ಲಾಕ್‌ಡೌನ್ ಸಡಿಲಿಕೆ: ಹಾಸನಕ್ಕೆ ಕೋವಿಡ್ 19
Team Udayavani, May 13, 2020, 10:37 AM IST
ಹಾಸನ: ಲಾಕ್‌ಡೌನ್ ಸಡಿಲಿಕೆಯ ನಂತರ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಲ್ಲಿದ್ದವರು ತಮ್ಮ ಗ್ರಾಮಗಳಿಗೆ ದೌಡಾಯಿಸು ತ್ತಿದ್ದಾರೆ. ಪಾಸ್ ಪಡೆದು ಬರುತ್ತಿರು ವವರನ್ನು ತಡೆಯಲು ಅಧಿಕಾರಿಗಳಿಗೆ ತಡೆ ಯಲು ಸಾಧ್ಯವಾಗುತ್ತಿಲ್ಲ. ಈ ಪರಿಣಾಮ ಹಸಿರು ವಲಯದಲ್ಲಿದ್ದ ಹಾಸನ ಜಿಲ್ಲೆಗೂ ಕೋವಿಡ್ 19 ಮಾಹಾ ಮಾರಿ ಪ್ರವೇಶಿಸಿದೆ.
ಕಳೆದ 48 ದಿನ ಕೋವಿಡ್ 19 ಮುಕ್ತ ಜಿಲ್ಲೆಯ ಪಟ್ಟ ಹೊಂದಿದ್ದ ಜಿಲ್ಲೆಗೆ ಮುಂಬೈನಿಂದ ಬಂದವರ ಪೈಕಿ 5 ಜನರಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದೆ. ಇದು ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿದ ಕೊಡುಗೆಯಾಗಿದೆ. ಸರ್ಕಾರಗಳ ವಿವೇಚನಾ ರಹಿತ ನಿರ್ಧಾರ ಗಳಿಂದ ಈಗ ನೆಮ್ಮದಿ ಯಾಗಿದ್ದ ಹಸಿರು ವಲಯಗಳ ಜನರೂ ನೆಮ್ಮದಿ ಕೆಡಿಸಿಕೊಳ್ಳುವಂತಾಗಿದೆ.
ಜಿಲ್ಲೆಯ ಗಡಿಭಾಗಗಳಲ್ಲಿ 9 ಚೆಕ್‌ಪೋಸ್ಟ್ ಗಳನ್ನು ಪ್ರಾರಂಭಿಸಿದ್ದು. ಮೇ 4 ರಿಂದ ಲಾಕ್‌ಡೌನ್ ಸಡಿಲಗೊಳಿಸಿದ ನಂತರ ಹೊರ ರಾಜ್ಯಗಳಿಂದ ಹಾಸನ ಜಿಲ್ಲೆಗೆ 419 ಜನರು ಅಧಿಕೃತವಾಗಿ ಬಂದಿದ್ದಾರೆ. ಹೊರ ಜಿಲ್ಲೆ ಗಳಿಂದ 4ಸಾವಿರಕ್ಕೂ ಹೆಚ್ಚು ಜನರು ಬಂದಿ ದ್ದಾರೆ. ಹೊರ ರಾಜ್ಯದಿಂದ ಬಂದವರನ್ನು ಚೆಕ್‌ಪೋಸ್‌ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ನೇರವಾಗಿ 14 ದಿನಗಳ ಕ್ವಾರಂಟೈನ್ ಸರ್ಕಾರವೇ ವ್ಯವಸ್ಥೆ ಮಾಡಿರುವ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ.
ಹೊರ ರಾಜ್ಯಗಳಿಂದ ಬಂದವರನ್ನು 14 ದಿನಗಳ ನಂತರ ಕ್ವಾರಂಟೈನ್ ನಂತರ ಸ್ವಾಬ್ ಟೆಸ್ಟ್ ಮಾಡಬೇಕೆಂಬ ಸರ್ಕಾರದ ನಿರ್ದೇಶನ ವಿದ್ದರೂ ಹಾಸನ ಜಿಲ್ಲಾಡಳಿತವು ಕ್ವಾರಂಟೈನ್ ಕೇಂದ್ರಕ್ಕೆ ಬಂದ ತಕ್ಷಣವೇ ಸ್ವಾಬ್‌ಟೆಸ್ಟ್ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದು ಆ ಸಂದರ್ಭದಲ್ಲಿ ಕೋವಿಡ್ 19 ಲಕ್ಷಣ ಕಂಡು ಬಂದರೆ ಮಾತ್ರ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ.
