ಋತು ಆಧಾರಿತ ಕೃಷಿಗೆ ಮೇಘದೂತ್‌ ತಂತ್ರಾಂಶ


Team Udayavani, Dec 12, 2022, 4:26 PM IST

ಋತು ಆಧಾರಿತ ಕೃಷಿಗೆ ಮೇಘದೂತ್‌ ತಂತ್ರಾಂಶ

ಚನ್ನರಾಯಪಟ್ಟಣ: ಸ್ಮಾರ್ಟ್‌ ಫೋನ್‌ ಇದ್ದರೆ ಸಾಕು. ವಾತಾವರಣ ಆಧಾರಿತ ಕೃಷಿ ಚಟುವಟಿಕೆ ಕೈಗೊಳ್ಳಲುಸ್ಥಳೀಯ ಭಾಷೆಯಲ್ಲಿ ಮಾಹಿತಿ ದೊರೆಯುವಂತೆಮಾಡಿದೆ ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ.

ಕೇಂದ್ರ ಸರ್ಕಾರದ ಕೃಷಿ ಮತ್ತು ಭೂ ವಿಜ್ಞಾನಸಚಿವಾಲಯ ನೆರವಿನೊಂದಿಗೆ ಅಭಿವೃದ್ಧಿ ಪಡಿಸಿರುವಮೇಘದೂತ್‌ ತಂತ್ರಾಂಶ ಅನ್ನದಾತನಿಗೆಮಾರ್ಗದರ್ಶನ ನೀಡಲಿದೆ. ಯಾವ ಋತುವಿನಲ್ಲಿಎಂತಹ ಬೆಳೆಗೆ ಮೊರೆ ಹೋಗಬೇಕು. ಹವಾ ಮಾನಕ್ಕೆಅನುಗುಣವಾಗಿ ಬೆಳೆಗಳಿಗೆ ತಗಲಬಹುದಾದ ಕೀಟ, ರೋಗಬಾಧೆಗಳ ಬಗ್ಗೆಯೂ ಮಾಹಿತಿ ಕ್ಷಣಾರ್ಧದಲ್ಲಿಪ್ರಾಪ್ತ ವಾಗಲಿದ್ದು ಕೃಷಿಕರಿಗೆ ಸಾಕಷ್ಟು ಇದರಿಂದ ಪ್ರಯೋಜವಾಗಿದೆ.

ದಿಲ್ಲಿಯ ಐಐಟಿಎಂ, ಪುಣೆ ಮತ್ತು ಐಎಂಡಿ ಸಹಯೋಗದೊಂದಿಗೆ ಹೈದರಾಬಾದ್ನ ಇಂಟನ್ಯಾಶನಲ್‌ ಕಾಸ್ಟ್‌ ರಿಸರ್ಚ್‌ ಇನ್‌ ಸ್ಟಿಟ್ಯೂಟ್‌ ಫಾರ್‌ ಸೆಮಿ-ಆಂಡ್‌ ಟ್ರಾಪಿಕ್‌ (ಐಸಿಆರ್‌ಐಎಸ್‌ಎಟಿ)ನಲ್ಲಿ ಡಿಜಿಟಲ್‌ ಅಗ್ರಿಕರಲ್‌ ರಿಸರ್ಚ್‌ ಥೀಮ್‌ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ. ಅಗತ್ಯಕ್ಕೆ ಅನುಗುಣವಾದಮಾಹಿತಿ ಪೂರೈಸುವ ಕೆಲಸವನ್ನು ಆ್ಯಪ್‌ನಲ್ಲಿ ಅಳವಡಿಸಿದ್ದು ಸಾಕಷ್ಟು ಉಪಯೋಗವಾಗುತ್ತಿದೆ.

