ದಶಕ ಕಳೆದ್ರೂ ತೆರೆದಿಲ್ಲ ಜಿಮ್
Team Udayavani, Jan 26, 2019, 7:55 AM IST
ಚನ್ನರಾಯಪಟ್ಟಣ: ತಾಲೂಕು ಕ್ರೀಡಾಂಗಣದಲ್ಲಿರುವ ಸಾರ್ವಜನಿಕ ಮಲ್ಟಿ ಜಿಮ್ ಬಳಕೆಗೆ ನೀಡದ ಕಾರಣ ಪಾಳು ಬಿದ್ದಿದೆ. ಕೊಠಡಿ ಬಾಗಿಲು ತೆರೆದು 10 ವರ್ಷಗಳೇ ಕಳೆದಿದ್ದು, ಅಲ್ಲಿನ ಪರಿಕರಗಳು ಧೂಳು ತುಂಬಿಕೊಂಡು ತಕ್ಕು ಹಿಡಿಯುತ್ತಿವೆ. ಲಕ್ಷಾಂತರ ರೂ. ಜನರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಯುವಜನ ಮತ್ತು ಕ್ರೀಡಾ ಇಲಾಖೆಯು 10 ವರ್ಷಗಳ ಹಿಂದೆ 5 ಲಕ್ಷ ರೂ. ವೆಚ್ಚ ಮಾಡಿ ಮಲ್ಟಿ ಜಿಮ್ ಪ್ರಾರಂಭಿಸಿ, ಅಗತ್ಯ ಪರಿಕರಗಳನ್ನೂ ಒದಗಿಸಿದೆ. ಆದರೆ, ಜನರ ಧೂಳು ತುಂಬಿಕೊಂಡು ತುಕ್ಕು ಹಿಡಿಯುತ್ತಿವೆ. ಒಂದು ದಶಕದಿಂದ ಜಿಮ್ ಪರಿಕರವನ್ನು ಒಂದು ದಿನವೂ ಬಳಸದೆ ಕೊಠಡಿಯಲ್ಲಿ ಇರಿಸಲಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿಕೂತಿದ್ದಾರೆ.
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ತಾಲೂಕು ಕ್ರೀಡಾಂಗಣದ ಒಂದು ಕೋಣೆಯನ್ನು ಮಲ್ಟಿಜಿಮ್ ಮಾಡಿ ಅಲ್ಲಿಗೆ ಅಗತ್ಯವಿರುವ ಪರಿಕರವನ್ನು ಲಕ್ಷಾಂತರ ರೂ. ವೆಚ್ಚ ಮಾಡಿ ಪೂರೈಕೆ ಮಾಡಿದೆ. ಆದರೆ, ಇದು ಸಾರ್ವಜನಿಕರ ಉಪಯೋಗಕ್ಕೆ ನೀಡದಿರುವುದರಿಂದ ಕೋಣೆಯ ಒಳಗೆ ಇಲಿ ಹೆಗ್ಗಣಗಳ ವಾಸ ಮಾಡುತ್ತಿವೆ.
ಪಾಳು ಬಿದ್ದಿವೆ: ಹಣವಂತರು ಖಾಸಗಿ ಜಿಮ್‌ಗಳಿಗೆ ತೆರಳಿ ಸದೃಢ ದೇಹ ಹೊಂದಿ, ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮುತ್ತಾರೆ. ಆದರೆ, ಬಡ ಕೂಲಿ ಕಾರ್ಮಿಕರ ಮಕ್ಕಳು, ಬಡವರಿಗೆ ಸೂಕ್ತ ಸೌಲಭ್ಯವಿಲ್ಲದೆ ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿಯುತ್ತಾರೆ. ಇಂತಹವರಿಗಾಗಿ ಸರ್ಕಾರ ಜಿಮ್ ಪ್ರಾರಂಭಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೊಠಡಿ ಬಾಗಿಲು ತೆರೆಯದೇ ಪಾಳು ಬಿದ್ದಿದೆ.
ಕೊಠಡಿಯಲ್ಲಿ ದಶಕದಿಂದ ಧೂಳು ಹಿಡಿಯುತ್ತಿರುವ ಜಿಮ್ ಪರಿಕರದ ಬಗ್ಗೆ ಕ್ರೀಡಾಸಕ್ತರು, ಯುವಕರು ತಹಶೀಲ್ದಾರ್ ಹಾಗೂ ತಾಪಂ ಇಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಯುವಜನ ಮತ್ತು ಕ್ರೀಡಾ ಇಲಾಖೆ ಕಚೇರಿ ಜಿಲ್ಲಾ ಕೇಂದ್ರದಲ್ಲಿದೆ. ಇದರ ಜವಾಬ್ದಾರಿ ಅವರದ್ದು ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದೆ.
ಓರ್ವ ಸಿಬ್ಬಂದಿ ನೇಮಿಸಬಹುದು
ಅಭಿವೃದ್ಧಿ ಹೆಸರಿನಲ್ಲಿ ಎರಡು ದಶಕದಿಂದ ತಾಲೂಕು ಕ್ರೀಡಾಂಗಣಕ್ಕೆ 3 ಕೋಟಿ ರೂ. ವೆಚ್ಚ ಮಾಡಿದ್ದರೂ ಅಗತ್ಯ ಇರುವ ಜಿಮ್ ಕೊಠಡಿ ನಿರ್ಮಾಣಕ್ಕೆ ಮುಂದಾಗಲಿಲ್ಲ. ಪಾಳು ಬಿದ್ದಿರುವ ಜಿಮ್ ಕೊಠಡಿ ಬಾಗಿಲು ತೆರೆದು ಮಾಸಿಕ ಇಂತಿಷ್ಟು ಹಣ ನಿಗದಿ ಮಾಡಿ ಅದರಲ್ಲಿ ಬರುವ ಹಣದಿಂದ ಓರ್ವ ಕೆಲಸಗಾರರ ನೇಮಿಸಿ ಉಪಯೋಗಕ್ಕೆ ಅವಕಾಶ ಕಲ್ಪಿಸಬಹುದು. ಇದನ್ನು ಮಾಡುವಲ್ಲಿಯೂ ಅಧಿಕಾರಿಗಳು ವಿಫಲರಾಗಿದ್ದಾರೆ.
ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.