ಸಗಟು ತರಕಾರಿ ವ್ಯಾಪಾರಕ್ಕೆ ನೂತನ ಮಾರುಕಟ್ಟೆ
ಎಪಿಎಂಸಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ವಿನೂತನ ಹರಾಜು ಕಟ್ಟೆ • 56 ಮಳಿಗೆಗಳ ನಿರ್ಮಾಣ
Team Udayavani, Aug 2, 2019, 11:57 AM IST
ಹಾಸನದ ಎಪಿಎಂಸಿ ಆವರಣದಲ್ಲಿ ಸುಸಜ್ಜಿತ, ವಿನೂತನ ಮಾದರಿಯ ತರಕಾರಿ ಸಗಟು ಮಾರುಕಟ್ಟೆ ನಿರ್ಮಾಣವಾಗಿದೆ.
ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ವಿನೂತನ ಮಾದರಿಯ ಸಗಟು ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ತರಕಾರಿ ಹರಾಜು ಕಟ್ಟೆ ಹಾಗೂ 56 ಮಳಿಗೆಗಳು ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿವೆ.
ಎಪಿಎಂಸಿ ಆವರಣದಲ್ಲಿ ಮುಂಜಾನೆ ತರಕಾರಿಯ ಸಗಟು ಮಾರಾಟ ನಡೆಯುತ್ತದೆ. ಗ್ರಾಮಾಂತರ ಪ್ರದೇಶದಿಂದ ರೈತರು ಮುಂಜಾನೆ 4 ಗಂಟೆಗೆ ತಂದಿರಿಸಿಕೊಂಡ ಸೊಪ್ಪು, ತರಕಾರಿಗಳನ್ನು ವರ್ತಕರು ಸಗಟಾಗಿ ಖರೀದಿಸಿ ಆನಂತರ ತಮ್ಮ ಅಂಗಡಿಗಳಿಗೆ ಚಿಲ್ಲರೆ ಮಾರಾಟಕ್ಕೆ ಕೊಂಡೊಯ್ಯುತ್ತಾರೆ. ಆದರೆ ಇದುವರೆಗೂ ಶಿಥಿಲವಾಗಿದ್ದ ಒಂದೆರೆಡು ಪ್ರಾಂಗಣದಲ್ಲಿ ರೈತರು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಕಿರಿದಾದ ಪ್ರದೇಶವಾಗಿದ್ದರಿಂದ ಬಹುಪಾಲು ರೈತರು ಪ್ರಾಂಗಣದ ಮುಂದೆ ಬಯಲು ಪ್ರದೇಶದಲ್ಲಿಯೇ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಮಳೆಗಾಲದಂತೂ ಕೊಚ್ಚೆಯಲ್ಲಿಯೇ ವ್ಯಾಪಾರ ನಡೆಯುತ್ತಿತ್ತು. ಅಲ್ಲಿಂದ ವರ್ತಕರು ಖರೀದಿಸಿ ಪ್ರಾಂಗಣಕ್ಕೆ ಕೊಂಡೊಯ್ದು ದಾಸ್ತಾನು ಮಾಡಿಕೊಂಡು ಆನಂತರ ಕಟ್ಟಿನಕೆರೆ ಮಾರುಕಟ್ಟೆ ಸೇರಿದಂತೆ ನಗರದ ವಿವಿಧೆಡೆಗೆ ಚಿಲ್ಲರೆ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದರು.
