ನನ್ನ ವಿರುದ್ಧದ ಅಪಪ್ರಚಾರ ಸಹಿಸೆನು
Team Udayavani, Jan 24, 2022, 12:51 PM IST
ಅರಸೀಕೆರೆ: ಕ್ಷೇತ್ರದ ಜವಾಬ್ದಾರಿ ಶಾಸಕನಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜನಪರಯೋಜನೆಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮಂಜೂರು ಮಾಡಿಸಿಕೊಂಡು ಅನುಷ್ಠಾನ ಮಾಡುತ್ತಿರುವುದನ್ನು ಸಹಿಸದೇ ಈ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಂದಿರುವ ವ್ಯಕ್ತಿಯ ಅಪ ಪ್ರಚಾರ ಸಹಿಸುವುದಿಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,10 ವರ್ಷದ ಹಿಂದೆ ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್‌ಕುಮಾರ್ ಅವರೇ ತಮ್ಮ ಅವಿತರ ಹೋರಾಟಕ್ಕೆಸ್ಪಂಧಿಸಿ ನಗರಕ್ಕೆ ಕುಡಿವ ನೀರಿನ ಯೋಜನೆ ಹಾಗೂ ಒಳಚರಂಡಿ ಯೋಜನೆಯನ್ನು ಮಂಜೂರು ಮಾಡಿದ್ದರು. ಅಂದು ಬಹಿರಂಗಸಭೆಯಲ್ಲಿ ಮಕ್ತವಾಗಿ ಪ್ರಶಂಸಿಸಿದ್ದರು. ಇದಾವುದರ ಬಗ್ಗೆ ಅರಿವಿಲ್ಲದೆ ಇತ್ತೀಚಿನದಿನಗಳಲ್ಲಿ ಈ ಕ್ಷೇತ್ರದಲ್ಲಿ ತಮ್ಮ ರಾಜಕೀಯಬೇಳೆ ಬೇಯಿಸಿಕೊಳ್ಳಲು ಬಂದಿರುವಸಂತೋಷ್ ತಮ್ಮ ಬೆಂಬಲಿಗರ ಜೊತೆ ಸೇರಿಕೋಂಡು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ನಗರ ವ್ಯಾಪ್ತಿಯ ಕುಡಿವ ನೀರಿನ ಯೋಜನೆ ಸಂಫೂರ್ಣಗೊಂಡಿದ್ದು, ಒಳಚರಂಡಿಯೋಜನೆ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಹಾಗೂ ಕಾಮಗಾರಿಗೆಭೂಮಿ ಕಳೆದುಕೊಂಡ ಭೂ ಮಾಲೀಕರಿಗೆಪರಿಹಾರ ಹಣ ನೀಡಲು ಕ್ಷೇತ್ರದ ಶಾಸಕನಾಗಿಹೋರಾಟ ಮಾಡಿ ಹಣವನ್ನು ಮಂಜೂರುಮಾಡಿಸಿಕೊಂಡು ಬಂದಿದ್ದೇನೆ ಇದನ್ನು ತಿಳಿಯದ ಎನ್.ಆರ್ ಸಂತೋಷ್ ತಾವು ಸಂಬಂಧಪಟ್ಟ ಸಚಿವರೊಂದಿಗೆ ಮೌಖೀಕವಾಗಿಮಾತನಾಡಿ ಹಣ ಮಂಜೂರು ಮಾಡಿಸಿದ್ದೇನೆಎಂದು ಜನತೆಯ ದಾರಿತಪ್ಪಿಸುವ ಮೂಲಕ ಕೀಳು ಮಟ್ಟಕ್ಕೆ ರಾಜಕೀಯಕ್ಕೆ ಇಳಿದಿರುವುದು ನಾಚಿಕೇಗೇಡಿನ ಸಂಗತಿ ಎಂದು ಹೇಳಿದರು.
ಅರಸೀಕೆರೆ ಕ್ಷೇತ್ರದಲ್ಲಿ ತಮ್ಮ ರಾಜಕೀಯ ನೆಲೆಗಾಗಿ ಪಾದಾರ್ಪಣೆ ಮಾಡಿರುವ ಸಂತೋಷ್‌ಅವರು ಬಿಜೆಪಿ ಪಕ್ಷದಲ್ಲಿ ಭಿನ್ನಮತ ಹುಟ್ಟುಹಾಕಿಹಲವು ವರ್ಷಗಳಿಂದ ಸಂಘಟನೆ ಮಾಡಿದಡಿವಿಟಿ ಬಸವರಾಜ್ ಅವರಿಗೆ ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಕೈ ತಪ್ಪಿಸಿದ್ದಾರೆ.ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದ ಏಳು ಮಂದಿ ಜೆಡಿಎಸ್ ಸದಸ್ಯರ ರಾಜಿನಾಮೆ ಕೊಡಿಸಿಅವರನ್ನು ಅತಂತ್ರಗೊಳಿಸಿದ್ದಾರೆ. ಸ್ವಂತ ಪಕ್ಷದಮುಖಂಡರು ಕಾರ್ಯಕರ್ತರು ಎಂದು ನೋಡದೆ ಜಾತಿ ನಿಂದನೆಯ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಇದು ಅವರು ಬಿಜೆಪಿ ಪಕ್ಷಕ್ಕೆ ನೀಡುತ್ತಿರುವ ಕೊಡುಗೆ ಎಂದು ವ್ಯಂಗ್ಯವಾಡಿದರು.
ನಗರಸಭೆ ಉಪಾಧ್ಯಕ್ಷ ಕಾಂತೇಶ್. ನಗರಸಭೆ ಸದಸ್ಯರಾದಜಿ.ಟಿ.ಗಣೇಶ್, ಮನೋಹರ್.ಈಶ್ವರ್ ಮತ್ತಿತರು ಉಪಸ್ಥಿತರಿದ್ದರು.
ಸಿಎಂ ಮನೆ ಮುಂದೆ ಧರಣಿ: ಎಚ್ಚರಿಕೆ : ಸಂತೋಷ್ ತಮ್ಮ ರಾಜಕೀಯ ನೆಲೆಗಾಗಿಸುಳ್ಳು ಹೇಳುವಹಾಗೂ ಕ್ಷೇತ್ರದಲ್ಲಿ ಅಶಾಂತಿವಾತಾವರಣ ನಿರ್ಮಿಸುವ ಕೆಲಸವನ್ನುಮಾಡುತ್ತಿದ್ದು, ಇನ್ನು ಮುಂದಾದರೂ ಅವರ ಹಿಂಬಾಲಕರು ನಿಲ್ಲಿಸದೆ ಹೋದರೆತಾವೂ ಕೂಡ ಇನ್ನು ಮುಂದಿನ ದಿನಗಳಲ್ಲಿಸುಮ್ಮನೆ ಕೂರುವುದಿಲ್ಲ , ಈ ಸಂಬಂಧಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರಲು ತಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.