ಹೊಳೆನರಸೀಪುರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಳ
Team Udayavani, May 24, 2022, 6:08 PM IST
ಹೊಳೆನರಸೀಪುರ: ಪಟ್ಟಣದ ಪುರಸಭೆಗೆ ಸೇರಿದ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿಯೂ ಸೊಳ್ಳೆಗಳಕಾಟ ಹೆಚ್ಚಾಗಿದ್ದು, ಸೊಳ್ಳೆ ನಿಯಂತ್ರಣಕ್ಕೆ ಮುಂದಾಗದ ಪುರಸಭೆ ಅಧಿಕಾರಿಗಳ ಕಾರ್ಯವೈಕರಿ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದೊಂದು ವಾರದಿಂದ ಪಟ್ಟಣದಲ್ಲಿ ಸುರಿದ ಮಳೆ ನೀರು ಗುಂಡಿಗಳು ಮತ್ತು ತಗ್ಗು ಪ್ರದೇಶಗಳಲ್ಲಿಶೇಖರ ಣೆಯಾಗಿ ಸೊಳ್ಳಗಳ ಉತ್ಪತ್ತಿಯ ಕೇಂದ್ರವಾಗಿ ರೋಗ ರುಜಿನಗಳ ಕೇಂದ್ರಸ್ಥಾನವಾಗಿ ಪರಿಣಮಿಸಿದೆ. ಈ ಬಗ್ಗೆ ಕಳೆದ ವಾರ ಜಿಪಂ ಸಿಇಒ ಕಾಂತರಾಜುನೇತೃತ್ವದಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆದ ಪ್ರಗತಿಪರಿಶೀಲನಾ ಸಭಯಲ್ಲಿ ಪುರಸಭೆ ಸರಹದ್ದಿನಲ್ಲಿಸೊಳ್ಳೆಗಳು ಅಧಿಕವಾಗಿ ಉತ್ಪತ್ತಿಯ ತಾಣವಾಗಿದೆ.
ಇದನ್ನು ನಿಯಂತ್ರಿಸುವಂತೆ ಸ್ವತಃ ಪುರಸಭೆ ಮುಖ್ಯಾಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿ, ಪುರಸಭೆ ವಾರ್ಡ್‌ಗಳಲ್ಲಿ ಔಷಧಿ ಸಿಂಪರಣೆ, ಫಾಗಿಂಗ್ ಮಾಡುವಂತೆ ಸೂಚನೆ ನೀಡಿದ್ದರು.
ಆದರೆ, ಸೂಚನೆ ಪಡೆದ ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಸ್ಪಂದಿಸದ ಆರೋಗ್ಯಾಧಿಕಾರಿ: ಮುಖ್ಯಾಧಿಕಾರಿಗಳಸೂಚನೆಗೆ ಆರೋಗ್ಯಾಧಿಕಾರಿ ವಸಂತ್ ಅವರು, ತಮ್ಮ ಆರೋಗ್ಯ ಅಧಿಕಾರಿಗೆ ಸೂಚನೆ ನೀಡಿ, ತುರ್ತಾಗಿಪಟ್ಟಣದ ವಾರ್ಡ್‌ಗಳಲ್ಲಿ ಔಷಧಿ ಸಿಂಪಡಣೆಮಾಡುವಂತೆ ತಿಳಿಸಿದ್ದರೂ ಆರೋಗ್ಯಾಧಿಕಾರಿಗತಟಸ್ಥ ನೀತಿಯಿಂದ ಔಷಧಿ ಸಿಂಪಡಿಸದೆ ಇರುವುದು ಆರೋಗ್ಯಾಧಿಕಾರಿಗಳ ಕಾರ್ಯವೈಕರಿಗೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ ಆರೋಗ್ಯಾಧಿಕಾರಿ ಮತ್ತು ಮುಖ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಪಟ್ಟಣದ ಕುಂದು ಕೊರತೆಗಳನ್ನು ಸರಿಪಡಿಸುವಲ್ಲಿ ಸ್ಪಂದಿಸಬೇಕು.ಆದರೆ, ಈ ಇಬ್ಬರು ಹೊಳೆನರಸೀಪುರ ಕೇಂದ್ರಸ್ಥಾನದಲ್ಲಿ ಇರದೆ ಪಕ್ಕದ ತಾಲೂಕಿನಲ್ಲಿವಾಸಿಸುತ್ತಿರುವುದು ಸಮ ಸ್ಯೆಗಳ ಪರಿಹಾರ ಕಾಣಲು ಆಗುತ್ತಿಲ್ಲ ಎಂದು ಕೇಳಿ ಬರುತ್ತಿದೆ.
ಆರೋಗ್ಯ ಇಲಾಖೆ ಮನೆ ಮನೆಗೆ ಭೇಟಿ:ಸೊಳ್ಳೆಗಳಿಂದ ಮಲೇರಿಯಾ, ಡೆಂ ಗೆ ಬರುತ್ತದೆ. ಈಬಗ್ಗೆ ತಾಲೂಕು ಆರೋಗ್ಯ ಇಲಾಖೆ ಪಟ್ಟಣದ ಅನೇಕಬಡವಾಣೆಗಳಿಗೆ ತೆರಳಿ ತೊಟ್ಟಿ, ಡ್ರಂಗಳಲ್ಲಿ ಶೇಖರಣೆಅಗಿರುವ ನೀರನ್ನು ಪರೀಕ್ಷಿಸಿ, ಸೊಳ್ಳಗಳ ಲಾರ್ವಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ಆಡಳಿತ ಸಂಪೂರ್ಣ ಕುಂಠಿತ: ಪಟ್ಟಣದ ಪುರಸಭೆಯಲ್ಲಿನ ಆಡಳಿತ ಸಂಪೂರ್ಣ ಕುಂಠಿ ತಗೊಂಡಿದ್ದು, ಇದಕ್ಕೆ ಚುರುಕು ಗೊಳಿಸಲು ಸಾಧ್ಯವಾಗದಷ್ಟು ಹದಗೆಟ್ಟು ನಿಂತಿದೆ. ಚುರುಕು ಗೊಳಿಸಲುಪರಿಹಾರವೆಂದರೆ ಕಳೆದ ಹತ್ತಾರು ವರ್ಷದಿಂದಒಂದೇ ಸ್ಥಾನದಲ್ಲಿರುವ ಸಿಬ್ಬಂದಿ ವರ್ಗಾವಣೆಗೊಳಿಸಿ ಹೊಸದಾಗಿ ಆ ಸ್ಥಾನ ತುಂಬುವುದು ಎಂದುಹೇಳಬಹುದಾಗಿದೆ. ಆದರೆ, ಈ ಕೆಲಸವನ್ನು ಶಾಸಕಎಚ್.ಡಿ. ರೇವಣ್ಣ ಅವರಿಂದ ಮಾತ್ರ ಸಾಧ್ಯ? ಇದಕ್ಕೆಶಾಸಕರು ಮುಂದಾಗುವರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.