ರೈತಸ್ನೇಹಿ ಆಗಬೇಕಿದೆ: ಮೇಘದೂತ್‌ ತಂತ್ರಾಂಶ ಆರಂಭಿಕ ದಿನಗಳಲ್ಲಿ ಕರ್ನಾಟಕದ 30 ಸೇರಿ ದೇಶದ 150 ಜಿಲ್ಲೆಯಲ್ಲಿ ಚಾಲನೆ ನೀಡಿತ್ತು. ಇದೀಗ 668 ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಹಾಸನ ಜಿಲ್ಲೆಯೂ ಇದರಲ್ಲಿ ಸೇರಿದೆ. ಹಾಸನ ಜಿಲ್ಲೆಯಲ್ಲಿ ಕೈಗಾರಿಕೆಗಿಂತ ಹೆಚ್ಚು ಕೃಷಿ ಮಾಡುವ ಪ್ರದೇಶವಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಎರಡು ವರ್ಷದ ಹಿಂದೆ ಇದನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು ಈಗಾಗಲೆ ಸಾಕಷ್ಟು ಮಂದಿ ಇದರ ಲಾಭ ಪಡೆಯುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಜಿಲ್ಲೆಗಳಿಗೆ ಈ ತಂತ್ರಾಂಶ ಲಭ್ಯತೆ ಜನಸ್ನೇಹಿಯಾಗಿ ದೊರಕುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ, ಜಿಲ್ಲೆಯಲ್ಲಿ ಪ್ರಚಾರದ ಕೊರತೆಯಿಂದ ಅಷ್ಟಾಗಿ ರೈತ ಸ್ನೇಹಿಯಾಗಿಲ್ಲ. ವಿದ್ಯಾವಂತ ಯುವಕರು ಮಾತ್ರ ಇದರ ಪ್ರಯೋಜವ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಈ ತಂತ್ರಾಂಶ ಮೇಲ್ವಿಚಾರನ್ನು ನೇಮಿಸಿದರೇ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಯಾವ ಭಾಷೆಯಲ್ಲಿದೆ: ಕನ್ನಡ, ತೆಲಗು, ಮರಾಠಿ, ತಮಿಳು, ಹಿಂದಿ, ಇಂಗ್ಲಿಷ್‌ ಸೇರಿ ಒಟ್ಟು ದೇಶದ 10 ಭಾಷೆಯಲ್ಲಿ ಜಿಲ್ಲೆವಾರು ರೈತರಿಗೆ ವಾರದಲ್ಲಿ ಎರಡು ಸಲ ವಾತಾವರಣ ಅಂಶಗಳಾದ ಉಷ್ಣಾಂಶ, ಆದ್ರìತೆ, ಮಳೆ, ಮೋಡ, ಗಾಳಿಯ ದಿಕ್ಕು ಮತ್ತು ವೇಗ ಮುಂದಿನ ಐದು ದಿನಗಳಲ್ಲಿ ಇರಬಹುದಾದ ವಾತಾವರಣದ ಬಗ್ಗೆ ಮಾಹಿತಿ ನೀಡುತ್ತಿದೆ.

ವಾರದಲ್ಲಿ 2 ದಿವಸ ಅಪ್‌ಡೇಟ್‌: ಬದಲಾದ ಹವಾಮಾನದಲ್ಲಿ ಕೃಷಿಯನ್ನು ಲಾಭದಾಯಕವಾಗಿಸಲು ಭಾರತೀಯ ಹವಾಮಾನ ಇಲಾಖೆ ಮುಖಾಂತರ ಸಂಯೋಜಿತ ಕೃಷಿ ಸಲಹೆಗಳನ್ನು ರೈತರಿಗೆ ನೀಡುವ ಮಹತ್ವಕಾಂಕ್ಷೆಯೊಂದಿಗೆ ಬೆರಳ ತುದಿಯಲ್ಲಿ ಮಾಹಿತಿಯ ಆಗರ ತಂದಿಡಲಾಗಿದೆ, ಪ್ರತಿ ಮಂಗಳವಾರ, ಶುಕ್ರವಾರದಂದು ಅಗೋ ಮೆಟ್‌ ಫೀಲ್ಡ್ ಯೂನಿಟ್‌ಗಳು (ಎಎಂಎಫ್ಯು) ನೀಡುವ ಜಿಲ್ಲೆ, ಬೆಳೆವಾರು ಸಲಹೆಯನ್ನು ನೀಡಲಾಗುತ್ತಿದೆ.

