ಪ್ರವಾಸಿಗರನು ಸೆಳೆಯುತ್ನಿರುವ ಮೂಕನಮನೆ
Team Udayavani, Jul 31, 2023, 3:15 PM IST
ಸಕಲೇಶಪುರ: ಹಾಲ್ನೋರೆಯಂತೆ ಧುಮುಕುವ ತಾಲೂಕಿನ ಮೂಕನಮನೆ ಜಲಪಾತ ನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ತಾಲೂಕು ಕೇಂದ್ರ ಸಕಲೇಶಪುರದಿಂದ ಕೇವಲ 39 ಕಿ.ಮೀ. ಹಾಗೂ ಹೋಬಳಿ ಕೇಂದ್ರ ಹೆತ್ತೂರಿನಿಂದ 12 ಕಿ.ಮೀ. ದೂರದ ಈ ಜಲಪಾತ ಅತ್ತಿಹಳ್ಳಿ ಹಾಗೂ ಹೊಂಗಡಹಳ್ಳ ಗ್ರಾಮ ಸಂಪರ್ಕ ರಸ್ತೆ ಮಧ್ಯದಲ್ಲಿದೆ. ಈ ಜಲಪಾತಕ್ಕೆ ಸಕಲೇಶಪುರದಿಂದ ಬರುವವರು ಹೆತ್ತೂರು ಕಡೆಯಿಂದ ಬಂದು ಬಾಚಿಹಳ್ಳಿ ವೃತ್ತಕ್ಕೆ ಬಂದು ನಂತರ ಅತ್ತಿಹಳ್ಳಿ ಕಡೆಗೆ ಬಂದು ಜಲಪಾತ ವೀಕ್ಷಣೆ ಮಾಡಬಹುದಾಗಿದೆ.
ವನಗೂರು ಕಡೆಯಿಂದ ಬರುವವರೂ ವನಗೂರಿಗೆ ಆಗಮಿಸಿ ನಂತರ ಬಾಚಿಹಳ್ಳಿ ವೃತ್ತಕ್ಕೆ ಬಂದು ಅತ್ತಿಹಳ್ಳಿಯಿಂದ ಸುಮಾರು 3 ಕಿ.ಮೀ ಮುಂದೆ ಬಂದು ಬಲ ತಿರುವು ಮಾರ್ಗದಲ್ಲಿ ಹೋಗಿ ಸುಮಾರು 1 ಕಿ.ಮೀ.ದೂರ ಸಾಗಿದರೆ ಜಲಪಾತ ಸಿಗುತ್ತದೆ.
ಅರಬ್ಬಿ ಸಮುದ್ರಕ್ಕೆ: ತಾಲೂಕಿನ ಜೇಡಿಗದ್ದೆ, ಕಿರ್ಕಳ್ಳಿ, ಬಾಚನಹಳ್ಳಿ, ಹೊಂಗಡಹಳ್ಳ ಗ್ರಾಮಗಳಲ್ಲಿ ಹರಿಯುವ ಹಳ್ಳಗಳು ಒಂದೆಡೆ ಸೇರಿ ಮೂಕನ ಮನೆಯಲ್ಲಿ ಸುಮಾರು 18 ಅಡಿ ಎತ್ತರದಿಂದ ಬಿದ್ದು ಪಶ್ಚಿಮಾಭಿ ಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುತ್ತದೆ.