ಹೊರ ರಾಜ್ಯದಿಂದ 3,933 ಮಂದಿ ಆಗಮನ: ಕಳೆದ ಮಾ.24 ರಂದು ಲಾಕ್ ಡೌನ್ ಜಾರಿಯಾದ ದಿನದಿಂದ ಏ.30ರ ವರೆಗೆ ಹೊರ ರಾಜ್ಯಗಳಿಂದ 3,933 ಜನರು ಬಂದಿದ್ದರೆ ಹೊರ ಜಿಲ್ಲೆಗಳಿಂದ 50 ಸಾವಿ ರಕ್ಕೂ ಹೆಚ್ಚು ಜನರು ಬಂದಿದ್ದಾರೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದವರ ಪೈಕಿ 58 ಸಾವಿರ ಜನರ ಮೇಲೆ ನಿಗಾವಹಿಸ ಲಾಗಿತ್ತು. ಆ ಪೈಕಿ 3,205 ಜನರಿಗೆ ಥರ್ಮಲ್ ಸ್ಕೀನಿಂಗ್ ಮಾಡಲಾಗಿದೆ. 1,048 ಜನರು ಐಸೋಲೇಷನ್‌ನಿಂದ ಬಿಡುಗಡೆಯಾಗಿದ್ದಾರೆ.
ಮುಂಬೈನಿಂದಲೇಹೆಚ್ಚು ಆಗಮನ: ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳ ಮತ್ತು ಹಿರೀಸಾವೆ ಹೋಬ ಳಿಯ ಗ್ರಾಮಗಳ ಹೆಚ್ಚು ಜನರು ಮುಂಬೈ ನಲ್ಲಿದ್ದು ಬದುಕು ರೂಪಿಸಿಕೊಂಡಿದ್ದಾರೆ. ಲಾಕ್‌ಡೌನ್ ಅದ ನಂತರ ಅವರೆಲ್ಲರೂ ಅಲ್ಲಿ ಉದ್ಯೋಗವಿಲದೇ ತಮ್ಮ ಸ್ವಗ್ರಾಮ ಗಳಿಗೆ ಬರುತ್ತಿದ್ದಾರೆ. ಮೇ 4ರ ನಂತರ ಸೇವಾ ಸಿಂಧು ಆ್ಯಪ್ ಮೂಲಕ ಪಾಸ್ ಪಡೆದವರು ತಮ್ಮ ಸ್ವಂತ ನೆಲೆಗಳಿಗೆ ತೆರಳ ಬಹುದು ಎಂದು ಸರ್ಕಾರ ಘೋಷಣೆ ಮಾಡಿದ ನಂತರ ಸ್ವಗ್ರಾಮಗಳಿಗೆ ಬರು ತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮೇ12 ರಿಂದ ಅಂತಾರಾಜ್ಯ ರೈಲುಗಳ ಸಂಚಾರ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಲಾಕ್‌ಡೌನ್ ಸಡಿಲಗೊಳಿಸಿ ಹೊರ ರಾಜ್ಯದವರು ಸ್ವಗ್ರಾಮ ಗಳಿಗೆ ವಾಪಸಾಗಲು ಸರ್ಕಾರ ಅನುಮತಿ ನೀಡಿದ್ದರಿಂದ ಹಸಿರು ವಲಯದಲ್ಲಿದ್ದ ಹಾಸನ ಜಿಲ್ಲೆಗೂ ಕೋವಿಡ್ 19 ಬರುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಸರ್ಕಾರ ನಿರ್ಧಾರವನ್ನು ಜಿಲ್ಲಾಡಳಿತ ಪಾಲಿಸಲೇಬೇಕು.
-ಆರ್.ಗಿರೀಶ್, ಜಿಲ್ಲಾಧಿಕಾರಿ
ಲಾಕ್‌ಡೌನ್ ಸಡಿಲಗೊಳಿಸಿದ್ದರಿಂದ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಜನರು ಬರುತ್ತಾರೆ. ಹಾಗಾಗಿ ಈಗ ಹಾಸನ ಜಿಲ್ಲೆಯಲ್ಲೂ ಕೋವಿಡ್ 19 ಸೊಂಕು ಕಂಡು ಬಂದಿದೆ.
-ಆರ್.ಶ್ರೀನಿವಾಸಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
* ಎನ್.ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.