ಶೇ.50 ಪ್ರೇಕ್ಷಕರಿಂದ ಏನೂ ಗಿಟ್ಟಲ್ಲ
15ರಿಂದ ಚಿತ್ರ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ರೂ ಪ್ರದರ್ಶಕರ ಸಂಘತೀರ್ಮಾನವೇ ಅಂತಿಮ
Team Udayavani, Oct 13, 2020, 3:28 PM IST
ಸಾಂದರ್ಭಿಕ ಚಿತ್ರ
ಹಾಸನ: ಕೋವಿಡ್ ಕಾರಣದಿಂದ ಕಳೆದ ಮಾರ್ಚ್ ಕೊನೆಯ ವಾರದಿಂದ ಮುಚ್ಚಿರುವ ಚಲನಚಿತ್ರ ಮಂದಿರಗಳನ್ನು ಅ.15ರಿಂದ ತೆರೆದು ಚಿತ್ರ ಪ್ರದರ್ಶನಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದರೂ ಮಾಲಿಕರು ಪ್ರದರ್ಶಕರ ಸಂಘದ ನಿರ್ಧಾರ ಎದುರು ನೋಡುತ್ತಿದ್ದಾರೆ. ಚಿತ್ರಮಂದಿಗಳ ಒಟ್ಟು ಆಸನಗಳ ಶೇ.50 ವೀಕ್ಷಕರಿಗಷ್ಟೇ ಪ್ರವೇಶ ನೀಡಿ, ಆಸನಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು, ಪ್ರೇಕ್ಷಕರುಮಾಸ್ಕ್ ಧರಿಸಬೇಕು, ಚಿತ್ರ ಮಂದಿರದ ಒಳ ದ್ವಾರ ಪ್ರವೇಶಿಸುವಾಗ ಸ್ಯಾನಿಟೈಸರ್ ಬಳಸಬೇಕು, ಚಿತ್ರ ಮಂದಿರ ಸಿಬ್ಬಂದಿ ಪಿಪಿಇ ಕಿಟ್ ಧರಿಸಬೇಕು ಎಂಬ ಷರತ್ತು ವಿಧಿಸಿ ಸರ್ಕಾರ ಅನುಮತಿ ನೀಡಿದೆ.
ಸರ್ಕಾರ ವಿಧಿಸಿರುವ ಷರತ್ತು ಪಾಲನೆ ಮಾಡಿ ನಷ್ಟ ಅನುಭವಿಸಿಕೊಂಡು ಚಲನಚಿತ್ರ ಪ್ರದರ್ಶನ ಮಾಡಲು ಹಾಗೂ ವಿತರಕರು ವಿಧಿಸಿರುವ ಎನ್‌ಆರ್‌ಟಿ ಪಾವತಿಸಿ ಚಿತ್ರಮಂದಿಗಳ ಮಾಲಿ ಕರು ಚಿತ್ರಗಳ ಪ್ರದರ್ಶನಕ್ಕೆ ಸಿದ್ಧರಿಲ್ಲ. ಸರ್ಕಾರ ಅನುಮತಿ ನೀಡಿದರೂ ಪ್ರದರ್ಶಕರ ಸಂಘ ಅರ್ಥಾತ್ ಚಲನಚಿತ್ರ ಮಾಲಿಕರ ಸಂಘವು ಚಿತ್ರ ಪ್ರದರ್ಶನಕ್ಕೆ ಇಂದಿನವರೆಗೂ ನಿರ್ಧಾರ ಕೈಗೊಂಡಿಲ್ಲ. ಹಾಗಾಗಿ ಅ.15ರಿಂದಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುವುದು ಅನುಮಾನ.