ಬೇಕಿದೆ ಸೌಕರ್ಯ: ಮೂಕನ ಮನೆ ಜಲಪಾತ ವೀಕ್ಷಣಾ ಗೋಪುರ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಈ ಹಿಂದಿನ ಶಾಸಕರಾದ ಎಚ್.ಕೆ ಕುಮಾರ ಸ್ವಾಮಿ ಜಲಪಾತ ವೀಕ್ಷಣಾ ಗೋಪುರ ನಿರ್ಮಾಣ ಕ್ಕಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸುಮಾರು 75ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ, ಅರಣ್ಯ ಇಲಾಖೆ ಅನುಮತಿ ಪಡೆಯದೆ ಗುತ್ತಿಗೆದಾರ ಕಾಮಗಾರಿ ಆರಂಭಿಸಿ ದ್ದರಿಂದ ಅರಣ್ಯ ಇಲಾಖೆ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೂ, ಗುತ್ತಿಗೆದಾರರು ಕದ್ದು ಮುಚ್ಚಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದಾರೆ. ಕಟ್ಟಡ ಕಟ್ಟಿರುವ ಮೇಲ್ಭಾಗ ದಲ್ಲಿ ಅವೈಜ್ಞಾನಿಕವಾಗಿ ಹಿಟಾಚಿ ಬಳಸಿ ಮಣ್ಣು ತೆಗೆದು ಗೋಪುರ ನಿರ್ಮಾ ಣಕ್ಕಾಗಿ ಪಿಲ್ಲರ್ ಕಟ್ಟಲಾಗಿದೆ. ಗೋಪುರದ ಮೇಲ್ಭಾಗ ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದರಿಂದ ಯಾವುದೇ ಸಂದರ್ಭದಲ್ಲಿ ಭೂಕುಸಿತವಾಗಿ ನಿರ್ಮಾಣಗೊಂಡಿರುವ ಕಟ್ಟಡದ ಮೇಲೆ ಮಣ್ಣು ಕುಸಿಯುವ ಸಾಧ್ಯತೆಯಿದೆ. ಅಲ್ಲದೇ ಕಟ್ಟಡದ ಕೆಳಗೆ ತಡೆಗೋಡೆ ನಿರ್ಮಿಸದಿದ್ದರಿಂದ ಜಲಪಾತದ ನೀರಿಗೆ ಭೂಸವೆತ ಉಂಟಾಗಿ ಭೂ ಕುಸಿತವಾಗುವ ಸಾಧ್ಯತೆಯಿದೆ. ಇದೀಗ ಅರ್ಧಂಭರ್ಧ ನಿರ್ಮಾಣವಾಗಿರುವ ಕಟ್ಟಡ ಕುಸಿಯುವ ಸಾಧ್ಯತೆಯಿದೆ.
ಅಪಾಯ ಆಹ್ವಾನ: ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನ ಯುವಕನೋರ್ವ ಜಾರಿ ಬಿದ್ದು ತಲೆಗೆ ಏಟು ಬಿದ್ದು ಮೃತಪಟ್ಟಿದ್ದನು. ಕಳೆದ 2 ವಾರಗಳ ಹಿಂದೆ ಬೆಂಗಳೂರಿನ ಪ್ರವಾಸಿ ನೀರಿನಲ್ಲಿ ಸಿಲುಕಿದ್ದು ಸ್ಥಳೀಯರು ರಕ್ಷಣೆ ಮಾಡಿದ್ದರು. ಈ ಹಿನ್ನೆಲೆ ಇಲ್ಲಿ ಸೂಚನಾ ಫಲಕ ಅಳವಡಿಸಬೇಕಾಗಿದೆ. ಗ್ರಾಪಂಗೆ ಹಸ್ತಾಂತರಿಸಿ: ಮೂಕನಮನೆ ಜಲಪಾತದ ಮೇಲ್ಭಾಗದಲ್ಲಿ ಖಾಸಗಿ ವ್ಯಕ್ತಿಯೋರ್ವರು ರೆಸಾಟ್ ìಗಾಗಿ ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡಿದ್ದರು. ಇದಕ್ಕೆ ಅರಣ್ಯ ಇಲಾಖೆ ಬೀಗ ಜಡಿದಿದ್ದರು. ಕೂಡಲೇ ಈ ಕಟ್ಟಡವನ್ನು ಪ್ರವಾಸಿಗರ ಉಪಯೋಗಕ್ಕೆ ಬರುವಂತೆ ಮಾಡಲು ಹೊಂಗಡಹಳ್ಳ ಗ್ರಾಪಂಗೆ ಹಸ್ತಾಂತರ ಮಾಡಬೇಕಾಗಿದೆ.
ಕಾವಲುಗಾರರನ್ನು ನೇಮಿಸಿ: ಕೆಲವು ಕಿಡಿಗೇಡಿಗಳು ಜಲಪಾತಕ್ಕೆ ಬಂದು ಎಲ್ಲಿ ಬೇಕೆಂದರಲ್ಲಿ ಮದ್ಯದ ಬಾಟಲ್, ಪ್ಲಾಸ್ಟಿಕ್ ಬಾಟಲ್ ಬಿಸಾಡುವುದರಿಂದ ಜಲಪಾತ, ಜಲಪಾತದ ಆವರಣ ಮಲಿನವಾಗುತ್ತಿದೆ. ಈ ಹಿನ್ನಲೆ ಪ್ರವಾಸಿಗರ ಮೇಲೆ ನಿಗಾವಹಿಸಲುಇಬ್ಬರು ಶಾಶ್ವತ ಕಾವಲುಗಾರರನ್ನು ನೇಮಿಸಬೇಕಾಗಿದೆ. ಪಾರ್ಕಿಂಗ್‌ಗೆ ಸ್ಥಳ ಬೇಕು: ಮಳೆಗಾಲದಲ್ಲಿ ವಾಹನಗಳು ಸಂಪೂರ್ಣವಾಗಿ ಜಲಪಾತದ ಮೇಲ್ಭಾಗದ ಕಟ್ಟಡದ ಆವರಣಕ್ಕೆ ಬರಲು ಕಷ್ಟಕರ. ಈ ಹಿನ್ನೆಲೆ ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.
