ಶಂಕೆ ಬಿಡಿಸಲು ಹೋಗಿ ಜೀವ ತೆಗೆದ ಅರ್ಚಕ..!
Team Udayavani, Dec 11, 2021, 12:44 PM IST
Representative Image used
ಹಾಸನ: ತಲೆ ನೋವಿನಿಂದ ನರಳುತ್ತಿದ್ದ ಮಹಿಳೆ ಯೊಬ್ಬಳ ಶೂಲೆ(ಶಂಕೆ) ಬಿಡಿಸುವುದಾಗಿ ದೇಗು ಲದ ಅರ್ಚಕ ಬೆತ್ತದ ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣ ಚನ್ನರಾಯಪಟ್ಟಣ ತಾಲೂಕು ಬೆಕ್ಕ ಗ್ರಾಮದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿ ಗೌಡರಹಳ್ಳಿ ಗ್ರಾಮದ ಪಾರ್ವತಿ (37) ಮೃತ ಮಹಿಳೆ.
ತಾಲೂಕಿನ ಬೆಕ್ಕ ಗ್ರಾಮದ ಪಿರಿಯಾಪಟ್ಟಲದಮ್ಮ ದೇಗುಲದ ಪೂಜಾರಿ ಮನು(45) ಬೆತ್ತದಿಂದ ಹೊಡೆದು ಮಹಿಳೆಯನ್ನು ಕೊಂದವನು. ಪಾರ್ವತಿ ಅವರ ಪತಿ 18 ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ಆಕೆ ಬೆಕ್ಕ ಗ್ರಾಮದಲ್ಲಿದ್ದ ತನ್ನ ಅಕ್ಕ ಮಂಜುಳಾ ಅವರ ಮನೆಯಲ್ಲಿ ವಾಸವಿದ್ದರು.
ಕಳೆದ 2 ವರ್ಷಗಳ ಹಿಂದೆ ಬೆಂಗಳೂರಿನಲ್ಲಿದ್ದ ಮಗಳು ಚೈತ್ರ ಮನೆಗೆ ಹೋಗಿದ್ದ ಪಾರ್ವತಿ ಮಗಳ ಮನೆಯಲ್ಲಿಯೇ ಇದ್ದರು. ಕಳೆದ 2 -3 ತಿಂಗಳ ಹಿಂದೆ ಪಾರ್ವತಿ ಅವರಿಗೆ ತೀವ್ರ ತಲೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಬೆಂಗಳೂರಿನ ಇಎಸ್‌ಐ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದಾಗ ಆಕೆಗೆ ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿದ್ದಾರೆ. ಆದರೂ ಪಾರ್ವತಿಗೆ ತಲೆ ನೋವು ಗುಣವಾಗಿರಲಿಲ್ಲ.
ಈ ವಿಷಯವನ್ನು ಚೈತ್ರಾ ತನ್ನ ಮಂಜುಳಾ ಅವರಿಗೆ ತಿಳಿಸಿದಾಗ ತಮ್ಮ ಬೆಕ್ಕ ಗ್ರಾಮದಲ್ಲಿ ಪಿರಿಯಾಪಟ್ಟಲದಮ್ಮ ದೇವರಿಗೆ ಪೂಜೆ ಮಾಡಿಸಿದರೆ ವಾಸಿಯಾಗಬಹುದು ಕರೆದುಕೊಂಡು ಬಾ ಎಂದು ಹೇಳಿದ್ದರಿಂದ ಚೈತ್ರಾ ತನ್ನ ತಾಯಿ ಪಾರ್ವತಿ ಅವರನ್ನು ಬೆಂಗೂರಿನಿಂದ ಬೆಕ್ಕ ಗ್ರಾಮಕ್ಕೆ ನ.29 ರಂದು ಕರೆದುಕೊಂಡು ಬಂದಿದ್ದರು. ಬೆಕ್ಕ ಗ್ರಾಮಕ್ಕೆ ಬಂದ ಪಾರ್ವತಿ ಸಹೋದರಿ ಮಂಜುಳಾ ಅವರ ಮನೆಯಲ್ಲಿ ಉಳಿದುಕೊಂಡಿದ್ದರು.
ಡಿ.2 ರಂದು ಮಂಜುಳಾ ಅವರು ಪಿರಿಯಾಪಟ್ಟಲದಮ್ಮ ದೇಗುಲದ ಅರ್ಚಕ ಮನು ಅವರಿಗೆ ತಲೆನೋವಿನಿಂದ ನರಳುತ್ತಿದ್ದ ಪಾರ್ವತಿ ಅವರ ವಿಚಾರವನ್ನು ತಿಳಸಿದಾಗ ಮಂಜುಳಾ ಅವರ ಮನೆಗೆ ಬಂದು ಪಾರ್ವತಿ ಅವರಿಗೆ ನಿಂಬೆ ಹಣ್ಣನ್ನು ಮಂತ್ರಿಸಿ ಕೊಟ್ಟು ಮರುದಿನ ದೇವಸ್ಥಾನಕ್ಕೆ ಬರಲು ಹೇಳಿ ಹೋಗಿದ್ದರು.
