National Highway 75: ಹದಗೆಟ್ಟ 11 ಕಿ.ಮೀ. ಮರು ಡಾಂಬರೀಕರಣ ರಸ್ತೆ


Team Udayavani, Oct 30, 2023, 3:05 PM IST

tdy-5

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ಆನೆಮಹಲ್‌ ನಿಂದ ಮಾರನಹಳ್ಳಿವರೆಗೆ ಮರು ಡಾಂಬರೀಕರಣ ಮಾಡಿದ 11 ಕಿ.ಮೀ. ರಸ್ತೆ ಕಳಪೆ ಕಾಮಗಾರಿಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ಆದರೂ ಸಹ ಗುತ್ತಿಗೆದಾರರ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ.

ಸಂಚಾರ ಸಾಹಸ ಮಯ: ಹೌದು, ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಸನದ ದೇವರಾಯಪಟ್ಟಣದ 189.700 ಕಿ. ಮೀ.ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆಯ 263 ಕಿ.ಮೀ.. ನುಡುವಿನ 73ಕಿ.ಮೀ. ಸಂಚಾರ ಸಾಹಸ ಮಯವಾಗಿದೆ.

ಕಾಮಗಾರಿ ಮುಗಿಯುವ ಮುನ್ನವೇ ಗುಂಡಿಗಳು: ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಹಾಸನದ ದೇವರಾಯಪಟ್ಟಣದಿಂದ ಸಕಲೇಶಪುರ ತಾಲೂಕಿನ ಮಾರನಹಳ್ಳಿವರೆಗಿನ ಚತುಷ್ಪಥ ಕಾಮಗಾರಿ ಸಂಪೂರ್ಣ ಕಳಪೆ ಎಂಬುದು ಈಗಾಗಲೇ ಜಗ್ಗಜಾಹೀರಾಗಿದೆ. ಈಗಾಗಲೇ ಬಹುತೇಕ ಕಾಮಗಾರಿ ಮುಗಿದಿರುವ ಹಾಸನದಿಂದ ಸಕಲೇಶಪುರ ನಡುವಿನ 36 ಕಿ.ಮೀ. ರಸ್ತೆಯ ಕಾಂಕ್ರೀಟಿಕರಣ ಸಮತಟ್ಟಾಗಿಲ್ಲ. ಅಲ್ಲದೇ ಕಾಮಗಾರಿ ಸಂಪೂರ್ಣ ಮುಗಿಯುವ ಮುನ್ನವೇ ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗಿವೆ.

ಹಲವೆಡೆ ಏಕಮುಖ ಸಂಚಾರ: ಸಮತಟ್ಟಲ್ಲದ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂಬೆಲ್ಲ ಹಲವು ದೂರು ವಾಹನ ಸವಾರರಿಂದ ನಿತ್ಯ ಕೇಳಿ ಬರುತ್ತಿದ್ದು, ಅಲ್ಲಲ್ಲಿ ಇನ್ನೂ ಸಣ್ಣಪುಟ್ಟ ಕಾಮಗಾರಿಗಳು ನಡೆಯುತ್ತಿರುವ ಕಾರಣ ಏಕಮುಖ ಸಂಚಾರ ಹಲವೆಡೆ ಇದ್ದು, ಅಪಘಾತಗಳಿಗೂ ಕಾರಣವಾಗು ತ್ತಿದೆ. ಪ್ರಸಕ್ತ ವರ್ಷ ಅತೀ ಕಡಿಮೆ ಮಳೆಯಾಗಿದ್ದು, ಸಕಲೇಶಪುರ ತಾಲೂಕಿನ ಮಠಸಾಗರ, ಕೊಲ್ಲಹಳ್ಳಿ, ರಾಟೇಮನೆ, ಬಾಗೆ ಗ್ರಾಮ ಸಮೀ.ಪದ ಹೆದ್ದಾರಿ ಕುಸಿದಿದೆ. ತಾಲೂಕಿನ ಕೊಲ್ಲಹಳ್ಳಿ ಗ್ರಾಮ ಸಮೀ.ಪದ ಸುಬ್ಬು ಎಸ್ಟೇಟ್‌ ಸಮೀ.ಪ ನಿರ್ಮಾಣ ಮಾಡಿರುವ ಕಾಂಕ್ರೀಟ್‌ ರಸ್ತೆ ಇಬ್ಟಾಗವಾಗಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಸಾಧ್ಯತೆ ಹೆಚ್ಚಿದ್ದು, ಪರ್ಯಾಯ ಮಾರ್ಗಕ್ಕೆ ಈಗಲೇ ರಸ್ತೆ ಆಯ್ಕೆ ಮಾಡಿಕೊಳ್ಳುವ ಅಗತ್ಯತೆ ಇದೆ. ಅಲ್ಲದೇ ಹಾಲೇಬೇಲೂರು ಸಮೀ.ಪ ಅಂಡರ್‌ಪಾಸ್‌ ಸಹ ಕಳಪೆ ಕಾಮಗಾರಿಯಾಗಿದೆ.