ಮಳೆಗಾಲದಲ್ಲಿ ಮೂಕನಮನೆ ಮಧುಮಗಳು: ಮಳೆಗಾಲದಲ್ಲಿ ನೀರು ತುಂಬಿಕೊಂಡು ಮಧುಮಗಳಂತೆ ಕಾಣುವ ಜಲಪಾತದ ಸೌಂದರ್ಯಕ್ಕೆ ಮೊರೆ ಹೋಗುವುದರಲ್ಲಿ ಅನುಮಾನವಿಲ್ಲ. ಮುಖ್ಯ ರಸ್ತೆ ಮೇಲಿಂದ ಜಲಪಾತದ ಕಡೆಗೆ ಬಂದರೆ ಮೊದಲಿಗೆ ಒಂದು ಕಾಲ್ನಡಿಗೆ ಸೇತುವೆ ಕಾಣ ಸಿಗುತ್ತದೆ. ಇಲ್ಲಿಗೆ ಎಚ್ಚರಿಕೆಯಿಂದ ಹೋಗಬೇಕಾಗಿದ್ದು. ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವ ವೇಳೆ ಅಲ್ಪ ಯಾಮಾರಿದರೂ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಮೇಲಿಂದ ಜಲಪಾತಕ್ಕೆ ಹರಿಯವ ನದಿ ನೀರಿನ ಒಂದು ಬದಿಯಲ್ಲಿ ಬಂಡೆಗಳನ್ನು ದಾಟಿಕೊಂಡು ಹೋಗಬೇಕಾಗಿದೆ. ಬಂಡೆ ದಾಟುವುದು ವಯಸ್ಸಾದರಿಗೆ, ದೈಹಿಕ ನ್ಯೂನತೆ ಇರುವವರಿಗೆ ಕಷ್ಟಕರ. ಉಬ್ಬು ತಗ್ಗು ದಾಟಿ ಜಲಪಾತ ಧುಮುಕುವ ಸ್ಥಳಕ್ಕೆ ಹೋಗಬೇಕಾಗುತ್ತದೆ. ಪ್ರ
ವಾಸಿಗರ ದಂಡು: ಸುಮಾರು 18 ಅಡಿ ಎತ್ತರದಿಂದ ಧುಮುಕುವ ಜಲಪಾತ ಮೂಕನಮನೆ ಅಬ್ಬಿ ಫಾಲ್ಸ್ ಎಂದೇ ಹೆಸರುವಾಸಿ. ಹೆತ್ತೂರು, ಹೊಂಗಡಹಳ್ಳ, ವನಗೂರು ಗ್ರಾಪಂ ವ್ಯಾಪ್ತಿಯ ಹೋಂಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಬೆಂಗಳೂರು ಮತ್ತಿತರ ಕಡೆಯಿಂದ ಪ್ರವಾಸಿಗರು ಆಗಮಿಸುವುದು ವಾಡಿಕೆ. ಮೂಕನ ಮನೆ ಜಲಪಾತ ಸ್ಥಳೀಯರಿ ಗಿಂತ ಪ್ರವಾಸಿಗರಿಗೆ ಹೆಚ್ಚು ಪರಿಚಿತ.
ಮೂಕನಮನೆ ಜಲಪಾತದ ವ್ಯಾಪ್ತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಶಾಸಕರು ಮುಂದಾಗಬೇಕು . ಅರಣ್ಯ ಇಲಾಖೆ ಕೂಡಲೇ ಸುಮಾರು 6 ಎಕರೆ ಜಾಗವನ್ನು ಗ್ರಾಪಂಗೆ ಹಸ್ತಾಂತರಿಸಿದರೆ ವಿವಿಧ ಅಭಿವೃದ್ಧಿಗೆ ಸಹಾಯವಾಗುತ್ತದೆ. ● ಚಿದನ್, ಹೊಂಗಡಹಳ್ಳ ಗ್ರಾಮಸ್ಥರು
ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಪ್ರವಾಸೋಧ್ಯಮವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇಲ್ಲಿ ನಿರ್ಮಾಣವಾಗುತ್ತಿರುವ ವೀಕ್ಷಣಾ ಗೋಪುರ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು ಕಾಮಗಾರಿಯನ್ನು ನಿಲ್ಲಿಸಲಾಗಿದೆ. ● ಸಿಮೆಂಟ್ ಮಂಜು, ಶಾಸಕರು
– ಸುಧೀರ್ ಎಸ್.ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.