ಮಳೆಗೆ ಕಳೆಕಟ್ಟಿದ ರಾಗಿ ಬೆಳೆ
18 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ,ಇಳುವರಿ ನಿರೀಕ್ಷೆ
Team Udayavani, Oct 22, 2020, 3:13 PM IST
ಚನ್ನರಾಯಪಟ್ಟಣ: ತಾಲೂಕಿನಲ್ಲಿ ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿಯೇ ಆಗಿದ್ದು, ಪ್ರಮುಖ ಬೆಳೆಯಾದ ರಾಗಿ ಹುಲುಸಾಗಿ ಬೆಳೆದಿದೆ. ಎಲ್ಲಿ ನೋಡಿದ್ರೂ ಅಚ್ಚ ಹಸಿರು ಕಾಣುತ್ತಿದ್ದು, ರೈತರ ಮೊಗ ಮಂದಹಾಸ ಮೂಡಿದೆ.
ಕಳೆದ ವರ್ಷ ಪೂರ್ವ ಮುಂಗಾರು ಸಕಾಲಕ್ಕೆ ಆಗಮಿಸದೆ ಬರದ ಛಾಯೆ ಆವರಿತ್ತು. ನಂತರ ತಡವಾಗಿ ಬಂದ ಮಳೆ ರೈತರ ಕೈಹಿಡಿಯಲಿಲ್ಲ. ಆದರೆ, ಪ್ರಸಕ್ತ ವರ್ಷ ಸಕಾಲಕ್ಕೆ ಮಳೆ ಸುರಿಯುತ್ತಿದ್ದು, ರಾಗಿ, ಜೋಳ ಉತ್ತಮವಾಗಿಯೇ ಬೆಳೆದಿದ್ದು, ಹೆಚ್ಚು ಇಳುವರಿಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ತಾಲೂಕು ಸಂಪೂರ್ಣ ಕೆಂಪು ಮಣ್ಣಿನಿಂದ ಕೂಡಿರುವ ಕಾರಣ, ಹದ ಮಳೆ ಸುರಿದರೂ 15 ದಿನದವರೆ ಭೂಮಿಯಲ್ಲಿ ತೇವಾಂಶ ಉಳಿದಿರುತ್ತದೆ. ಮುಂಗಾರಿಗೂ ಮೊದಲೇ ಬಿತ್ತನೆ ಮಾಡಿದ್ದ ಜೋಳ ಕಟಾವಿಗೆ ಬಂದಿದ್ದು, ಮಳೆ ಸ್ವಲ್ಪ ಬಿಡುವು ನೀಡುವುದನ್ನೇ ಬೆಳೆಗಾರರು ಎದುರು ನೋಡುತ್ತಿದ್ದಾರೆ.
ಬೆಳೆ ಕೈಸೇರುವ ವಿಶ್ವಾಸ: ಈಗಾಗಲೇ ರಾಗಿ ಕಾಳುಕಟ್ಟುವ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಮಳೆ ಕೈಕೊಟ್ಟರೂ ಬೆಳೆ ಕೈಸೇರಲಿದೆ ಎಂಬ ನಂಬಿಕೆ ರೈತರಲ್ಲಿದೆ. ನಾಲ್ಕೈದು ತಿಂಗಳಿಂದ ಮೋಡಮುಸುಕಿದ ವಾತಾವರಣ, ಆಗಾಗ ಜಿಟಿ ಜಿಟಿ ಸಹಿತ ಜೋರು ಮಳೆಆಗುತ್ತಿದ್ದು, ಭೂಮಿಯಲ್ಲಿ ತೇವಾಂಶಹೆಚ್ಚಾಗಿದೆ. ಕೆಲವು ಭಾಗದಲ್ಲಿ ಬೆಳೆ ಕೊಯ್ಲಿಗೆ ಬಂದಿದ್ದು, ಮಳೆ ಬಿಡುವು ನೀಡುವುದನ್ನೇ ರೈತರು ಕಾಯುತ್ತಿದ್ದಾರೆ.
ಕೀಟಬಾಧೆ ಚಿಂತೆ: ರಾಗಿ ಬೆಳೆ ಹುಲುಸಾಗಿ ಬೆಳೆದಿದ್ದರೂ ಹೆಚ್ಚು ಮಳೆ ಆಗಿದ್ದರಿಂದ ಕೀಟಬಾಧಿಸುವ ಸಾಧ್ಯತೆ ಹೆಚ್ಚಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಉತ್ತಮ ಮಾರ್ಗದರ್ಶನ ನೀಡಬೇಕಿದೆ.