ಬಾಯ್ತೆರೆದ ಭಾರೀ ಹೊಂಡಗಳು:

ಚತುಷ್ಪಥ ಕಾಮಗಾರಿ ಆರಂಭವಾದ ಆನೇಮಹಲ್‌ ಗ್ರಾಮದ 236 ರಿಂದ ಮಾರನಹಳ್ಳಿ 247 ಕಿ.ಮೀ. ನಡುವಿನ 11 ಕಿ.ಮೀ. ರಸ್ತೆ ತೀರ ಹದಗೆಟ್ಟ ಕಾರಣದಿಂದ 11 ಕಿ.ಮೀ. ರಸ್ತೆಯನ್ನು 15 ಕೋಟಿ ವೆಚ್ಚದಲ್ಲಿ ಕಳೆದ ಐದಾರು ತಿಂಗಳ ಹಿಂದೆ ಹೊಂಡ ಮುಚ್ಚಿ ಡಾಂಬರೀಕರಣ ನಡೆಸಲಾಗಿದೆ. ಆದರೆ, ತಾಲೂಕಿನಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಗೆ 15 ಕೋಟಿ ರೂ. ಕಾಮಗಾರಿ ಸಂಪೂರ್ಣ ತೊಳೆದು ಹೋಗಿದ್ದು, ಸದ್ಯ 11 ಕಿ.ಮೀ. ರಸ್ತೆಯನ್ನು ಕ್ರಮಿಸಲು ಗಂಟೆಗಳ ಕಾಲ ಹಿಡಿಯುತ್ತಿದ್ದು, ಭಾರೀ ಹೊಂಡಗಳು ಮತ್ತೆ ಬಾಯ್ದೆರೆದಿವೆ.

ಸೇತುವೆಯ ಅಸ್ತಿತ್ವಕ್ಕೆ ಧಕ್ಕೆ: ಹೆದ್ದಾರಿಯಲ್ಲಿ ಎದುರಾಗುವ ಎತ್ತಿನಹಳ್ಳ ಸೇತುವೆಯ ಮೇಲ್ಮೆ„ಯಲ್ಲಿ ಸೃಷ್ಟಿಯಾಗಿರುವ ಹೊಂಡಗಳು ಸೇತುವೆಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದು, ಸೇತುವೆ ಮೇಲಿನ ಹೊಂಡದಲ್ಲಿ ಸಿಲುಕಿ ಹಲವು ವಾಹನಗಳು ದುರಸ್ತಿತಿಗೆ ಈಡಾಗುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ.

ರಾ.ಹೆ.75 ಕುಂಟುತ್ತಾ ಸಾಗುತ್ತಿರುವ ಕಾಮಗಾರಿ: 2015ಕ್ಕೂ ಮುನ್ನ ಶಿರಾಡಿಘಾಟಿನಲ್ಲಿದ್ದ ಡಾಂಬರ್‌ ರಸ್ತೆಯಲ್ಲಿ ಬಾರೀ ಹೊಂಡಗಳು ಸೃಷ್ಟಿಯಾಗುತ್ತಿದ್ದ ಪರಿಣಾಮ ಹೆದ್ದಾರಿ ಕಾಮಗಾರಿ ಸಂಚಾರ ಅಸಾಧ್ಯ ಎಂಬ ಕಾರಣಕ್ಕೆ ಹಲವು ಪ್ರತಿಭಟನೆಗಳು ನಡೆದ ನಂತರ ಸರ್ಕಾರ 237 ರಿಂದ 263 ರ ನಡುವಿನ 26 ಕಿ.ಮೀ.ಹೆದ್ದಾರಿಯನ್ನು 2014 ರಿಂದ 2018 ರವರಗೆ ಕಾಂಕ್ರಿಟೀಕರಣ ನಡೆಸಲಾಗಿದೆ. 2023 ರ ಆಗಸ್ಟ್‌ ತಿಂಗಳವರಗೆ ಗುತ್ತಿಗೆದಾರರು ರಸ್ತೆ ನಿರ್ವಹಣೆಯ ಮಾಡಬೇಕಾಗಿತ್ತು. ಸದ್ಯ ಗುತ್ತಿಗೆದಾರರ ಹೆದ್ದಾರಿ ನಿರ್ವಹಣೆಯ ಅವಧಿ ಮುಗಿದಿದ್ದು, ನಿರ್ವಹಣೆ ಅವಧಿ ಮುಗಿದ ಒಂದೇ ತಿಂಗಳಿನಲ್ಲಿ ಉತ್ತಮವಾಗಿರುವ ಕಾಂಕ್ರಿಟ್‌ ರಸ್ತೆ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ವೇಗವಾಗಿ ಬರುವ ವಾಹನಗಳು ಗುಂಡಿಗಳಿಗೆ ಬೀಳುವಂತಾಗಿದೆ.

