ಸಕಲೇಶಪುರದಲ್ಲೂ ಲಾಕ್‌ಡೌನ್
Team Udayavani, Apr 23, 2021, 4:01 PM IST
ಸಕಲೇಶಪುರ: ರಾಜ್ಯ ಸರ್ಕಾರ ಕೋವಿಡ್‌ಮಾರ್ಗಸೂಚಿ ಅನ್ವಯ ಪಟ್ಟಣವನ್ನು ಲಾಕ್‌ಡೌನ್ ಮಾಡಲಾಗುತ್ತಿದ್ದು, ನಿಯಮಪಾಲನೆಗೆಜನರು ಸಹಕರಿಸಬೇಕು ಎಂದು ತಹಶೀಲ್ದಾರ್‌ಜಯ್ ಕುಮಾರ್ ಮನವಿ ಮಾಡಿದರು.
ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಅಗತ್ಯವಸ್ತು ಅಂಗಡಿಗಳನ್ನು ಬಿಟ್ಟು ಉಳಿದ ಅಂಗಡಿಗಳನ್ನು ಲಾಕ್‌ಡೌನ್ ಮಾಡಿಸಿದ ನಂತರ ಮಾತನಾಡಿ, ಜನರ ಜೀವನಕ್ಕಿಂತ ಜೀವ ಮುಖ್ಯಎಂಬ ಚಿಂತನೆ ಇದೆ.
ಕೂಲಿ ಕಾರ್ಮಿ ಕರು, ಕೃಷಿಚಟುವಟಿಕೆ, ಕೈಗಾರಿಕೆ, ಕಚೇರಿ ಯಲ್ಲಿ ಕೆಲಸಮಾಡುವವರಿಗೆ ತೊಂದರೆ ಮಾಡುತ್ತಿಲ್ಲ.ಜನರು ಗುಂಪುಗೂಡುವುದನ್ನು ಹಾಗೂಸೋಂಕು ಹರಡಲು ಕಾರಣವಾಗುವ ಚಟುವಟಿಕೆಗಳನ್ನು ಮಾತ್ರ ಸರ್ಕಾರದ ಮಾ ರ್ಗಸೂಚಿಯಂತೆ ನಿರ್ಬಂಧಿಸಲಾಗಿದೆ.
ತಾ ಲೂಕಿನಲ್ಲಿ ತಕ್ಷಣವೇ ಲಾಕ್‌ಡೌನ್ ಜಾರಿ ಮಾಡಿಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಗ ತ್ಯವಸ್ತುಗಳ ಹೊರತಾಗಿ ಉಳಿದ ಎಲ್ಲಾ ವ್ಯಾಪಾರ, ವಹಿವಾಟು ಬಂದ್ ಮಾಡಲಾಗಿದೆ.ತಾಲೂಕಿನಲ್ಲಿ ಕಠಿಣ ರೂಲ್ಸ್ ಜಾರಿಮಾಡಲಾಗಿದ್ದು, ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್‌ಶಾಪ್ ಗಳು ಸೇರಿ ಜೀವನಾವಶ್ಯಕ ಅಲ್ಲದಎಲ್ಲಾ ಅಂಗಡಿಗಳ ಬಂದ್ ಮಾಡುವಂತೆಆದೇಶಿಸಲಾಗಿದೆ.
ದಿನಸಿ, ಹಾಲು, ಮಾಂಸ,ಮೀನು ಮಾರಾಟ ಹಾಗೂ ಕೃಷಿ ಮತ್ತು ಕಟ್ಟಡನಿರ್ಮಾಣ ಸಂಬಂಧ ಅಗತ್ಯ ವಸ್ತುಗಳಮಾರಾಟಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆಹೋಟೆಲ್‌ಗಳಲ್ಲಿ ಕೇವಲ ಪಾರ್ಸೆಲ್ ಅವಕಾಶನೀಡಲಾಗಿದೆ.
ಜಿಲ್ಲಾಧಿಕಾರಿಗಳ ಮುಂದಿನಆದೇಶದವರೆಗೂ ಇದು ಮುಂದುವರಿಯಲಿದೆ ಎಂದರು. ದಿಢೀರ್ ಲಾಕ್‌ಡೌನ್‌ನಿಂದ ವಿವಿಧ ಊರುಗಳಿಂದ ಪಟ್ಟಣಹಾಗೂ ಬಾಳ್ಳುಪೇಟೆ ಸಂತೆಯಲ್ಲಿ ಮಾರಾಟಮಾಡಲು ತಂದಿದ್ದ ತರಕಾರಿಗಳನ್ನು ಪೂರ್ತಿಮಾರಾಟ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್,ಪರಿಸರ ಎಂಜಿನಿಯರ್ ಸಹನ, ಕಂದಾಯಇಲಾ ಖೆಯ ಸುರೇಶ್ ಪ್ರವೀಣ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.