![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 11, 2022, 5:19 PM IST
ಅರಸೀಕೆರೆ: ರಾಜ್ಯದೆಲ್ಲೆಡೆ ಇತ್ತೀಚಿಗೆ ಸುರಿದ ಅತಿವೃಷ್ಟಿ ಮಳೆಯಿಂದಾಗಿ ತಾಲೂಕಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಸಮಗ್ರ ಮಾಹಿತಿ ನೀಡಿದರೇ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಮಂಜೂರು ಮಾಡಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ತಿಳಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ಏರ್ಪಡಿಸಿದ್ದ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿಯ ಬಗ್ಗೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಟಾಸ್ಕ್ ಪೊರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಅತಿವೃಷ್ಟಿ ಹಾನಿಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ನೀವು ನೀಡುವ ವರದಿ ಆಧಾರಿಸಿ ಅನುದಾನ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನಿಸುವೆ ಎಂದು ಹೇಳಿದರು.
ಹಾನಿ ಅಂಕಿಅಂಶ: ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಪಾಲಾಕ್ಷ ಮಾತನಾಡಿ, ಇತ್ತೀಚಿನ ಅತಿವೃಷ್ಟಿ ಮಳೆಯಿಂದ ತಾಲೂಕಿನಲ್ಲಿ ಒಟ್ಟು 271 ಮನೆಗಳು ಹಾನಿಯಾಗಿದ್ದು 1.54.36535 ರೂ ಗಳ ಪರಿಹಾರವನ್ನು ಫಲಾನುಭವಿಗೆ ನೀಡಲಾಗಿದೆ ಎಂದರು.
ಸಮಗ್ರ ವರದಿ ನೀಡಲಾಗುವುದು: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 9.500 ಹೆಕ್ಟರ್ ಜಮೀನಿನಲ್ಲಿ ರಾಗಿ ಬೆಳೆಯಲಾಗಿದ್ದು. ಬೆಳಗ್ಗೆ ವಿಮಾ ಪಾಲಿಸಿ ಮಾಡಿಸಲಾಗಿದೆ ಇನ್ನುಳಿದ ಬೆಳೆಗಳು ಸಂಪೂರ್ಣ ನಾಶವಾಗಿದ್ದು ಈ ಬಗ್ಗೆ ಅಂಕಿ ಅಂಶಗಳ ಸಮೇತ ಸಮಗ್ರ ವರದಿ ನೀಡುವುದಾಗಿ ತಿಳಿಸಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ, 683 ಹೆಕ್ಟರ್ ಜಮೀನಿನಲ್ಲಿ ಬೆಳೆದ ಆಲೂಗೆಡ್ಡೆ 152 ಹೆಕ್ಟೇರ್ ಟೊಮೊಟೊ ಹಾಗೂ 100 ಹೆಕ್ಟೇರ್ ಬಾಳೆಗಿಡಗಳು ಸಂಪೂರ್ಣ ನಾಶವಾಗಿದೆ. ತೆಂಗಿನ ಮರಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ದುರಸ್ತಿಗೆ ಅಂದಾಜು ವೆಚ್ಚ: ಸಣ್ಣ ನೀರಾವರಿ ಇಲಾಖೆ ಅಭಿಯಂತರರಾದ ಸುಂದರ ರಾಜು ತಮ್ಮ ಇಲಾಖೆ ವ್ಯಾಪ್ತಿಯ 35 ಕೆರೆಗಳ ಪೈಕಿ 28 ಕೆರೆಗಳು ಭರ್ತಿಯಾಗಿದ್ದು ಕೆರೆಗಳ ದುರಸ್ತಿ ಕಾರ್ಯಕ್ಕೆ ತಲಾ 5 ಲಕ್ಷ ರೂ ಅಂದಾಜು ವೆಚ್ಚ ಬೇಕಾಗುತ್ತದೆ ಎಂದರು.
ಜಿಪಂ ವ್ಯಾಪ್ತಿಯ 126 ಕೆರೆಗಳ ಪೈಕಿ 19 ಕೆರೆಗಳು ಭರ್ತಿಯಾಗಿದ್ದು ದುರಸ್ತಿ ಕಾರ್ಯಕ್ಕೆ 290 ಲಕ್ಷ ರೂ ಬೇಕಾಗುತ್ತದೆ. 110 ಕಿ. ಮಿ ರಸ್ತೆ ಹಾಳಾಗಿದ್ದು ರಸ್ತೆ ರೀಪೇರಿಗಾಗಿ 5 ಕೋಟಿ ಹಣ ಬೇಕಾಗಿದೆ ಎಂದು ಜಿಪಂ ಎಂಜೀನಿಯರ್ ವಿಭಾಗದ ಅಭಿಯಂತರರಾದ ಬಸವರಾಜು ಮಾಹಿತಿ ನೀಡಿದರು.
ಬಿಇಒ ಮೋಹನ್ ಕುಮಾರ್ ಮಾಹಿತಿ ನೀಡಿ, ತಾಲೂಕಿನಲ್ಲಿ 119 ಶಾಲಾ ಕೊಠಡಿಗಳು ಸಂಪೂರ್ಣ ಹಾಳಾಗಿವೆ. 168 ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಿಸಬೇಕಾಗಿದೆ ಒಟ್ಟು 23.50 ಕೋಟಿ ಅನುದಾನ ಬೇಕಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಂಕರಮೂರ್ತಿ ಮಾಹಿತಿ ನೀಡಿ 36 ಅಂಗನವಾಡಿ ಕಟ್ಟಡಗಳು ಶಿಥಿಲಾ ವಸ್ಥೆಯಲ್ಲಿದೆ. 67 ಕಟ್ಟಡಗಳನ್ನು ರಿಪೇರಿ ಮಾಡಿಸ ಬೇಕಾಗಿದೆ 7.31 ಕೋಟಿ ಅನುದಾನ ಬೇಕಾಗಿದೆ ಎಂದು ತಿಳಿಸಿದರು.
ಪಶುವೈದ್ಯ ಆಸ್ಪತ್ರೆ 8 ಕಟ್ಟಡ ಗಳು ಶಿಥಿಲಗೊಂಡಿದ್ದು ದುರಸ್ತಿ ಕಾರ್ಯ ಮಾಡಬೇಕಾಗಿದೆ ಎಂದು ಪಶು ವೈದ್ಯ ಇಲಾಖೆ ಡಾ. ಮಂಜುನಾಥ್ ಮಾಹಿತಿ ನೀಡಿದರು. ಸಭೆ ಯಲ್ಲಿ ಗ್ರೇಡ್-2 ತಹಶೀಲ್ದಾರ್ ಪಾಲಾಕ್ಷ ಶಿರಸ್ತೇ ದಾರ್ ತಾಪಂ ಇಒ ನಾಗರಾಜು, ಶಿವಶಂಕರ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
You seem to have an Ad Blocker on.
To continue reading, please turn it off or whitelist Udayavani.