ಷರತ್ತು ಪ್ರಕಾರ ಸಜ್ಜುಗೊಂಡಿಲ್ಲ: ಜಿಲ್ಲೆಯ ಚಲನಚಿತ್ರ ಮಾಲಿಕರು ಪ್ರದರ್ಶಕರ ಸಂಘದ ನಿರ್ದೇನವನ್ನು ಎದುರು ನೋಡುತ್ತಿದ್ದಾರೆ. ಬಹುಶಃ ಅ.15 ರೊಳಗೆ ಪ್ರದರ್ಶಕರ ಸಂಘವು ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಸಾಧ್ಯ. ಸಭೆ ನಡೆಯುವ ದಿನಾಂಕವೂ ಇದುವರೆಗೂ ನಿಗದಿಯಾಗಿಲ್ಲ. ಹಾಗಾಗಿ ಬಹುಪಾಲು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಕಳೆದ 7 ತಿಂಗಳಿಂದ ಚಿತ್ರಮಂದಿರಗಳು ಮುಚ್ಚಿವೆ. ಆಗಿಂದಾಗೆ ಚಿತ್ರಮಂದಿರಗಳ ಸ್ವಚ್ಛತೆ ಮಾಡಿಕೊಂಡರೂ ಸರ್ಕಾರ ವಿಧಿಸಿರುವ ಷರತ್ತುಗಳ ಪ್ರಕಾರ ಸಜ್ಜುಗೊಂಡಿಲ್ಲ.
ಎನ್‌ಆರ್‌ಐಯಿಂದ ನಷ್ಟ: ಟಿಕೆಟ್ ಮಾರಾಟವಾದ ಲೆಕ್ಕ ಅಧರಿಸಿ ಹಂಚಿಕೆ ಮಾಡಿಕೊಳ್ಳುವ ಪದ್ಧತಿಯ ಬದಲು ಹಿಂದಿನಂತೆ ಬಾಡಿಗೆ ಪದ್ಧತಿ ಆಧರಿಸಿ ಚಿತ್ರಗಳ ಪ್ರದರ್ಶನವಾಗಬೇಕು. ಎನ್‌ಆರ್‌ಐ ಪಾವತಿಯ ವ್ಯವಸ್ಥೆ ರದ್ದಾಗಬೇಕು. ಎನ್‌ಆರ್‌ಐಯಿಂದ ನಷ್ಟಅನುಭವಿಷಬೇಕಾಗಿದೆ ಎಂಬುದು ಮಂದಿರಗಳ ಮಾಲಿಕರ ವಾದ. ಇದು ರಾಜ್ಯ ಮಟ್ಟದಲ್ಲಿಯೇ ತೀರ್ಮಾನವಾಗಬೇಕು. ಅಲ್ಲಿಯವರೆಗೂ ಚಿತ್ರ ಪ್ರದರ್ಶನ ಸಾಧ್ಯವಿಲ್ಲ ಎಂಬುದು ಬಹುಪಾಲು ಚಿತ್ರ ಮಂದಿರಗಳ ಮಾಲಿಕರ ಅಭಿಪ್ರಾಯ.