ಇದನ್ನೂ ಓದಿ;- 2019ರ ವಿಶ್ವಕಪ್ ಗೆ ಭಾರತ ತಂಡದಲ್ಲಿ ಆ ಮೂವರ ಅಗತ್ಯವಿರಲಿಲ್ಲ: ರವಿ ಶಾಸ್ತ್ರಿ
ಅದರಂತೆ ಪಾರ್ವತಿ ಅವರನ್ನು ಮಂಜುಳಾ ಅವರು ಪಿರಿಯಾಪಟ್ಟಲದಮ್ಮ ದೇಗುಲಕ್ಕೆ ಕರೆದುಕೊಂಡು ಹೋಗಿ ಮನು ಪೂಜಾರಿಯನ್ನು ಭೇಟಿ ಮಾಡಿ ಪೂಜೆ ಮಾಡಿಸಿದರು. ಪೂಜಾರಿ ಮನು ಪುನಃ ನಿಂಬೆ ಹಣ್ಣು ಮಂತ್ರಿಸಿ ಕೊಟ್ಟು ಪಾರ್ವತಿಯವರನ್ನು ಡಿ.7 ರಂದು ಮಂಗಳವಾರ ದೇವರ ಉತ್ಸವವಿದೆ. ಅಂದು ವಿಶೇಷ ಪೂಜೆಯಿದ್ದು ಕರೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದ.
ಅದರಂತೆ ಮಂಗಳವಾರ ಪಾರ್ವತಿಯವರನ್ನು ದೇವಸ್ಥಾನಕ್ಕೆ ಬೆಳಗ್ಗೆ 10 ಗಂಟೆಗೆ ಕರೆದುಕೊಂಡು ಹೋದಾಗ ಪಾರ್ವತಿಗೆ ಶಂಕೆ ಅಂಟಿಕೊಂಡಿದೆ ಬಿಡಿಸುತ್ತೇನೆಂದು ಹೇಳಿ ಬೆತ್ತದ ಕೋಲಿನಿಂದ ಪಾರ್ವತಿಯ ಮೈ, ಕೈಕಾಲು, ತಲೆಗೆ ಹೊಡೆದಿದ್ದು, ಜರ್ಜರಿತಳಾದ ಪಾರ್ವತಿಯನ್ನು 2ದಿನ ಕಳೆದು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಪಾರ್ವತಿಯ ಮಗಳು ಚೈತ್ರಾ ಶ್ರವಣಬೆಳಗೊಳ ಠಾಣೆಯಲ್ಲಿ ಅರ್ಚಕ ಮನು ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ. ಎಸ್ಪಿ ಶ್ರೀನಿವಾಸಗೌಡ ಅವರೂ ಠಾಣೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದು ತನಿಖೆ ನಡೆಸಲು ಕ್ರಮ ಕೈಗೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಆಸುನೀಗಿದ ಮಹಿಳೆ
ಪಾರ್ವತಿಗೆ ತಲೆ ಶೂಲೆ ಅಂಟಿಕೊಂಡಿದೆ ಶಂಕೆ ಬಿಡಿಸುತ್ತೇನೆಂದು ಅರ್ಚಕ ಮನು ಬೆತ್ತದ ಕೋಲಿನಿಂದ ಪಾರ್ವತಿಯ ಮೈ, ಕೈಕಾಲು, ತಲೆಗೆ ಹೊಡೆದಿದ್ದು, ಪಾರ್ವತಿ ಜರ್ಜರಿತಳಾಗಿ ಹೋಗಿದ್ದಾಳೆ. ನಿಂಬೆಹಣ್ಣಿನ ರಸ ಕುಡಿಸಿ ಸಂತೈಸಿದರೂ ಸುಸ್ತು ಕಡಿಮೆಯಾಗದೇ ಇದ್ದುದ್ದರಿಂದ ಮನೆಗೆ ಕರೆದೊಯ್ದಿದ್ದಾರೆ.
ಪಾರ್ವತಿ ಅವರಿಗೆ ಸ್ವಲ್ಪವೂ ಗುಣಮುಖವಾಗದೇ ಇದ್ದುದ್ದರಿಂದ ಬುಧವಾರ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದಾಗ ವೈದ್ಯರು ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು. ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಪಾರ್ವತಿಯನ್ನು ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.