ಮಳಿಗೆ ಹರಾಜು ಹಾಕದೇ ಹಣ ವಸೂಲಿ

Team Udayavani, Feb 10, 2021, 3:45 PM IST

ಮಳಿಗೆ ಹರಾಜು ಹಾಕದೇ ಹಣ ವಸೂಲಿ

ಚನ್ನರಾಯಪಟ್ಟಣ: ಮುಖ್ಯಾಧಿಕಾರಿಗಳು ಪುರಸಭೆ ಆದಾಯ ಮೂಲ ಹೆಚ್ಚಿಸಲು ಮುಂದಾಗದೆ ತಮ್ಮ ವೈಯಕ್ತಿಕ ಲಾಭಕ್ಕೆ ಮುಂದಾಗಿದ್ದು, ಅಂಗಡಿ ಮಳಿಗೆಗಳನ್ನು ಹರಾಜು ಹಾಕದೇ, ಮಳಿಗೆದಾರರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಸದಸ್ಯ ಪ್ರಕಾಶ್‌ ಆರೋಪಿಸಿದರು.

ಪಟ್ಟಣದ ಪುರಸಭಾಧ್ಯಕ್ಷ ಎಚ್‌.ಎನ್‌.ನವೀನ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದಅವರು, ಪುರಸಭೆ ಮಳಿಗೆ ಹರಾಜು ಮಾಡದೆ ನ್ಯಾಯಾಲಯದ ನೆಪವೊಡ್ಡಿ ಮಳಿಗೆದಾರರಿಂದ ಹಣವಸೂಲಿಗೆ ಮುಖ್ಯಾಧಿಕಾರಿ ಕುಮಾರ್‌ ಮುಂದಾಗಿದ್ದಾರೆ.

ಅಂಗಡಿ ಮಳಿಗೆಯನ್ನು ಹರಾಜು ಮಾಡುವಂತೆ ನ್ಯಾಯಾಲಯ ಹೇಳಿದ್ದರೂ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ, 171, 154 ಹಾಗೂ 17ನೇ ನಂಬರ್‌ ಅಂಗಡಿ ಮಳಿಗೆಯನ್ನುಹರಾಜಿನಿಂದ ಕೈಬಿಟ್ಟಿದ್ದಾರೆ, ಅನೇಕ ಮಂದಿ ಬಾಡಿಗೆ ನೀಡದೆ ಇದ್ದರೂ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಕೋಪಗೊಂಡ ಅಧ್ಯಕ್ಷ ನವೀನ್‌, ಅಧಿಕಾರಿಗಳ ಬಗ್ಗೆ ಆರೋಪ ಮಾಡುವುದು ತರವಲ್ಲ, ಅವರು ಲಂಚ ಪಡೆದಿದ್ದರೆ ಸಭೆಗೆ ಸಾಕ್ಷಿ ಸಮೇತ ಸಾಬೀತು ಮಾಡಲಿ, ಸುಮ್ಮನೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ, ಯಾವ ಅಂಗಡಿಯವರುಬಾಡಿಗೆ ನೀಡಿಲ್ಲ ಅದನ್ನು ಬಾಗಿಲು ಹಾಕಲಾಗುತ್ತಿದೆ ಎಂದರು.

ಇದಕ್ಕೆ ಶಾಸಕ ಬಾಲಕೃಷ್ಣ ಧ್ವನಿಗೂಡಿಸಿ ದಾಖಲೆ ನೀಡಿದರೆ ಶಿಸ್ತುಕ್ರಮಕ್ಕೆ ಮುಂದಾಗಬಹುದು, ಇನ್ನು ಅಂಗಡಿ ಬಾಡಿಗೆ ವಿಷಯದಲ್ಲಿ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ಖಾತೆ ಮಾಡಿಸಿಕೊಂಡು ಬಾಡಿಗೆ ಕೊಟ್ಟಿದ್ದಾರೆ: ಸದಸ್ಯ ಪ್ರಕಾಶ್‌ ಮಾತನಾಡಿ, ಪುರಸಭೆಗೆ ಸೇರಿದ ಗ್ರಾಮ ಠಾಣಾವನ್ನುಖಾಸಗಿ ವ್ಯಕ್ತಿ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡು ಅನ್ಯರಿಗೆ ಬಾಡಿಗೆ ನೀಡಿದ್ದಾನೆ. ಮಾಸಿಕವಾಗಿ ಬಾಡಿಗೆ ಹಣ ವಸೂಲಿ ಮಾಡುತ್ತಿದ್ದಾನೆ. ಈ ಬಗ್ಗೆ ಚರ್ಚಿಸಲು ಅಕ್ರಮ ಖಾತೆವಿಷಯವನ್ನು ಸಭೆ ಅಜೆಂಡಾಕ್ಕೆ ತರುವಂತೆ ಅಧ್ಯಕ್ಷರಿಗೆ ತಿಳಿಸಿದ್ದರೂ ಇದನ್ನು ಕೈ ಬಿಟ್ಟಿದ್ದಾರೆ. ಇದನ್ನು ಗಮನಿಸಿದರೆ ಖಾತೆದಾರರ ಪರವಾಗಿ ಅಧ್ಯಕ್ಷರು ನಿಂತಿದ್ದಾರೆ ಎಂದು ಅನುಮಾನ ವ್ಯಕ್ತ ಪಡಿಸಿದರು.

