ತೈಲ ಬೆಲೆ ಏರಿಕೆ ಖಂಡಿಸಿ ಕೈ ಪ್ರತಿಭಟನೆ
Team Udayavani, Jun 12, 2021, 6:43 PM IST
ಹಾಸನ: ಪೆಟ್ರೋಲ್ ಮತ್ತು ಡಿಸೇಲ್‌ದರ ಏರಿಕೆ ಖಂಡಿಸಿ ಕಾಂಗ್ರೆಸ್‌ಕಾರ್ಯಕರ್ತರು ಹಾಸನದಲ್ಲಿ ವಿವಿಧಪೆಟ್ರೋಲ್ ಬಂಕ್‌ಗಳ ಎದುರುಪ್ರತಿಭಟನೆ ನಡೆಸಿದರು.ನಗರದ ಡೇರಿ ವೃತ್ತ, ಬಿ.ಎಂ.ರಸ್ತೆಯ ಕೆಂಚಾಂಬ ಪೆಟ್ರೋಲ್ ಬಂಕ್‌ಗಳಎದರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ-ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಸರ್ಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿವೆ. ರೈತರು ಹಾಗೂ ಜನಸಾಮಾನ್ಯರನ್ನು ಬೀದಿಗೆ ತಳ್ಳಿವೆ ಎಂದುಆರೋಪಿಸಿದರು.
ಅಭಿವೃದ್ಧಿ ಕಡೆಗಣನೆ: ಕಳೆದೊಂದುವರ್ಷದಿಂದ ಜನ ಕೊರೊನಾಸೋಂಕಿನಿಂದ ಸಂಕಷ್ಟಅನುಭವಿಸುತ್ತಿದ್ದರೂ ಪೆಟ್ರೋಲ್‌ಮತ್ತು ಡಿಸೇಲ್ ದರವನ್ನು 44 ಬಾರಿಏರಿಕೆ ಮಾಡಿದ್ದು, ಪೆಟ್ರೋಲ್ ದರ100 ರೂ.ದಾಟಿದೆ. ರಾಜ್ಯ ಸರ್ಕಾರಶಿವಮೊಗ್ಗ ಮತ್ತು ಬೆಂಗಳೂರಿಗೆಸೀಮಿತವಾಗಿದ್ದು, ಹಾಸನ ಸೇರಿಕಾಂಗ್ರೆಸ್, ಜೆಡಿಎಸ್ ಶಾಸಕರಿರುವಜಿಲ್ಲೆಗಳ ಅಭಿವೃದ್ಧಿ ಕಡೆಗಣಿಸಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿವಿಧಾನ ಪರಿಷತ್ ಸದಸ್ಯಎಂ.ಎ.ಗೋಪಾಲಸ್ವಾಮಿ, ಪಕ್ಷದಮುಖಂಡರಾದ ಎಚ್.ಕೆ.ಮಹೇಶ್,ಬನವಾಸೆ ರಂಗಸ್ವಾಮಿ,ಕುಮಾರಸ್ವಾಮಿ, ಕೆಲವತ್ತಿಸೋಮಶೇಖರ್, ಬಸವರಾಜು,ಬಾಲಶಂಕರ್, ಕೋಮಲೇಶ್, ರಾಜಣ್ಣ,ವೆಂಕಟೇಗೌಡ, ಸೋಮಣ್ಣ ಮತ್ತಿತರರುಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಕಾಂಗ್ರೆಸ್ ಮುಖಂಡ ಬಾಗೂರುಮಂಜೇಗೌಡ ತಮ್ಮ ಬೆಂಬಲಿಗರೊಂದಿಗೆಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.