ಕುಡಿಯುವ ನೀರು ಯೋಜನೆಗೆ ಸಚಿವ ರೇವಣ್ಣ ಚಾಲನೆ
Team Udayavani, Mar 8, 2019, 7:16 AM IST
ಹೊಳೆನರಸೀಪುರ: ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ತಾಲೂಕಿನ ಕಳ್ಳಿಕೊಪ್ಪಲು ಹಾಗೂ ಇತರೆ 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ಯೋಜನೆಯನ್ನು ಲೊಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರೇವಣ್ಣ , ಈ ಯೋಜನೆಗೆ 2017-18ರಲ್ಲಿ ಅಂದಿನ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ ಇಂದು 7.19 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯಿಂದ ಕಳ್ಳಿಕೊಪ್ಪಲು ಗ್ರಾಮದ ಸುತ್ತಮುತ್ತಲ ಸಂಕನಹಳ್ಳಿ, ದೊಡ್ಡಬ್ಯಾಗತವಳ್ಳಿ ಹಾಗೂ ಪಡುವಲಹಿಪ್ಪೆಯ ಈ ಮೂರು ಗ್ರಾಮ ಪಂಚಾಯಿತಿಗಳ ಸಂಕನಹಳ್ಳಿ, ಕೃಷ್ಣಾಪುರ, ಕೃಷ್ಣಾಪುರಕೊಪ್ಪಲು, ನಾಗಲಾಪುರ ಗ್ರಾಮ, ಚಿಕ್ಕಬ್ಯಾಗತವಳ್ಳಿ, ಶಿವಪುರ, ಕಳ್ಳಿಕೊಪ್ಪಲು ಗ್ರಾಮ, ದೊಡ್ಡಬ್ಯಾಗತವಳ್ಳಿ ಗ್ರಾಮ, ಶೆರಗಾರನಕೊಪ್ಪಲು,
ಅಪ್ಪಗೌಡನಳ್ಳಿ, ಗಂಗೂರುಗ್ರಾಮ, ಜಿ.ಅಂಕನಹಳ್ಳಿ ಹಾಗೂ ಅಂಕವಳ್ಳಿ ಗ್ರಾಮಗಳ ನಿವಾಸಿಗಳಿಗೆ ಇನ್ನು ಮುಂದೆ ಅವರ ಮನೆಗಳಿಗೆ ಹೇಮಾವತಿ ನದಿಯಿಂದ ನೇರವಾಗಿ ನೀರೆತ್ತಿ ಅದನ್ನು ಶುದ್ಧೀಕರಿಸಿ ಅದನ್ನು ನಲ್ಲಿ ಮೂಲಕ ಸರಬರಾಜು ಮಾಡಲಾಗುತ್ತದೆ. ಈ ಮೂರು ಗ್ರಾಮ ಪಂಚಾಯಿತಿಗಳಿಗೆ ಸೇರಿದ 7,476 ಮಂದಿ ನಿವಾಸಿಗಳು ಇದ್ದು ತಲಾ 85 ಲೀಟರ್ ನಂತೆ ಪ್ರತಿನಿತ್ಯ 6035 ಲಕ್ಷ ಲೀ. ನೀರನ್ನು ಅಯಾ ಮನೆಗಳಿಗೆ ಸರಬರಾಜು ಮಾಡಲಾಗುವುದೆಂದರು.
ಈ ಕಾಮಗಾರಿಯನ್ನು ಕೇವಲ 11 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದು ಶುದ್ದಿಕರಣ ಘಟಕವನ್ನು ಕಳ್ಳಿಕೊಪ್ಪಲು ಬಡಾವಣೆ ನಂದಿಕಲ್ಲು ಬಾರೆ ಗ್ರಾಮದ ಬಳಿ ನಿರ್ಮಿಸಿಲಾಗಿದೆ ಎಂದರು. ಇದೇ ರೀತಿ ತಾಲೂಕಿನ ಮತ್ತಷ್ಟು ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ಯೋಜನೆಯನ್ನು ವಿಸ್ತರಿಸಲಾಗಿದ್ದು ಅವುಗಳ ಕಾಮಗಾರಿ ಭರದಿಂದ ಸಾಗಿದೆ, ಅವುಗಳು ಸಹ ಸದ್ಯದಲ್ಲೇ ಉದ್ಘಾಟನೆಯಾಗಲಿದ್ದು, ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರ್, ಪ್ರಭು, ಪ್ರಶಾಂತ್, ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಟಿಎಪಿಎಂಎಸ್ ಅಧ್ಯಕ್ಷ ಎಚ್.ಎನ್.ದೇವೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.