100ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಶಿಥಿಲ
ಸಿಎಂ ಕುಮಾರಣ್ಣ ನಮ್ಮೂರ ಶಾಲೆಯಲ್ಲಿ ಒಂದು ದಿವಸ ವಾಸ್ತವ್ಯ ಮಾಡಿ ಸಮಸ್ಯೆ ಅರಿಯಿರಿ: ಪೋಷಕರ ಆಗ್ರಹ
Team Udayavani, Jul 5, 2019, 10:53 AM IST
ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳ ಹೋಬಳಿ ಕಮರವಳ್ಳಿ ಗ್ರಾಮ ಪ್ರಾಥಮಿಕ ಶಾಲೆ ಗೋಡೆ ಬಿರುಕು ಬಿಟ್ಟಿರುವುದು.
ಚನ್ನರಾಯಪಟ್ಟಣ: ತಾಲೂಕಿನಲ್ಲಿ 41 ಸರ್ಕಾರಿ ಪ್ರೌಢಶಾಲೆ ಸೇರಿದಂತೆ 366 ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿದ್ದು ನೂರು ಶಾಲಾ ಕೊಠಡಿ ಸಂಪೂರ್ಣ ಹಾಲಾಗಿದ್ದು ಜರೂರಾಗಿ ದುರಸ್ತಿ ಮಾಡಬೇಕಿದೆ. 16 ಶಾಲೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. 172 ಶಾಲಾ ಕೊಠಡಿಗಳ ದುರಸ್ತಿ ಅಗತ್ಯವಿದೆ.
ಜಿಲ್ಲಾಡಳಿತಕ್ಕೆ ಶಿಥಿಲ ಶಾಲೆಗಳ ಪಟ್ಟಿ: ಸ್ವಾತಂತ್ರ್ಯ ಪೂರ್ವದ ಕೆಲ ಹಾಗೂ 50-60 ವರ್ಷದ ಹಳೆಯ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ದುರಸ್ತಿಯಲ್ಲಿರುವ ಹಾಗೂ ಶಿಥಿಲಾವಸ್ಥೆಯ ಕಟ್ಟಡಗಳನ್ನು ಕ್ಷೇತ್ರ ಶಿಕ್ಷಣ ಇಲಾಖೆ ಪಟ್ಟಿಮಾಡಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ನೀಡಿದೆ. ಜಿಲ್ಲೆಯಲ್ಲಿ ಲೋಕೋಪಯೋಗಿ ಸಚಿವರು ಇರುವುದರಿಂದ ನೂತನ ಕೊಠಡಿಗಳು ನಿರ್ಮಾಣ ಆಗುವ ಆಶಾದಾಯಕದಲ್ಲಿ ಶಿಕ್ಷಕರು ಗ್ರಾಮಸ್ಥರು ಕಳೆದ ಒಂದು ವರ್ಷದಿಂದ ದಿನ ಕಳೆಯುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಹೋಬಳಿವಾರು ವಿವಿರ: ಬಾಗೂರು ಹೋಬಳಿಯಲ್ಲಿ 31 ಗ್ರಾಮದ ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡಬೇಕಿದೆ. 4 ಗ್ರಾಮದ ಶಾಲೆಗಳ ಸಂಪೂರ್ಣ ಶಿಥಿಲಗೊಂಡಿವೆ. ಹಿರೀಸಾವೆ ಹೋಬಳಿಯ 29 ಶಾಲೆಗಳ ದುರಸ್ತಿ ಆಗಬೇಕಿದ್ದು 4 ಶಾಲೆಗಳ ಶಿಥಿಲವಾಗಿವೆ. ನುಗ್ಗೇಹಳ್ಳಿ ಹೋಬಳಿಯಲ್ಲಿ 27 ದುರಸ್ತಿ ಮಾಡಬೇಕಿದ್ದು ಒಂದು ಶಾಲೆ ಶಿಥಿಲಗೊಂಡಿದೆ. ದಂಡಿಗನಹಳ್ಳಿ ಹೋಬಳಿಯಲ್ಲಿ 32 ದುರಸ್ತಿ ಮಾಡಬೇಕಿದ್ದು 2 ಶಿಥಿಲವಾಗಿದೆ. ಕಸಬಾ ಹೋಬಳಿಯಲ್ಲಿ 23 ದುರಸ್ತಿ 2 ಶಿಥಿಲ, ಶ್ರವಣಬೆಳಗೊಳ ಹೋಬಳಿಯ 30 ಗ್ರಾಮದ ಸರ್ಕಾರಿ ಶಾಲೆಗಳ ದುರುಸ್ಥಿಯಾಗಬೇಕಿದ್ದು 3 ಶಾಲೆ ಶಿಥಿಲವಾಗಿವೆ.
