ವಿಧಾನಸಭೆಗೆ ಅವಧಿ ಪೂರ್ವ ಚುನಾವಣೆ ಇಲ್ಲ: ಸಿದ್ದರಾಮಯ್ಯ
Team Udayavani, Jun 26, 2017, 3:45 AM IST
ಹಾಸನ: ರಾಜ್ಯ ವಿಧಾನಸಭೆಗೆ ಅವಧಿ ಪೂರ್ವ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಅವಧಿ ಪೂರ್ವ ಚುನಾವಣೆಗಳ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಆಗಮಿಸಿದ ಅವರು, ಸುದ್ದಿಗಾರರ ಜೊತೆ ಮಾತನಾಡಿದರು. ವಿಧಾನಸಭೆಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುತ್ತದೆ ಎಂದು ಬಿಜೆಪಿಯವರು ಗೊಂದಲ ಸೃಷ್ಟಿಸುತ್ತಿದ್ದಾರೆ ಅಷ್ಟೆ. ಆದರೆ, ಸರ್ಕಾರದ ಅಧಿಕಾರಾವಧಿ 5 ವರ್ಷ ಪೂರ್ಣವಾಗುವ ಏಪ್ರಿಲ್ ಅಥವಾ ಮೇನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣೆ ನಡೆಯಲಿದೆ. ಅವಧಿ ಪೂರ್ವ ಚುನಾವಣೆಗೆ ಹೋಗಲು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂಬ ಗುಂಗಿನಲ್ಲಿ ಬಿಜೆಪಿಯ ಯಡಿಯೂರಪ್ಪ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್‌ಗೆ 5 ವರ್ಷ ಸರ್ಕಾರ ನಡೆಸಲು ಆದೇಶ ಕೊಟ್ಟಿದ್ದಾರೆ. ಅದರಂತೆ 5 ವರ್ಷ ಅಧಿಕಾರ ಪೂರೈಸುತ್ತೇವೆ. ಚುನಾವಣೆ ವೇಳೆ ಜನರಿಗೆ ಕೊಟ್ಟ ಭರವಸೆಗಳೆಲ್ಲವನ್ನೂ ಈಡೇರಿಸುತ್ತೇವೆ ಎಂದರು.
ಅಮಿತ್ ಶಾ ವಿರುದ್ಧ ವಾಗ್ಧಾಳಿ :
ಬಳಿಕ ಗಾಂಧಿ ಭವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಸಿದ್ದು, ಕಳೆದ ಬಜೆಟ್‌ನಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಗಾಂಧಿ ಭವನ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದೆ. ಅದರಂತೆ ಗಾಂಧಿ ಭವನಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ ಎಂದರು. ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್‌ಶಾ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ, “ಗಾಂಧೀಜಿ ಚತುರ ಬನಿಯಾ ಅಷ್ಟೇ’ ಎನ್ನುವ ಮೂಲಕ ಅಮಿತ್ ಶಾ ಅವರು ಗಾಂಧೀಜಿ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಆದರೆ, ಗಾಂಧೀಜಿಯವರ ನಾಯಕತ್ವದಲ್ಲಿಯೇ ಭಾರತ ಸ್ವತಂತ್ರ್ಯವಾಗಿದ್ದು ಎಂಬ ಕನಿಷ್ಠ ಜ್ಞಾನವೂ ಅಮಿತ್ ಶಾಗೆ ಇಲ್ಲ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಬಿಜೆಪಿಯವರು ಈಗ “ನಮ್ಮ ನಡಿಗೆ ದಲಿತರ ಮನೆ ಕಡೆಗೆ’ ಎಂದು ಹೊರಟಿದ್ದಾರೆ. ದಲಿತರ ಮನೆಗೆ ಹೋಗಿ ಹೋಟೆಲ್‌ನಿಂದ ತಿಂಡಿ ತರಿಸಿಕೊಂಡು ತಿಂದರೆ ಜಾತಿ ವ್ಯವಸ್ಥೆ ತೊಲಗುವುದಿಲ್ಲ. ದಲಿತರ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಅಂತರ್ಜಾತಿ ವಿವಾಹ ಮಾಡಿಕೊಂಡು ಜಾತ್ಯತೀತತೆ ಪ್ರದರ್ಶಿಸಲಿ, ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬಿಜೆಪಿಯವರಿಗೆ ದಲಿತರ ಸಮಸ್ಯೆಗಳು ಗೊತ್ತಿಲ್ಲ. ಹಾಗಾಗಿ, ಈಗ ದಲಿತರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಹೋಗುತ್ತಿದ್ದಾರೆ. ಅವರದು ನಾಟಕ ಅಷ್ಟೇ. ಅಂತರ್ಜಾತಿ ವಿವಾಹಗಳಾದಾಗ ಮಾತ್ರ ಜಾತಿ ವ್ಯವಸ್ಥೆ ತೊಲಗುತ್ತದೆ ಎಂದು 12ನೇ ಶತಮಾನದಲ್ಲಿಯೇ ಬಸವಣ್ಣನವರು ಹೇಳಿ ಹೋರಾಟ ಮಾಡಿದ್ದರು ಎಂದು ಸಿಎಂ ಹೇಳಿದರು.
ಸಾಲ ಮನ್ನಾ ದಿಂದ ರೈತರ ಎಲ್ಲಾ ಸಮಸ್ಯೆಗಳೂ ಬಗೆಹರಿಯುವುದಿಲ್ಲ. ರೈತರ ಸಮಸ್ಯೆಗಳು ಶಾಶ್ವತವಾಗಿ ಬಗೆಹರಿಯಬೇಕಾದರೆ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬೇಕು. ಡಾ.ಸ್ವಾಮಿನಾಥನ್ ಅವರ ಸಲಹೆಯಂತೆ ರೈತರು ಬೆಳೆದ ಬೆಳೆಗೆ ಈಗಿನ ಮಾರುಕಟ್ಟೆ ಬೆಲೆಗಿಂತ ಶೇ.50ರಷ್ಟು ಮೌಲ್ಯ ನಿರ್ಧಾರ ಆಗಬೇಕು. ಈ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಆದರೆ, ಪ್ರಧಾನಿ ಮೋದಿ ಅವರು ಈ ಬಗ್ಗೆ ತುಟಿ ಬಿಚ್ಚುವುದಿಲ್ಲ.ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ
ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ
Honnali: ಮಹಿಳೆಯನ್ನು ತವರಿನಿಂದ ಒತ್ತಾಯಪೂರ್ವಕವಾಗಿ ಕರೆದುಕೊಂಡ ಹೋದ ಪತಿ, ಸಂಬಂಧಿಕರು
Congress Government: ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು?: ಆರ್.ಬಿ.ತಿಮ್ಮಾಪುರ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.