ದೂರು ವಿರುದ್ದ ಕಾನೂನು ಹೋರಾಟ: ಕೆಎಂಶಿ
Team Udayavani, Mar 30, 2023, 3:12 PM IST
ಹಾಸನ: ಅರಸೀಕೆರೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿಯವರು ನನ್ನ ವಿರುದ್ಧ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಸತ್ಯಾಂಶವಿಲ್ಲ. ತನಿಖೆ ಮುಗಿದ ನಂತರ ಮಾನನಷ್ಟ ಮೊಕದ್ದಮೆಯಷ್ಟೇ ಅಲ್ಲ. ಏನೇನು ಕ್ರಮಗಳು ಸಾಧ್ಯವೋ ಅವೆಲ್ಲ ಕ್ರಮಗಳನ್ನೂ ದೂರುದಾರರ ವಿರುದ್ಧ ಕೈಗೊಳ್ಳುತ್ತೇವೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಅನುದಾನದಲ್ಲಿ ಚೆಕ್ ಡ್ಯಾಂಗಳ ಬದಲು ಕಾಂಕ್ರಿಟ್ ರಸ್ತೆ ಕಾಮಗಾರಿಗಳನ್ನು ಮಾಡಿಸಿದ್ದರೆ, ಅದಕ್ಕೂ ಶಾಸಕನಾದ ನನಗೂ ಸಂಬಂಧವಿಲ್ಲ. ಕ್ರಿಯಾ ಯೋಜನೆ ರೂಪಿಸಿದ ಎಂಜಿನಿಯರ್‌ಗಳು ಹಾಗೂ ಅನುಮೋದನೆ ನೀಡಿದ Óಸಚಿವರ ವಿರುದ್ಧ ದೂರು ನೀಡಬೇಕೇ ಹೊರತು ಶಾಸಕನಾದ ನನ್ನ ಮೇಲೆ ಆರೋಪ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಿರುವುದು ಅರ್ಥಹೀನ. ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಬೇಡಿಕೆ ಸಲ್ಲಿಸುವುದು ಶಾಸಕನ ಕರ್ತವ್ಯ. ಆದರೆ, ಆ ಯೋಜನೆಗಳು ನಿಯಮಬದ್ಧವಲ್ಲದಿದ್ದರೆ ತಿರಸ್ಕರಿಸುವುದು ಎಂಜಿನಿಯರುಗಳು ಹಾಗೂ ಸಂಬಂಧಪಟ್ಟ ಸಚಿವರಿಗೆ ಬಿಟ್ಟದ್ದು. ಅದಕ್ಕೆ ಶಾಸಕ ಹೊಣೆಗಾರನಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ದೂರುದಾರರಿಗೆ ಸವಾಲ್: ನೀರಾವರಿ ನಿಗಮಗಳ ಅನುದಾನದಲ್ಲಿ ರಸ್ತೆ ಕಾಮಗಾರಿಗಳು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಕಾಮಗಾರಿಗಳಾಗಿವೆ. ನನ್ನ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವವ ರು ತಾಕತ್ತಿದ್ದರೆ ಎಲ್ಲ ನೀರಾವರಿ ನಿಗಮಗಳೂ ಯಾವ್ಯಾವ ಕಾಮಗಾರಿಗೆ ಅನು ದಾನ ಬಿಡುಗಡೆ ಮಾಡಿವೆ ಎಂಬ ಮಾಹಿತಿ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದರು.
ಹಣ ದುರ್ಬಳಕೆ ಆಗಿಲ್ಲ: ಅರಸೀಕೆರೆ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ನಾಲೆ 53 ಕಿ.ಮೀ. ಹಾದು ಹೋಗಿದೆ. ನಾಲೆ ನಿರ್ಮಾಣದ ಸಂದರ್ಭ ದಲ್ಲಿ ಹಲವು ಗ್ರಾಮಗಳ ರಸ್ತೆಗಳು ಹಾಳಾ ಗಿವೆ. ಅವುಗಳನ್ನು ದುರಸ್ತಿ ಮಾಡುವುದು ಎತ್ತಿನಹೊಳೆ ಯೋಜನೆ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಜವಾಬ್ದಾರಿ. ಎಸ್‌ಸಿಪಿ, ಟಿಎ ಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ರಸ್ತೆ ನಿರ್ಮಾಣ ಮಾಡಿಕೊಡಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಅರಸೀಕೆರೆ ಕ್ಷೇತ್ರದಲ್ಲಿಯೂ ರಸ್ತೆ ಕಾಮಗಾರಿ ನಡೆದಿರಬಹುದು. ಆದರೆ ಹಣ ದುರ್ಬಳಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ತನಿಖೆ ಎದುರಿಸಲು ಸಿದ್ಧ: ಎತ್ತಿನಹೊಳೆ ಯೋಜನೆಯಡಿ ಅರಸೀಕೆರೆ ಕ್ಷೇತ್ರದಲ್ಲಿ 100 ಕೋಟಿ ರೂ. ಅನುದಾನ ದುರ್ಬಳಕೆಯಾಗಿದೆ ಎಂದು ದೂರು ನೀಡಲಾಗಿದೆ. ಆದರೆ 2018ರಿಂದ ಈ ವರ್ಷದವರೆಗೆ ಬಂದಿರುವ ಅನುದಾನ ಗರಿಷ್ಠ 80 ಕೋಟಿ ರೂ.ಆಗಬಹುದು ಅಷ್ಟೇ. ಈ ಬಗ್ಗೆ ತನಿಖೆ ನಡೆಯಲಿ, ಎದುರಿಸಲು ಸಿದ್ಧ. ಪಂಚಾಯತ್‌ರಾಜ್ ಇಲಾಖೆಯಿಂದ 150 ಕೋಟಿ ರೂ. ದುರ್ಬಳಕೆಯಾಗಿದೆ ಎಂಬುದು ಆಧಾರ ರಹಿತ. ಮಾಹಿತಿ ಹಕ್ಕು ಕಾಯ್ದೆಯನ್ನು ದೂರುದಾರರು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾಮಗಾರಿಯಲ್ಲಿ ಅಕ್ರಮ ಹಾಗೂ ಕಳಪೆ ಕಾಮಗಾರಿಗಳಾಗಿದ್ದರೆ ತನಿಖೆ ಮಾಡಿಸಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಅದು ಬಿಟ್ಟು ಕ್ಷೇತ್ರದಲ್ಲಿ ಬಿಜೆಪಿಯ ವರು ಅಭಿವೃದ್ಧಿಗೆ ವಿರೋಧಿ ಧೋರಣೆ ಅನುಸರಿಸುತ್ತಿರೋದು ಸರಿಯಲ್ಲ ಎಂದು ಟೀಕಿಸಿದರು.