ಕಳೆದ 7 ತಿಂಗಳಿನಿಂದ ಚಿತ್ರಮಂದಿರಗಳು ಮುಚ್ಚಿವೆ. ಇದರಿಂದ ಹೆಚ್ಚು ನಷ್ಟವನ್ನೇನೂ ಅನುಭವಿಸಿಲ್ಲ. ಚಿತ್ರಮಂದಿರಗಳ ಬಹುಪಾಲು ಕಾರ್ಮಿಕರು ಈಗ ಬದುಕಿಗೆ ಬೇರೆ, ಬೇರೆ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಚಿತ್ರ ಮಂದಿರದ ಸ್ವತ್ಛತಾ ಕೆಲಸ ವಾರಕ್ಕೊಮ್ಮೆ ಮಾತ್ರ ನಡೆಯುತ್ತಿದ್ದು, ಕಾರ್ಮಿಕರಿಗೆ ಸಂಬಳ ಕೊಡುವ ಹೆಚ್ಚಿನ ಹೊರೆ ಇಲ್ಲ. ವಿದ್ಯುತ್ ಬಿಲ್ ಪಾವತಿಯ ಆತಂಕವೂ ಇಲ್ಲ. ಹಾಗಾಗಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಹಾಗೂ ಎನ್‌ಆರ್‌ಐ ವಿವಾದ ಇತ್ಯರ್ಥವಾಗುವವರೆಗೂ ಚಿತ್ರ ಪ್ರದರ್ಶನ ಬೇಡ ಎಂಬುದು ಕೆಲವು ಚಿತ್ರಮಂದಿರಗಳ ಮಾಲಿಕರ ಅಭಿಮತವಾಗಿದೆ. ಸರ್ಕಾರದ ಷರತ್ತುಗಳ ಪಾಲನೆ ಹಾಗೂ ತೆರಿಗೆ ಮತ್ತಿತರ ಕಾರಣಗಳಿಂದಾಗಿ ಚಿತ್ರಮಂದಿರ ನಿರ್ವಹಿಸುವುದೇ ಕಷ್ಟವಾಗಿದೆ. ಹಾಗಾಗಿಯೇ ಬೃಹತ್ ನಗರಗಳಲ್ಲಿ ಚಿತ್ರಮಂದಿರಗಳ ಜಾಗದಲ್ಲಿ ವಾಣಿಜ್ಯ ಸಂಕೀರ್ಣ, ಕಲ್ಯಾಣ ಮಂಟಪಗಳು ತಲೆ ಎತ್ತುತ್ತಿವೆ. ಹಾಗಾಗಿ ತೆರಿಗೆ ಪದ್ಧತಿಯಲ್ಲಿ ಸರಳ ಹಾಗೂ ಎನ್‌ಆರ್‌ಐ ವಿಷಯದ ಇತ್ಯರ್ಥವಾಗದೇ ಚಿತ್ರಮಂದಿರ ತೆರೆಯಬಾರದು ಎಂಬುದು ಚಿತ್ರ ಪ್ರದರ್ಶಕರ ಸಂಘದ ನಿರ್ಧಾರವಾಗಿದೆ. ಹಾಗಾಗಿ ಚಿತ್ರ ಪ್ರದರ್ಶಕರ ಸಂಘದ ನಿರ್ಧಾರ ಎದುರು ನೋಡುತ್ತಿದ್ದೇವೆ ಎಂದು ಜಿಲ್ಲೆಯ ಚಿತ್ರ ಮಂದಿರಗಳ ಮಾಲಿಕರು ಹೇಳುತ್ತಾರೆ.
ಸರ್ಕಾರ ಶೇ.50 ಪ್ರೇಕ್ಷಕರಿಗೆ ಮಾತ್ರ ಚಿತ್ರಮಂದಿರಕ್ಕೆ ಪ್ರವೇಶ ನಿಗದಿಪಡಿಸಿರುವುದರಿಂದ ಮಾಲಿಕರು ನಷ್ಟ ಅನುಭವಿಸಬೇಕಾಗುತ್ತದೆ. ಶೇ.50 ಅಥವಾ ಶೇ.100 ಪ್ರೇಕ್ಷಕರು ಬಂದರೂ ವಿದ್ಯುತ್ ಶುಲ್ಕ,ಕಾರ್ಮಿಕರ ವೇತನ, ಕೋವಿಡ್ ನಿರ್ವಹಣಾ ವೆಚ್ಚದಲ್ಲಿ ವ್ಯತ್ಯಾಸವಾಗಲ್ಲ. ಹಾಗಾಗಿಯೇ ಸರ್ಕಾರ ಅ.15ರಿಂದ ಚಿತ್ರಮಂದಿರತೆರೆಯಲು ಅನುಮತಿ ನೀಡಿದರೂ ಪ್ರದರ್ಶಕರ ಸಂಘಇದುವರೆಗೂ ತೀರ್ಮಾನಕ್ಕೆ ಬಂದಿಲ್ಲ.