ಬಾಡಿಗೆಗೆ ಮಳಿಗೆಗಳು: ರೈತರ ಸಂಕಷ್ಟ ಅರಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಆಧುನಿಕ ಮಾದರಿಯ, ಸುಸಜ್ಜಿತ ತರಕಾರಿ ಸಗಟು ಮಾರುಕಟ್ಟೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ಬೃಹತ್ತಾದ ಹರಾಜು ಮಾರುಕಟ್ಟೆ, ಅದರ ಸುತ್ತಲೂ 56 ಮಹಿಳೆಗಳನ್ನು ನಿರ್ಮಿಸಿದೆ. ಹರಾಜು ಮಾರುಕಟ್ಟೆಯಲ್ಲಿ ಗ್ರಾಮೀಣ ಪ್ರದೇಶದಿಂದ ರೈತರು ತರಕಾರಿಯನ್ನು ತಂದಿಟ್ಟುಕೊಂಡು ಮಾರಾಟ ಮಾಡಬಹುದು. ಹರಾಜು ಕಟ್ಟೆಯೊಳಗೇ ವಾಹನಗಳು ಹೋಗಿ ತರಕಾರಿ ಇಳಿಸಬಹುದು. ರೈತರಿಂದ ಖರೀದಿಸಿದ ನಂತರ ವರ್ತಕರು ಮಳಿಗೆಗಳಲ್ಲಿ ತರಕಾರಿಯನ್ನು ದಾಸ್ತಾನು ಮಾಡಿಕೊಳ್ಳಬಹುದು. ರೈತರು ಹರಾಜು ಕಟ್ಟೆಯಲ್ಲಿ ಉಚಿತವಾಗಿ ಮಾರಾಟ ಮಾಡಬಹುದು. ಮಳಿಗೆಗಳನ್ನು ಮಾತ್ರ ವರ್ತಕರಿಗೆ ಬಾಡಿಗೆಗೆ ಎಪಿಎಂಸಿ ನೀಡಲಿದೆ.
ಹಾಪ್‌ಕಾಮ್ಸ್ ಸ್ಥಗಿತ: ಈಗ ವಿನೂತನ ಮಾದರಿಯ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಿರುವ 2 ಎಕರೆ ಪ್ರದೇಶವನ್ನು ಎಪಿಎಂಸಿ 1994 ರಲ್ಲಿ ಹಾಪ್‌ಕಾಮ್ಸ್‌ಗೆ ನೀಡಿತ್ತು. ಒಂದೆರೆಡು ವರ್ಷ ತರಕಾರಿ ಖರೀದಿ ತನ್ನ ಮಳಿಗೆಗಳ ಮೂಲಕ ಮಾರಾಟ ಮಾಡುವ ಚಟುವಟಿಕೆ ನಡೆಸಿದ್ದ ಹಾಪ್‌ಕಾಮ್ಸ್ ಆನಂತರ ಸ್ಥಗಿತಗೊಳಿಸಿತ್ತು. ಹಾಗಾಗಿ ಖಾರಿ ಬಿದ್ದಿದ್ದ ಜಾಗದಲ್ಲಿ ಈಗ ತರಕಾರಿ ಮಾರುಕಟ್ಟೆ ಕೇಂದ್ರ ಹಾಗೂ 56 ಮಳಿಗೆಗಳನ್ನು ಎಪಿಎಂಸಿ ನಿರ್ಮಿಸಿದೆ.
ಗೊರೂರು ರಸ್ತೆ ಕಡೆಯಿಂದ ಪ್ರವೇಶದ್ವಾರ: ಈಗ ಎಪಿಎಂಸಿಗೆ ಬಿ.ಎಂ.ರಸ್ತೆ ಕಡೆಯಿಂದ ಮಾತ್ರ ನೇರ ಪ್ರವೇಶ ದ್ವಾರವಿದೆ. ಈಗ ಗೊರೂರು ರಸ್ತೆ ಕಡೆಯಿಂದಲೂ ಪ್ರವೇಶದ್ವಾರವನ್ನು ನಿರ್ಮಿಸಲಾಗುತ್ತಿದೆ. ಈ ಪ್ರವೇಶ ದ್ವಾರ ತೆರೆದರೆ ರೈತರು ಮತ್ತು ವರ್ತಕರಿಗೆ ತರಕಾರಿ ಮಾರುಕಟ್ಟೆಗೆ ನೇರ ಮಾರ್ಗ ಸಿಕಿದಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.