ಸೋರುವ ಶಾಲೆಗಳು: 172 ಶಾಲಾ ಕೊಠಡಿಗಳಲ್ಲಿ ಕೆಲವು ಮಳೆಯಿಂದ ಸೋರುತ್ತಿದ್ದರೆ ಹಲವು ಕೊಠಡಿಗಳಿಗೆ ಬಣ್ಣ ಹಚ್ಚಬೇಕಿದೆ. ಹತ್ತಾರು ಶಾಲೆಗಳಿಗೆ ತಡೆಗೋಡೆ ಇಲ್ಲದಿರುವುದರಿಂದ ಗ್ರಾಮದ ರಾಸುಗಳು ಶಾಲಾ ಆವರಣ ಪ್ರವೇಶ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಣ್ಣ ಪುಟ್ಟ ತೊಂದರೆಗಳನ್ನು ಶೀಘ್ರವಾಗಿ ನಿವಾರಣೆ ಮಾಡಲು ತಾಲೂಕು ಆಡಳಿತ ಮುಂದಾಗಬೇಕು.
ಕೊಠಡಿಯಿಲ್ಲದೇ ಬೇರೆಡೆ ಪಾಠ: 16 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲವಾಗಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿವೆ. ಆದ್ದರಿಂದ ಗ್ರಾಮದಲ್ಲಿನ ಸಮುದಾಯ ಭವನ, ಸ್ಥಗಿತವಾಗಿರುವ ಅಂಗನವಾಡಿ ಕೇಂದ್ರ, ದೇವಾಲಯ ಇಲ್ಲವೇ ಗ್ರಾಮದಲ್ಲಿ ಯಾವ ಮನೆ ಕಾಲಿ ಇದೆ ಅಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಗ್ರಾಮದಲ್ಲಿನ ಸಾರ್ವಜನಿಕ ಕಟ್ಟಡಲ್ಲಿ ಶಾಲೆ ನಡೆಯುತ್ತಿವೆ. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿಯೂ ಶಾಲೆ ನಡೆಯುತ್ತಿದ್ದು, ಹಾಲಿನ ವಾಸನೆಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವಂತಾಗಿದೆ.
ನಮ್ಮ ಶಾಲೆಗೆ ಬನ್ನಿ ಸಿಎಂ: ರಾಜ್ಯದ ಮುಖ್ಯ ಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ಶಾಲೆಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಸನ ಜಿಲ್ಲೆ ಹೇಳಿ ಕೇಳಿ ಕುಮಾರಣ್ಣನ ತವರು ಜಿಲ್ಲೆ, ರಾಜಕೀಯವಾಗಿ ಜನ್ಮ ಪಡೆಯದೆ ಇದ್ದರು, ಇದೇ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಅವರು ಬಾಲ್ಯವನ್ನು ಕಳೆದಿದ್ದಾರೆ. ಬಾಲ್ಯದ ನೆನಪಿಗಾದರೂ ಹಾಸನ ಜಿಲ್ಲೆ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡುವ ಮೂಲಕ ಜಿಲ್ಲೆ ಹಾಗೂ ತಾಲೂಕಿನಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಶಾಲಾ ಕಟ್ಟಡ ದುರಸ್ತಿಗೆ ಮುಂದಾಗಬೇಕು ಎಂದು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉದಯವಾಣಿ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ಸಚಿವರೇ ಇತ್ತ ಕಣ್ಣುಹಾಯಿಸಿ: ರಾಜ್ಯದ ಸೂಪರ್ ಸಿಎಂ ಎಂಬ ಖ್ಯಾತಿ ಪಡೆದಿರುವ ಜಿಲ್ಲಾ ಮಂತ್ರಿ ಎಚ್. ಡಿ.ರೇವಣ್ಣ ಮೈತ್ರಿ ಸರ್ಕಾರದಲ್ಲಿ ಪ್ರಭಾವಿ ಖಾತೆ ಯಾಗಿರುವ ಲೋಕೋಪಯೋಗಿ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಹೊಸ ಯೋಜನೆಗೆ ಒತ್ತು ನೀಡುವ ಇವರು ಸರ್ಕಾರಿ ಶಾಲೆ ಕಡೆ ಕಣ್ಣು ಹಾಯಿಸಿದರೆ ಶಿಥಿಲಶಾಲಾ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬಹುದು.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.