ಸಂಘದಲ್ಲಿ ತೀರ್ಮಾನ ಆಗುವವರೆಗೂ ಚಿತ್ರ ಪ್ರದರ್ಶನ ಮಾಡಲ್ಲ. ಚಿತ್ರಮಂದಿರ ತೆಗೆದರೂಪ್ರೇಕ್ಷಕರು ಬರುತ್ತಾರೆಂಬ ನಂಬಿಕೆಯೂ ಇಲ್ಲ. ಚಿತ್ರ ನಿರ್ಮಾಪಕರೂ ಬೃಹತ್ ಬಜೆಟ್ ಸಿನಿಮಾ ಪ್ರದರ್ಶನಕ್ಕೆ ಸಿದ್ಧರಿಲ್ಲ. ಈ ಎಲ್ಲ ವಿಷಯಗಳೂ ಇತ್ಯರ್ಥವಾದರೆ ನ.1ರಿಂದ ಚಿತ್ರಗಳ ಪ್ರದರ್ಶನ ಸಾಧ್ಯವಾಗಬಹುದು. –ಕಾಂತರಾಜ್, ವ್ಯವಸ್ಥಾಪಕ, ಎಬಿಜಿ ಚಿತ್ರಮಂದಿರ, ಹಾಸನ.
ಆರು ತಿಂಗಳಾದರೂ ತೆರೆಯಲ್ಲ : ಚಲನಚಿತ್ರಗಳ ಪ್ರದರ್ಶನಕ್ಕೆ ಸರ್ಕಾರ ಈಗವಿಧಿಸಿರುವ ಷರತ್ತುಗಳನ್ನು ಪಾಲಿಸುವುದು ಕಷ್ಟವಲ್ಲ. ಈಗಾಗಲೇ ಕೋವಿಡ್ ನಿರ್ವಹಣಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆದರೆ, ಚಿತ್ರಮಂದಿರಗಳ ಬಾಡಿಗೆಯ ವ್ಯವಸ್ಥೆ ಜಾರಿಯಾಗಬೇಕು. ಎನ್ ಆರ್‌ಐ ವ್ಯವಸ್ಥೆ ರದ್ದಾಗಬೇಕು ಎಂಬುದು ನಮ್ಮ ಪ್ರಮುಖಬೇಡಿಕೆ. ಹಾಗಾಗಿ ಈ ವಿಷಯ ಚಿತ್ರ ಪ್ರದರ್ಶಕರ ಸಂಘದಲ್ಲಿಯೇ ತೀರ್ಮಾನವಾಗಬೇಕು. ಇದು ಇತ್ಯರ್ಥವಾಗದಿದ್ದರೆ 6 ತಿಂಗಳಾದರೂ ಚಿತ್ರ ಪ್ರದರ್ಶನ ನಡೆಯಲ್ಲ. ಈಗ ಚಿತ್ರಮಂದಿರ ಮುಚ್ಚಿರುವುದರಿಂದ ನಮಗೆ ನಿರ್ವಹಣೆ ಹೊರೆಯಿಲ್ಲ.ಕಾರ್ಮಿಕರು ಬದುಕಿಗೆ ಬೇರೆ, ಬೇರೆ ದಾರಿ ಕಂಡುಕೊಂಡಿದ್ದಾರೆ. ಹಾಗಾಗಿ ಎನ್‌ಆರ್‌ಐ ವ್ಯವಸ್ಥೆ ಇತ್ಯರ್ಥವಾಗಬೇಕು. – ಕೃಷ್ಣಪ್ಪ, ಮಾಲಿಕರು, ಧನಲಕ್ಷ್ಮೀ ಚಿತ್ರ ಮಂದಿರ, ಚನ್ನರಾಯಪಟ್ಟಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.