ಎನ್.ಆರ್.ಸಂತೋಷ್ ವಿರುದ್ಧ ಕಿಡಿ: ವಿವಿಧ ಯೋಜನೆಗಳ ಅನುದಾನವನ್ನು ಎನ್‌ಆರ್‌ಇಜಿಗೆ ಕನ್‌ವರ್ಷನ್ ಮಾಡಿದರೆ ಶೇ.20 ರಷ್ಟು ಹೆಚ್ಚು ಅನುದಾನ ಸಿಗುತ್ತದೆ. ಹಾಗಾಗಿ ಕನ್‌ವರ್ಷನ್ ಮಾಡಿ ಕೆಲಸ ಮಾಡಿಸುವುದು ಕಾನೂನು ವಿರೋಧಿಯೇನೂ ಅಲ್ಲ ಎಂದು ಲೋಕಾಯಕ್ತರಿಗೆ ನೀಡಿ ರುವ ದೂರಿನ ಬಗ್ಗೆ ಸ್ಪಷ್ಟಡಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕಿ ನನ್ನ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಬಿಜೆಪಿ ಮುಖಂಡ ಎನ್.ಆರ್.ಸಂತೋಷ ಸಂಚು ರೂಪಿಸಿದ್ದಾರೆ ಎಂದು ಹರಿಹಾಯ್ದರು.
ಸರ್ಕಾರಿ ಕಚೇರಿ ಕೆಲಸ ಲಾಡ್ಜ್ನಲ್ಲಿ ಮಾಡಿದ್ದೇಕೆ?: ಪಂಚಾಯತ್‌ರಾಜ್ ಇಲಾಖೆ ಸಹಾಯಕ ಎಂಜಿನಿಯರ್ ಉಮೇಶ್ ಅವರು ಅರಸೀಕೆರೆಯ ಕೆಪಿಎಸ್ ಲಾಡ್ಜ್ನಲ್ಲಿ ಕಾಮಗಾರಿಗಳ ಬಿಲ್ ಬರೆಯುತ್ತಿದ್ದರು. ಇದು ಸರಿಯಾದ ಕ್ರಮವಲ್ಲ. ಆದರೇ ಮಾ.17ರಂದು ಎಂ.ಬಿ.ಬುಕ್‌ಗಳು (ಅಳತೆ ಮಾಪನ ಪುಸ್ತಕ) ಸೇರಿದಂತೆ ದಾಖಲೆಗಳನ್ನು ಕಿತ್ತುಕೊಂಡ ಬಿಜೆಪಿ ಮುಖಂಡರು 10 ದಿನ ಸತಾಯಿಸಿರೋದು ಖಂಡನೀಯ. ಜಿಪಂ ಸಿಇಒ ನೋಟಿಸ್ ನೀಡಿದ ನಂತರ ಸಹಾಯಕ ಎಂಜಿನಿಯರ್ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿರುವ ಸಂತೋಷ್ ಬೆಂಬಲಿಗರ ವಿರುದ್ಧ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಸೇರ್ಪಡೆ ಖಚಿತ: ಕೆಎಂಶಿ: ಜೆಡಿಎಸ್‌ನಿಂದ ನಾನೇಕೆ ಹೊರಬಂದೆ ಎಂದು ಈಗ ಹೇಳುವುದರ ಅಗತ್ಯವಿಲ್ಲ. ಕ್ಷೇತ್ರದಲ್ಲಿ ನನ್ನ ಬೆಂಬಲಿಗರು ಕಾಂಗ್ರೆಸ್ ನಿಂದ ನಿಲ್ಲಬೇಕು ಎಂದು ಒತ್ತಾಯಿಸಿದರು. ಹಾಗಾಗಿ ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ. ಒಳ್ಳೆಯ ದಿನ ನೋಡಿ ಕಾಂಗ್ರೆಸ್ ಸೇರ್ಪಡೆ ಆಗುವೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವೆ ಎಂದು ಶಿವಲಿಂಗೇಗೌಡ ಅವರು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.