ಮೇವಿನಸಮಸ್ಯೆ ಇಲ್ಲ: ಸಕಾಲಕ್ಕೆ ಮಳೆ ಸುರಿಯುತ್ತಿರುವ ಕಾರಣ, ರಾಗಿ ಬೆಳೆ ಹುಲುಸಾಗಿ ಬೆಳೆದಿದೆ. ಹೀಗಾಗಿ ಮುಂದಿನ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡುವುದಿಲ್ಲ. ಅಲ್ಲದೆ, ಪಾಳು ಜಮೀನು, ಬದುಗಳಲ್ಲಿ ಹಸಿರು ಹಲ್ಲು ಮೊಣಕಾಲುದ್ದ ಬೆಳೆದಿದ್ದು, ಸಾಕು ಪ್ರಾಣಿಗಳಿಗೆ ನಿತ್ಯವೂ ಹಬ್ಬವಾಗಿದೆ.
ವಿವಿಧ ತಳಿ ಬೆಳೆಯಲು ಸಹಕಾರಿ: ತಾಲೂಕಿನಲ್ಲಿ 10ಕ್ಕೂ ಹೆಚ್ಚು ತಳಿಯ ರಾಗಿ ¸ ಬೆಳೆಯಲಾಗುತ್ತದೆ. ತಾಲೂಕಿನ ಗಡಿ ಭಾಗದಲ್ಲಿ ಕಾರೇಕೆರೆ ಕೃಷಿ ವಿಜ್ಞಾನ ಕಾಲೇ ಜಿನಲ್ಲಿ ವಿವಿಧ ತಳಿಯ ರಾಗಿ ಬೆಳೆಯುವ ಮೂಲಕ ರೈತ ರಿಗೆ ನೆರವಾಗಿದ್ದಾರೆ.
ತಾಲೂಕಿನಲ್ಲಿ ಪ್ರತಿ ವರ್ಷವೂ ರಾಗಿ,ಜೋಳ, ಶುಂಠಿ ಬೆಳೆಯಲಾಗುತ್ತದೆ. ರಾಸುಗಳನ್ನುಹೊಂದಿರುವ ರೈತರು ಮಳೆಗಾಲದಲ್ಲಿ ರಾಗಿಬಿತ್ತನೆ ಮಾಡುತ್ತಾರೆ. ಪ್ರಸಕ್ತ ವರ್ಷ ಸ್ವಲ್ಪಹೆಚ್ಚುಆಸಕ್ತಿ ತೋರಿದ್ದಾರೆ.ಹಿಂದಿನ ನಾಲ್ಕೈದು ವರ್ಷಗಳಿಗೆ ಹೋಲಿಕೆ ಮಾಡಿದರೆಈ ಬಾರಿಮಳೆ ಸಕಾಲಕ್ಕೆ ಬಿದ್ದಿದೆ.ಇದರಿಂದ ರಾಗಿಹಚ್ಚಹಸಿರಿನಿಂದಕೂಡಿದೆ. ಹೆಚ್ಚುಇಳುವರಿಯೂಬರುವ ನಿರೀಕ್ಷೆ ಇದೆ. -ಪುಟ್ಟಸ್ವಾಮಯ್ಯ, ರೈತ, ಕುರುವಂಕ ಗ್ರಾಮ
ತಾಲೂಕಿನ ರೈತರು ಪ್ರಸಕ್ತ ವರ್ಷಹೆಚ್ಚು ರಾಗಿ ಬೆಳೆದಿದ್ದಾರೆ. ವಾಡಿಕೆಗಿಂತಹೆಚ್ಚು ಮಳೆಆಗಿದೆ. ಹೀಗಾಗಿ ಬೆಳೆ ಹುಲುಸಾಗಿ ಬೆಳೆದಿದೆ.ಕೆಲವು ಕಡೆ ತೆನೆ ಕಾಳು ಕಟ್ಟುವ ಹಂತಕ್ಕೆ ಬಂದಿದೆ. ಶೇ.90 ಬೆಳೆ ರೈತರಕೈ ಸೇರುವ ವಿಶ್ವಾಸವಿದೆ. –ಎಫ್.ಕೆ.ಗುರುಸಿದ್ದಪ್ಪ, ಸಹಾಯ ನಿರ್ದೇಶಕ, ಕೃಷಿ ಇಲಾಖೆ, ಚನ್ನರಾಯಪಟ್ಟಣ.
-ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.