ಪುರಸಭೆ ಜಾಗ ಒತ್ತುವರಿ ತೆರವಿಗೆ ಆಗ್ರಹ
Team Udayavani, Jan 17, 2020, 12:52 PM IST
ಬೇಲೂರು: ಪಟ್ಟಣದ ಭಿಷ್ಠಮ್ಮನ ಕರೆ ಪಕ್ಕದಲ್ಲಿರುವ ಪುರಸಭೆ ಜಾಗದ ಒತ್ತುವರಿ ತೆರವಿಗೆ ಆಗ್ರಹಿಸಿ ಕೆರೆ ಪಕ್ಕದಲ್ಲಿರುವ ಜಾಗದ ಮುಂದೆ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಎಂ.ಜಿ. ವೆಂಕಟೇಶ್ ಮಾತನಾಡಿ, 1983ರಲ್ಲಿ ಪುರಸಭೆಯ ಅಧೀನದಲ್ಲಿದ್ದ 3 ಎಕರೆ 4 ಗುಂಟೆ ಜಾಗವನ್ನು ಸಂತೆ ಮೈದಾನನಿರ್ಮಿಸಲು ಅಂದಿನ ಅಧ್ಯಕ್ಷರಾಗಿದ್ದ ಬಿ.ಪಿ.ನಾಗರಾಜ್ ಅವಕಾಶ ಮಾಡಿಕೊಟ್ಟಿದ್ದರು. ನಂತರ ಯಾರಿಗೂ ಗೊತ್ತಾಗದಂತೆ ಖಾಸಗಿ ಸಂಸ್ಥೆಯವರು ಅವಧಿ ಮೀರಿದ ಕರಾರು ಪತ್ರದ ಮೂಲಕ ಜಾಗವನ್ನು ಅತಿಕ್ರಮಣ ಮಾಡಿ ಆಜಾಗದಲ್ಲಿ ಶೆಡ್ ನಿರ್ಮಿಸಿ ಒಬ್ಬ ಭದ್ರತಾ ಸಿಬ್ಬಂದಿಯನ್ನು ನೇಮಿಸಿ ಆ ಜಾಗದಲ್ಲಿ ಯಾರೂ ಓಡಾಡದಂತೆ ತಡೆಯುತ್ತಿದ್ದಾರೆ. ಇದರಿಂದ ಒಳ ಚರಂಡಿ ಕಾಮಗಾರಿಗೆ ಪೈಪ್ ಅಳವಡಿಸಲು ತೊಂದರೆಯಾಗಿದ್ದು,ಈ ಮಾರ್ಗದಲ್ಲಿ ಸಂಚರಿಸಲು ಜಾಗಲ್ಲದೇ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಪಾದಿಸಿದರು.
ಸರ್ಕಾರಿ ಜಾಗದ ಅತಿಕ್ರಮಣದ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿದರು. ನಿವಾಸಿ ಮಲ್ಲಿಕ್ ಮಾತನಾಡಿ, ಕೆರೆಯ ಬಳಿ ಇದ್ದ ಐತಿಹಾಸಿಕ ಕುರುಹುಗಳನ್ನು ನಾಶ ಮಾಡಿ ಖಾಸಗಿ ಸಂಸ್ಥೆಯವರು ಮಾಡಿರುವ ಸರ್ಕಾರಿ ಜಾಗದ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜು, ರಾಮಣ್ಣ, ಕುಳ್ಳಪ್ಪ, ಗಿರಿಶ್, ಭಾಗ್ಯಮ್ಮ, ನೀಲಾವತಿ, ವೀರಭದ್ರೇಗೌಡ,ಭರತ್ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.