಾಥ್‌ ಇತರರು ಇದ್ದರು.

ಟಾಪ್ ನ್ಯೂಸ್

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.