ಮಾಡಾಳು ಶ್ರೀ ಸ್ವರ್ಣಗೌರಿ ಜಾತ್ರಾ ಮಹೋತ್ಸವ
Team Udayavani, Sep 13, 2018, 3:04 PM IST
ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಮಾಡಾಳು ಗ್ರಾಮದ ಸ್ವರ್ಣಗೌರಿದೇವಿ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸುಕೇತ್ರ ಕೋಡಿ ಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ದೇವಿಗೆ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯ ನೆರವೇರಿಸಿ ಚಾಲನೆ ನೀಡಿದರು.
ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಗ್ರಾಮದ ಸ್ವರ್ಣ ಗೌರಿದೇವಿಯ ಮೂರ್ತಿಯನ್ನು ಮೂಲ ಸನ್ನಿಧಿ ಬಾವಿಮನೆಯಿಂದ ಪ್ರತಿವರ್ಷದಂತೆ ಗೌರಿ ಹಬ್ಬದ ದಿನವಾದ ಬುಧವಾರ ಪೂಜಾ ಕೈಂಕರ್ಯ ನೆರವೇರಿಸಿ, ನಂತರ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಂಗಳ ವಾದ್ಯಗಳೊಂದಿಗೆ ಗ್ರಾಮದ ಹೆಬ್ಟಾಗಿಲ್ಲಿರುವ ಶ್ರೀ ಬಸವೇಶ್ವರ ದೇವಾಲಯಕ್ಕೆ ಮೆರವಣಿಗೆ
ಯಲ್ಲಿ ಕರೆ ತರಲಾಯಿತು.
ದಾರಿಯುದ್ದಕ್ಕೂ ಭಕ್ತರು ಕರ್ಪೂರದ ಆರತಿ ಹಚ್ಚುವ ಮೂಲಕ ತಮ್ಮ ಭಕ್ತಿಭಾವ ಸಮರ್ಪಿಸಿದರು. ಶ್ರೀದೇವಿಯ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಿದ ಬಳಿಕ ಭಕ್ತರು ಸಾಲಿನಲ್ಲಿ ನಿಂತು ಸ್ವರ್ಣಗೌರಿ ದೇವಿಯ ದರ್ಶನ ಪಡೆದರು. ನಂತರ ಪೂಜಾ ಕಾರ್ಯಗಳನ್ನು ನೆರವೇರಿಸಲು ಅವಕಾಶ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಾಡಾಳು ಸ್ವಾಮಿ, ತಾಪಂ ಸದಸ್ಯರಾದ ಯಶೋದಮ್ಮ, ವನಜಾ ಪ್ರಕಾಶ್‌ಮೂರ್ತಿ, ಗ್ರಾಪಂ ಅಧ್ಯಕ್ಷ ಚಂದ್ರ ಶೇಖರ್, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಇದ್ದರು.
ಭಕ್ತಸಾಗರ: ಗೌರಿ ಹಬ್ಬದ ಅಂಗವಾಗಿ ಮುಂಜಾನೆಯಿಂದಲೇ ಗ್ರಾಮಕ್ಕೆ ಭಕ್ತರ ಸಮೂಹ ಆಗಮಿ ಸಿತ್ತು. ಎಲ್ಲಿ ನೋಡಿದರೂ ಸ್ವರ್ಣಗೌರಿ ದೇವಿಯ ಭಕ್ತರೇ ತುಂಬಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸಾರಿಗೆ ಸಂಸ್ಥೆ ಬಸ್‌ಗಳು ಮತ್ತು ಖಾಸಗಿ ವಾಹನಗಳಿಂದ ಮಾಡಾಳು ಗ್ರಾಮಕ್ಕೆ ಬಂದಿದ್ದರು.
ಬಸವೇಶ್ವರ ದೇವಾಲಯದಿಂದ ಹುಳಿಯಾರ್ ರಸ್ತೆ ಯವರೆಗೂ ಭಕ್ತರು ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ತಮ್ಮ ಹರಕೆ, ಕಾಣಿಕೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು. ನೂರಾರು ಭಕ್ತರು ದೇವಾಲಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಅಗ್ನಿ ಕುಂಡದಲ್ಲಿ ಅಪಾರ ಪ್ರಮಾಣದ ಕರ್ಪೂರ ಸಮರ್ಪಿಸಿ, ಗುಗ್ಗಳ ಸೇವೆ ಸಲ್ಲಿಸಿದರು. ಶ್ರೀದೇವಿಗೆ ಪ್ರಿಯವಾದ ಮಡಿಲಅಕ್ಕಿಯನ್ನು ಸೀರೆಗಳ ಕುಪ್ಪಸಗಳನ್ನು ನೀಡಿ ಮಹಿಳೆಯರು ತಮ್ಮ ಹರಕೆ ತೀರಿಸಿದರು. ಇನ್ನೂ 9 ದಿನಗಳ ಕಾಲ ಗ್ರಾಮದಲ್ಲಿ ಶ್ರೀದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮದಿಂದ ನಡೆಯಲಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಮಾಡಾಳು ಗ್ರಾಮಕ್ಕೆ ಬರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.