National Highway 75: ಅವೈಜ್ಞಾನಿಕ ರಾ.ಹೆ.75 ಚತುಷ್ಪಥ ರಸ್ತೆ ಕಾಮಗಾರಿ!
Team Udayavani, Nov 21, 2023, 1:21 PM IST
ಸಕಲೇಶಪುರ: ಸರಿಯಾದ ಯೋಜನೆ ರೂಪಿಸದೇ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಕಾಮಗಾರಿ ಕಾರ್ಯ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ರಾಷ್ಟ್ರೀಯ ಹೆದಾರಿ 75 ಹಾಸನ-ಸಕಲೇಶಪುರ-ವರನಹಳ್ಳಿ ನಡುವಿನ ಚತುಷ್ಪಥ ರಸ್ತೆ ಕಾಮಗಾರಿ ಕಳೆದ 7 ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿ ರುವು ದು ಮಾತ್ರವಲ್ಲದೇ, ಸಂಪೂರ್ಣ ಅವೈ ಜ್ಞಾನಿಕವಾಗಿ ಕಾಮಗಾರಿ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ.
ಹಾಸನದಿಂದ ಸಕಲೇಶಪುರ ನಡುವಿನ ಸುಮಾರು 40 ಕಿ.ಮೀ. ದೂರದ ಕಾಮಗಾರಿ ಬಹುತೇಕವಾಗಿ ಮುಕ್ತಾಯಗೊಂಡಿದ್ದು, ಜ.2 ನೇ ವಾರದ ಹೊತ್ತಿಗೆ ರಸ್ತೆ ಉದ್ಘಾಟನೆ ಮಾಡಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ಅವೈಜ್ಞಾನಿಕ, ದೂರದೃಷ್ಟಿಯಿಲ್ಲದ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಯಾವುದೆ ರೀತಿಯ ದೂರದೃಷ್ಟಿಯಿಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ. ಹಲವೆಡೆ ಅಂಡರ್‌ಪಾಸ್‌ಗಳು, ಮೇಲ್ಸೇ ತುವೆ, ಡಿವೈಡರ್‌ಗಳನ್ನು ತೆರೆಯಬೇಕಾಗಿದ್ದು, ಆದರೆ ಮಾಡದಿರುವುದರಿಂದ ಸಾವಿರಾರು ಜನರಿಗೆ ತೊಂದರೆಯಾಗಿದೆ.
ನಿರ್ಮಾಣವಾಗದ ತಡೆಗೋಡೆ, ಕುಸಿಯುವ ಆತಂಕ: ಕೊಲ್ಲಹಳ್ಳಿ ಸಮೀಪ ಮೇಲ್ಸೇತುವೆ ಕಾಮಗಾರಿ ಮಾಡಲಾಗುತ್ತಿದ್ದು, ಆದರೆ ಇದರ ಕೆಳಗೆ ನಿರ್ಮಾಣವಾಗಿರುವ ರಸ್ತೆ ಬದಿಯಲ್ಲಿ ಯಾವುದೇ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿಲ್ಲ. ಇದರಿಂದ ಮಳೆ ಜಾಸ್ತಿಯಾದ ಸಂದರ್ಭದಲ್ಲಿ ಭೂಕುಸಿತವಾಗಿ ರಸ್ತೆ ಕುಸಿಯುವ ಸಾಧ್ಯತೆಯಿದೆ. ಇನ್ನು ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಸುಮಾರು 16 ಕಿ.ಮೀ. ಅಂತರದಲ್ಲಿ ಬಹುತೇಕವಾಗಿ ಬೆಟ್ಟ ಗುಡ್ಡಗಳೇ ಇದ್ದು, ಇಲ್ಲಿ ಯಾವುದೇ ತಡೆ ಗೋಡೆಗಳನ್ನು ನಿರ್ಮಾಣ ಮಾಡದೆ ಕಾಮಗಾರಿ ಮಾಡ ಲಾಗುತ್ತಿದೆ. ಈ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿರು ವುದರಿಂದ ಯಾವುದೇ ಸಂದರ್ಭದಲ್ಲಿ ಭೂಕುಸಿತವಾಗುವ ಸಾಧ್ಯತೆಯಿದ್ದು, ಈ ಭಾಗದಲ್ಲಿ ಕಾಮ ಗಾರಿ ಮುಗಿಸಲು ಗುತ್ತಿಗೆದಾರರು ಇನ್ನು ಕೆಲ ವರ್ಷ ತೆಗೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಕಳಪೆ ಕಾಮಗಾರಿ ಆರೋಪ: ಈಗಾಗಲೇ ಬಾಗೆ ಸಮೀಪ, ಬಾಳ್ಳುಪೇಟೆ ಬೈಪಾಸ್ ಸಮೀಪ ರಸ್ತೆ ಕುಸಿದಿದ್ದು ಪುನರ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಅಲ್ಲಲ್ಲಿ ರಸ್ತೆಗಳು ಗುಂಡಿ ಬಿದ್ದಿರುವ ಉದಾಹರಣೆ ಸಹ ಇದೆ. ಈ ರಸ್ತೆ ಯಲ್ಲಿ ಇದೀಗ ತಿರುಗಾಡುತ್ತಿರುವ ವಾಹನ ಸವಾರರು ಈ ರಸ್ತೆಯ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಲವೆಡೆ ಸಂಚಾರಕ್ಕೆ ಸಮಸ್ಯೆ: ತಾಲೂಕಿನ ಬಾಳ್ಳುಪೇಟೆ ಸಮೀಪ ಅಬ್ಬನ ಕಡೆ ಹೋಗಲು ಹೆದ್ದಾರಿಯಲ್ಲಿ ಯಾವುದೇ ಅವಕಾಶ ಕೊಡದ ಕಾರಣ ವಾಹನ ಸವಾರರು ಸುಮಾರು ನಾಲ್ಕೈದು ಕಿ.ಮೀ. ದೂರ ಸುತ್ತುಕೊಂಡು ಅಬ್ಬನ ಕಡೆಗೆ ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಾಹನಗಳು ಸಂಚರಿಸಲು ಡಿವೈಡರ್ ತೆರೆಯಬೇಕಾಗಿದೆ. ಇದಲ್ಲದೇ ಬೈಪಾಸ್ ರಸ್ತೆಯಲ್ಲಿ ಮಳಲಿ ಗ್ರಾಮಕ್ಕೆ ಪಟ್ಟಣದಿಂದ ಹೋಗಲು ಯಾವುದೇ ಅಂಡರ್‌ಪಾಸ್ ಅಥವಾ ಕಿರು ಮೇಲ್ಸೇತುವೆ ಮಾಡದಿರುವುದರಿಂದ ಈ ಭಾಗದಲ್ಲಿರುವರಿಗೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಕೌಡಹಳ್ಳಿ ಹಾಗೂ ಪಟ್ಟಣ ಸಂಪರ್ಕಿಸುವ ರಸ್ತೆ ಮಧ್ಯೆ ಹೆದ್ದಾರಿ ಹಾದು ಹೋಗಿದ್ದು, ಇಲ್ಲೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇನ್ನು ಆನೆಮಹಲ್ ಸಮೀಪ ಹಾನುಬಾಳ್ ಮೂಡಿಗೆರೆ ರಾಜ್ಯ ಹೆದ್ದಾರಿಗೆ ವಾಹನಗಳು ಹೋಗಲು ಯಾವುದೇ ಯೋಜನೆಯನ್ನು ರೂಪಿಸಲಾಗಿರುವುದಿಲ್ಲ. ಇದರಿಂದ ಈ ಭಾಗದಲ್ಲಿ ದಿನನಿತ್ಯ ತಿರುಗಾಡುವ ವಾಹನ ಸವಾರರಿಗೆ ಮುಂದೇನೆಂಬ ಚಿಂತೆ ಉಂಟಾಗಿದೆ.
ಹಾಸನದಿಂದ ಸಕಲೇಶಪು ರದವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಬಹು ತೇಕವಾಗಿ ಮುಕ್ತಾಯ ಗೊಂಡಿದ್ದು, ಜನವರಿ 2ನೇ ವಾರದೊಳಗೆ ರಸ್ತೆ ಉದ್ಘಾಟನೆಯಾಗಲಿದೆ. ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಈ ಲೋಪ ದೋಷಗಳನ್ನು ಪರಿಹರಿಸುವಂತೆ ಗುತ್ತಿಗೆದಾರರಿಗೆ ಆದೇಶಿಸಲಾಗಿದೆ. ● ಪ್ರಜ್ವಲ್ ರೇವಣ್ಣ, ಸಂಸದರು
ಕೆಲವು ಕಡೆ ಅಂಡರ್ ಪಾಸ್, ಡಿವೈಡರ್ ತೆರವು ಹಾಗೂ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಗುತ್ತಿಗೆ ದಾರರಿಗೆ ಮನವಿ ಮಾಡ ಲಾಗಿದೆ. ಕಳಪೆ ಕಾಮಗಾರಿ ಕುರಿತು ಕೇಂದ್ರ ಲೋಕೋಪಯೋಗಿ ಸಚಿವರ ಗಮನಕ್ಕೆ ತರಲಾಗಿದೆ. ● ಸಿಮೆಂಟ್ ಮಂಜು, ಶಾಸಕರು
ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಯಲ್ಲಿನ ಲೋಪ ದೋಷಗಳ ಕುರಿತು ಈಗಾ ಗಲೇ ಸಂಸದರು ಹಾಗೂ ಶಾಸಕರ ಗಮ ನಕ್ಕೆ ತರಲಾಗಿದೆ. ಕಾಮಗಾರಿಯಲ್ಲಿನ ಲೋಪ ದೋಷಗಳನ್ನು ನಿವಾರಣೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ● ದಿನೇಶ್, ಕರವೇ ನಾರಾಯಣಗೌಡ ಬಣ ತಾ. ಅಧ್ಯಕ್ಷರು
– ಸುಧೀರ್ ಎಸ್.ಎಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.