ಸುಳ್ಳು ಆಶ್ವಾಸನೆ ನೀಡುವ ರಾಜಕಾರಣಿ ನಾನಲ್ಲ


Team Udayavani, Oct 11, 2022, 6:53 PM IST

ಸುಳ್ಳು ಆಶಾಸನೆ ನೀಡುವ ರಾಜಕಾರಣಿ ನಾನಲ್ಲ

ಅರಸೀಕೆರೆ: ಬರಗಾಲ ಪೀಡಿತ ಪ್ರದೇಶದ ಜನರು ಅನುಭವಿಸುತ್ತಿದ್ದ ಸಂಕಷ್ಟವನ್ನು ಬಗೆಹರಿಸಬೇಕೆಂಬ ಸಂಕಲ್ಪದಲ್ಲಿ ಅವಿರತ ಹೋರಾಟ ಮಾಡಿ, ಕ್ಷೇತ್ರದ ಜನತೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ಯಶಸ್ವಿಯಾಗಿದ್ದೇನೆ ಹೊರತು, ಸುಳ್ಳು ಆಶ್ವಾಸನೆ ಗಳನ್ನು ನೀಡಿ ಜನರನ್ನು ವಂಚಿಸುವ ಕೀಳುಮಟ್ಟದ ರಾಜಕಾರಣವನ್ನು ತಾವು ಎಂದಿಗೂ ಮಾಡುವುದಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ತಾಲೂಕಿನ ಕಣಕಟ್ಟೆ ಹೋಬಳಿ ದೊಡ್ಡಮೇಟಿ ಕುರ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2 ಕೋಟಿ ರೂ.ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರ ಶಾಸಕನಾದ ಮೇಲೆ ಅನೇಕ ಕಾಮಗಾರಿಗಳನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿ ಸಿದ್ದೇನೆ. ಹೇಮಾವತಿ ನದಿ ಮೂಲದಿಂದ ದೊಡ್ಡ ಮೇಟಿ ಕುರ್ಕೆಯ ಹೊಸ ಕೆರೆಗೆ ನೀರು ಹರಿಸುವ ಯೋಜನೆಯಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಮುಗಿಯಲಿದೆ ಎಂದು ತಿಳಿಸಿದರು.

ಮನೆ ಮನೆಗೆ ಗಂಗೆ: ಕಳೆದ ಅನೇಕ ವರ್ಷಗಳಿಂದ ಕ್ಷೇತ್ರದ ಗ್ರಾಮೀಣ ಜನತೆ ಕುಡಿಯುವ ನೀರಿಗಾಗಿ ಪರದಾಡುವ ದುಸ್ಥಿತಿಯನ್ನು ತಪ್ಪಿಸಲು ಟ್ಯಾಂಕರ್‌ಗಳ ಮೂಲಕ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ತಮ್ಮ ಅವಿರತ ಹೋರಾಟದ ಫ‌ಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮನೆ, ಮನೆಗೆ ಗಂಗೆ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ತಮ್ಮೆಲ್ಲರ ಆಶೀರ್ವಾದದಿಂದ ಯಶಸ್ವಿಯಾಗಿದ್ದೇನೆ ಎಂದು ಹೇಳಿದರು.

ವಿರೋಧಿಗಳಿಂದ ದಾರಿ ತಪ್ಪಿಸುವ ಕೆಲಸ: ಇದನ್ನು ಕಂಡು ಸಹಿಸದ ತಮ್ಮ ರಾಜಕೀಯ ವಿರೋಧಿಗಳು ಇಲ್ಲಸಲ್ಲದ ವ್ಯರ್ಥ ಆರೋಪಗಳನ್ನು ಮಾಡುವ ಮೂಲಕ ಕ್ಷೇತ್ರದ ಜನತೆಯನ್ನು ದಾರಿ ತಪ್ಪಿಸುವ ವಿಫ‌ಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇಂತಹ ಟೀಕೆ ಟಿಪ್ಪಣಿಗಳಿಗೆ ಅಂಜುವ ಜಾಯಮಾನ ತಮ್ಮದಲ್ಲ, ಅಭಿ ವೃದ್ಧಿ ಕಾರ್ಯಗಳ ಅನುಷ್ಠಾನದ ಮೂಲಕ ತಕ್ಕ ಉತ್ತರ ನೀಡ ಲು ಬದ್ಧನಾಗಿದ್ದೇನೆ ಎಂದು ಸವಾಲು ಹಾಕಿದರು. ಜಾಗೃತಿ ವಹಿಸಲು ಕಿವಿಮಾತು: ದೊಡ್ಡಮೇಟಿ ಕುರ್ಕೆ ಗ್ರಾಮ ಪರಿಮಿತಿಯಲ್ಲಿ 120 ಲಕ್ಷ ರೂ.ವೆಚ್ಚದ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ. ಸೊಪ್ಪಿನಹಳ್ಳಿ ಗ್ರಾಮ ಪರಿಮಿತಿಯಲ್ಲಿ 25 ಲಕ್ಷ ರೂ.ನಲ್ಲಿ ಕಾಂಕ್ರೀಟ್‌ ರಸ್ತೆ, ಚರಂಡಿ ನಿರ್ಮಾಣ, ಹರಳಕಟ್ಟ ಗ್ರಾಮದ ಪರಿಮಿತಿಯಲ್ಲಿ 10 ಲಕ್ಷ ರೂ.ನಲ್ಲಿ ಕಾಂಕ್ರೀಟ್‌ ರಸ್ತೆ, ಚರಂಡಿ ನಿರ್ಮಾಣ, ಎಂ.ವಿ.ಹಟ್ಟಿ ಪರಿಮಿತಿಯಲ್ಲಿ 30 ಲಕ್ಷ ರೂ.ನಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ. ಗ್ರಾಮಸ್ಥರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರಿಂದ ಮಾಡಿಸಬೇಕು. ಈ ಬಗ್ಗೆ ಜಾಗೃತಿ ವಹಿಸಬೇಕೆಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಕುಮಾರ್‌, ಜಿಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ, ಮಾಜಿ ಅಧ್ಯಕ್ಷ ಗಿರೀಶ್‌, ಸದಸ್ಯರಾದ ರಮೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಕುಮಾರ್‌, ರಾಂಪುರ ಗ್ರಾಪಂ ಅಧ್ಯಕ್ಷ ಕರುಣಾಕರ, ಮಾಜಿ ಅಧ್ಯಕ್ಷ ಸುರೇಶ್‌, ಮುಖಂಡರಾದ ಸುರೇಶ್‌, ಚಂದ್ರಪ್ಪ, ಕೊಟ್ರಪ್ಪ, ಹರೀಶ್‌, ಗ್ರಾಮಸ್ಥರು ಹಾಜರಿದ್ದರು.

ಟಾಪ್ ನ್ಯೂಸ್

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

5-hiriyadka

Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

3-ullala

Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು

eart

Kutch; 3.2 ತೀವ್ರತೆಯ ಭೂ ಕಂಪನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!

New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!

5-hiriyadka

Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

2

Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.