ಯಾರ ಹೆಗಲ ಮೇಲಿದೆ ಜವಾಬ್ದಾರಿ: ದೇಶದ ಆಯಾ ಜಿಲ್ಲೆಯ ಬೆಳೆ ಪದ್ಧತಿ ಮತ್ತು ಭಿನ್ನವಾಗಿದ್ದು, ಆ್ಯಪ್‌ ಮೂಲಕ ಕೇಂದ್ರೀಕೃತ ಮಾಹಿತಿ ರವಾನೆ ಮಾಡಲಾಗದು ಎಂಬ ಉದ್ದೇಶದಿಂದ ಮಾಹಿತಿ ಅಪ್‌ ಡೇಟ್‌ ಮಾಡುವ ಜವಾಬ್ದಾರಿಯನ್ನು ಆಯಾ ಕೃಷಿ ಮತ್ತು ತೋಟ ಗಾರಿಕ ವಿವಿಗಳಿಗೆ ವಹಿಸಲಾಗಿದ್ದು, ವಿವಿಯಲ್ಲಿಯ ಗ್ರಾಮೀಣ ಕೃಷಿ ಮೌಸಮ್‌ ಸೇವಾ ವಿಭಾಗದಲ್ಲಿ ನೋಡಲ್‌ ಅಧಿಕಾರಿ ಹಾಗೂ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ನೀಡಿದ್ದು ಅವರೇ ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಜಿಲ್ಲೆ ಮಾಹಿತಿ ಎಲ್ಲಿಂದ ಹೋಗುತ್ತದೆ: ಶಿವಮೊಗ್ಗದ ನವುಲೆಯಲ್ಲಿರುವ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲೂ ಈ ವಿಭಾಗವಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಹಾಸನ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಮಾಹಿತಿ ರವಾನಿಸಲಿದೆ.

ಆ್ಯಪ್‌ನಲ್ಲಿ ಏನಿದೆ?: ಎಲ್ಲಬೆಳೆಗಳ ಕುರಿತು ಮಾಹಿತಿ, ಸರ್ಕಾದ ಅಧಿಸೂಚನೆ, ಭೂತಕಾಲ ಮತ್ತುವರ್ತಮಾನದ ಹವಾಮಾನ, ಮುನ್ಸೂಚನೆ, ಶೀಘ್ರ ನೋಟ, ಉಷ್ಣಾಂಶ, ಆದ್ರìತೆ, ಮೋಡ, ಗಾಳಿಯ ದಿಕ್ಕು, ವೇಗ ಹಾಗೂ ಇತ್ಯಾದಿ ಮಾಹಿತಿ ಇದಲ್ಲಿ ಇರಲಿದೆ.

ಮೇಘದೂತ್‌ ತಂತ್ರಾಂಶ ಕೇವಲ ಕೃಷಿ ತೋಟಗಾರಿಕೆಗಷ್ಟೇಸೀಮಿತವಾಗದೆ ಜಾನುವಾರುಗಳಮಾಹಿತಿಯನ್ನು ಒಳಗೊಂಡಿದೆ, ಋತುವಿಗೆ ಅನುಗುಣವಾಗಿ ಜಾನುವಾರಕ್ಕೆಬರಬಹುದಾದ ಕಾಯಿಲೆ, ಕೊಡಿಸಬೇಕಾದ ಲಸಿಕೆ, ಔಷಧಗಳ ಬಗ್ಗೆ ಪೂರ್ಣ ಮಾಹಿತಿ ಸಿಗಲಿದೆ, ಆಯಾ ಪ್ರದೇಶಕ್ಕೆಅನುಗುಣವಾಗಿ ಜಾನುವಾರು, ಕೋಳಿ,ಕುರಿ ಸಾಕಣೆ, ಮೀನುಗಾರಿಕೆ, ರೇಷ್ಮೆ ಎಲ್ಲಾ ಬಗ್ಗೆ ಮಾಹಿತಿ ದೊರೆಯುತ್ತಿದೆ.ಜನಾರ್ದನ್‌, ಕೃಷಿ ಇಲಾಖೆಸಹಾಯಕ ನಿರ್ದೇಶಕ.

ಮೇಘದೂತ್‌ ಉತ್ತಮವಾಗ ಆ್ಯಪ್‌ಆಗಿದ್ದು ಇದನ್ನು ಬಳಕೆ ಮಾಡಿದರೆ ಕೃಷಿ ವಿದ್ಯಾಲಯಕ್ಕೆ ತೆರಳುವ ಅಗತ್ಯ ಇರುವುದಿಲ್ಲ. ಸಾಕಷ್ಟು ವೈಜ್ಞಾನಿಕವಾಗಿ ಬೆಳೆ ಮಾಡಲು ಅನುಕೂಲ ಆಗಲಿದೆ.ಬಸವ ಯುವ ರೈತ ದಿಡಗ.

ಶಾಮಸುಂದರ್‌ ಕೆ. ಅಣ್ಣೇನಹಳಿ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

de

Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು

HD-Revanna

ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್‌ ಶಾಸಕರ ಸೆಳೆಯೋ ದುಸ್ಥಿತಿ: ಎಚ್‌.ಡಿ.ರೇವಣ್ಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.