ವಾಹನ ಸವಾರರಿಗೆ ಅಡಚಣೆ: ಈ 11 ಕಿ.ಮೀ. ರಸ್ತೆ ವಾಹನ ಸವಾರರ ಪಾಲಿಗೆ ನರಕವಾಗಿದೆ. ಮಳೆ ಬಂದರೆ ರಸ್ತೆಯಲ್ಲಿ ಬಾಯಿ ತೆರೆದಿರುವ ಗುಂಡಿಗಳಲ್ಲಿ ನೀರು ನಿಂತು ಸವಾರರು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಮಳೆ ನಿಂತಿರುವುದರಿಂದ ರಸ್ತೆ ಕಿತ್ತು ಹೋಗಿ ವಿಪರೀತ ಧೂಳು ಬರುತ್ತಿದ್ದು, ವಾಹನ ಸವಾರರಿಗೆ ಧೂಳಿನ ಪ್ರೋಕ್ಷಣೆಯಾಗುತ್ತಿದೆ.

ತೆರಿಗೆ ಹಣ ಪೋಲು: 15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಿರುವ ಆಂಧ್ರಪ್ರದೇಶ ಮೂಲದ ಕಂಪನಿ ಹಾಗೂ ಕಾಮಗಾರಿ ಉಸ್ತುವಾರಿ ವಹಿಸಿದ್ದ ಇಂಜಿನಿಯರ್‌ ಮೇಲೆ ಇದುವರಗೆ ಯಾವುದೇ ಕ್ರಮ ಜರುಗಿಲ್ಲ. ಕಾಮಗಾರಿ ಉಸ್ತುವಾರಿ ಹೊಣೆ ಹೊತ್ತಿದ್ದ ಇಂಜಿನಿಯರ್‌ ಹುದ್ದೆಯನ್ನೇ ಬಿಟ್ಟು ಹೋಗಿದ್ದಾರೆ ಎಂದು ಇಲಾಖೆ ಹೇಳುತ್ತಿದ್ದು, ಕಳಪೆ ಕಾಮಗಾರಿ ಬಗ್ಗೆ ಮಾತನಾಡಲು ಯಾವುದೇ ಅಧಿಕಾರಿಗಳು ಸಿದ್ಧರಿಲ್ಲದ ಪರಿಣಾಮ ಜನರ ತೆರಿಗೆ ಹಣ ಅನಾವಶ್ಯಕವಾಗಿ ಪೋಲಾಗಿದೆ.

ರಸ್ತೆ ಕಳಪೆ ಕಾಮಗಾರಿ ಕುರಿತು ತನಿಖೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಕೊಲ್ಲಹಳ್ಳಿಯಿಂದ ಪಟ್ಟಣ ಮಾರ್ಗವಾಗಿ ಮಾರನಹಳ್ಳಿವರೆಗೆ ಮತೊಮ್ಮೆ ಮರು ಡಾಂಬರೀಕರಣ ಮಾಡಬೇಕು. – ಸಿಮೆಂಟ್‌ ಮಂಜು, ಶಾಸಕರು

15 ಕೋಟಿ ರೂ. ವೆಚ್ಚದಲ್ಲಿ ನಡೆದ ಡಾಂಬರೀಕರಣ ಕಾಮಗಾರಿ ಕೇವಲ ಮೂರು ತಿಂಗಳಲ್ಲಿ ಕಿತ್ತು ಹೋಗಿರುವುದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಹಾಗೂ ಇಂಜಿನಿಯರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಾಗುವುದು. – ಸಂಜೀತ್‌ ಶೆಟ್ಟಿ, ಅಧ್ಯಕ್ಷರು, ಶಿರಾಡಿ ಉಳಿಸಿ ಹೋರಾಟ ಸಮಿತಿ

ಮರು ಡಾಂಬರೀಕರಣ ಮಾಡಿರುವ ರಸ್ತೆ ಕೆಲವೇ ತಿಂಗಳಿಗೆ ಕಿತ್ತು ಬಂದಿರುವುದು ಬೇಸರದ ಸಂಗತಿಯಾಗಿದೆ. ಮರು ಡಾಂಬರೀಕರಣ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದರೂ ಯಾವುದೇ ಕ್ರಮವನ್ನು ಕೇಂದ್ರ ಲೋಕೋಪಯೋಗಿ ಸಚಿವರು ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. – ಯಡೇಹಳ್ಳಿ ಮಂಜುನಾಥ್‌, ಕೆಪಿಸಿಸಿ ಸದಸ್ಯರು

-ಸುಧೀರ್‌ ಎಸ್‌.ಎಲ್‌.

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.