ಆಡಿಟ್‌ ವರದಿ ನೀಡಲು ಸೂಚನೆ: ಸಭೆಯಲ್ಲಿ ವೆಚ್ಚದ ಬಗ್ಗೆ ಅನುಮೋದನೆ ಪಡೆಯುವ ಅಧಿಕಾರಿಗಳು, ಕಳೆದ ಎರಡು ಅವಧಿಯಿಂದ ಸಭೆಗೆ ಆಡಿಟ್‌ ವರದಿ ಮಂಡಿಸುತ್ತಿಲ್ಲ, ಇನ್ನುಸದಸ್ಯರಿಗೂ ವರದಿ ನೀಡುತ್ತಿಲ್ಲ, ಆದಾಯ ಸೋರಿಕೆ ಆಗಿರಬಹುದು, ಮುಂದೆ ಇದೇ ರೀತಿ ಆದರೆ, ಸಭೆಯಲ್ಲಿ ವೆಚ್ಚ ಮಾಡಿರುವುದಕ್ಕೆ ಅನುಮೋದನೆ ನೀಡುವುದಿಲ್ಲಎಂದಾಗ, ಶಾಸಕ ಬಾಲಕೃಷ್ಣ ಮಾತನಾಡಿ, ಅಧಿಕಾರಿಗಳುಈವರೆಗೆ ಪುರಸಭೆಯಲ್ಲಿ ವೆಚ್ಚ ಮಾಡಿರುವ ಬಗ್ಗೆ ಮಾಹಿತಿ ನೀಡಲು ಪ್ರತ್ಯೇಕ ಸಭೆ ಮಾಡೋಣ ಅಂದು ಆಡಿಟ್‌ ವರದಿ ನೀಡಬೇಕು ಎಂದು ಸಲಹೆ ನೀಡಿದರು.

ಕರವಸೂಲಿಗೆ ಮುಂದು: ಅಧ್ಯಕ್ಷ ನವೀನ್‌ ಸದಸ್ಯರ ಪ್ರಶ್ನೆಗೆ ಉತ್ತರಿಸಿ ಈಗಾಗಲೆ 2.65 ಕೋಟಿ ರೂ. ತೆರಿಗೆಸಂಗ್ರಹವಾಗಿದೆ, 50 ಲಕ್ಷ ರೂ. ನೀರಿನ ಕರ ವಸೂಲಿ ಆಗಿದೆ.ಬಾಡಿಗೆ ಹಣ ನೀಡದ ಮಳಿಗೆ ಬಾಗಿಲು ಹಾಕಲಾಗುತ್ತಿದೆ,ಇನ್ನು 500ಕ್ಕೂ ಹೆಚ್ಚು ಮಳಿಗೆಗಳಿಗೆ ಉದ್ಯಿಮೆ ಪರವಾನಗಿ ನೀಡಿದ್ದು ಅದರಿಂದಲೂ ಹಣ ಸಂಗ್ರಹವಾಗಿದೆ. 88 ಲಕ್ಷ ರೂ. ಮಳಿಗೆಯಿಂದ ಬಾಡಿಗೆ ವಸೂಲಿ ಮಾಡಲಾಗಿದೆ ಎಂದು ಸಭೆಗೆ ಗಮನಕ್ಕೆ ತಂದರು.

ಪುರಸಭೆ ಉಪಾಧ್ಯಕ್ಷ ಯೋಗೀಶ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ, ಮುಖ್ಯಾಧಿಕಾರಿ ಎಂ.ಕುಮಾರ್‌ ಇದ್ದರು.

ಟಾಪ್ ನ್ಯೂಸ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.