ವಾಹನ ಸವಾರರಿಗೆ ಒಕ್ಕಣೆ ಕಿರಿಕಿರಿ


Team Udayavani, Jan 18, 2022, 1:26 PM IST

ವಾಹನ ಸವಾರರಿಗೆ ಒಕ್ಕಣೆ ಕಿರಿಕಿರಿ

ಚನ್ನರಾಯಪಟ್ಟಣ: ಪ್ರಸಕ್ತ ವರ್ಷ ಭರ್ಜರಿ ಮಳೆಯಾಗಿದ್ದು, ತಾಲೂಕಿನಲ್ಲಿ ರಾಗಿ ಸೇರಿದಂತೆ ವಿವಿಧ ಬಗೆಯ ದವಸ ಧಾನ್ಯ ಸಕಾಲಕ್ಕೆ ರೈತರ ಕೈಸೇರಿದ್ದು ಕಟಾವು ಮಾಡುತ್ತಿರುವ ರೈತರ ಪೈಕಿ ಹಲವರು ರಸ್ತೆಯಲ್ಲಿ ಒಕ್ಕಣೆ ಆರಂಭಿಸಿರುವುದರಿಂದ ವಾಹನ ಸವಾರರ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ.

ಸುಗ್ಗಿ ಹಬ್ಬ ಮುಗಿದಿದ್ದು ತಾಲೂಕಿನಲ್ಲಿ ಭತ್ತ, ರಾಗಿ, ಹುರುಳಿ, ಜೋಳ, ಸೇರಿದಂತೆ ದವಸ ಧಾನ್ಯಗಳ ಒಕ್ಕಣೆ ಕೆಲಸ ಪ್ರಾರಂಭಿಸಿರುವ ರೈತರು ಒಕ್ಕಣೆಗೆ ಕಣಮಾಡಿಕೊಳ್ಳದೆ ರಾಜ್ಯ ಹೆದ್ದಾರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ. ಇದರಿಂದ ಹಲವು ತೊಂದರೆಗಳುಉಂಟಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಸೇರಿದಂತೆಕಾರುಗಳನ್ನು ರಸ್ತೆಯಲ್ಲಿ ಸರಾಗವಾಗಿ ಸಂಚಾರ ಮಾಡಲು ಚಾಲಕರು ಹರಸಾಹಸ ಪಡುವಂತಾಗಿದೆ.

ಪ್ರಮುಖ ರಸ್ತೆಗಳಾವು: ಪ್ರವಾಸಿ ಕೇಂದ್ರಗಳಿಗೆ ತೆರಳುವ ರಸ್ತೆಗಳಾದ ಶ್ರವಣಬೆಳಗೊಳದಿಂದ ಮೇಲುಕೋಟೆ ರಸ್ತೆ, ಶ್ರವಣಬೆಳಗೊಳದಿಂದ ಸಾಸಲು ಶ್ರೀಕ್ಷೇತ್ರಕ್ಕೆ ತೆರಳುವ ರಸ್ತೆ, ಬಾಗೂರು ಹೋಬಳಿ ಯಿಂದ ಶ್ರೀಕ್ಷೇತ್ರನಾಗರನವಿಲೆಗೆ ತೆರಳುವ ರಸ್ತೆ, ಶ್ರವಣಬೆಳಗೊಳ-  ನಾಗಮಂಗಲ ರಸ್ತೆ, ಹಿರೀಸಾವೆ- ಕೆಆರ್‌ಪೇಟೆ ರಸ್ತೆ, ಹಾಸನ, ಅರಸೀಕೆರೆ, ಗಂಡಸಿ ಹಾಗೂ ಚನ್ನರಾಯಪಟ್ಟಣದಿಂದ ಶ್ರೀಕ್ಷೇತ್ರ ಕುಂದೂರು ಮಠಕ್ಕೆಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಒಕ್ಕಣೆಗಾಗಿರೈತರು ಹುಲ್ಲು ಹಾಕಿರುತ್ತಾರೆ. ಹೀಗಾಗಿ ಈ ಗ್ರಾಮಗಳ ರಸ್ತೆಗಳು ಸಂಪೂರ್ಣ ಕಣವಾಗಿ ಮಾರ್ಪಟ್ಟಿವೆ.

ರಸ್ತೆ ತುಂಬೆಲ್ಲಾ ಹುಲ್ಲು ಒಕ್ಕಣೆ: ರಸ್ತೆ ಬದಿ ಹೊಲಗದ್ದೆ ಹೊಂದಿರುವ ರೈತರು ಬೆಳೆಗಳನ್ನು ಕಟಾವು ಮಾಡಿ ರಸ್ತೆ ಅಕ್ಕ-ಪಕ್ಕದಲ್ಲಿ ಮೆದೆ ಮಾಡಿದ್ದಾರೆ, ಇನ್ನು ಹಲವು ರಾಜ್ಯಹೆದ್ದಾರಿ ಸೇರಿದಂತೆ ಡಾಂಬರ್‌ ರಸ್ತೆಯಲ್ಲೆ ಬೆಳೆಗಳನ್ನು ರಾಶಿ ಮಾಡುತ್ತಾ ಒಕ್ಕಣೆಯ ಕಣ ಮಾಡಿಕೊಂಡಿದ್ದಾರೆ,ವಿವಿಧ ಬೆಳೆ ಇನ್ನಿತರ ಧಾನ್ಯಗಳ ಹುಲ್ಲುಗಳನ್ನು ಮಂಡಿ  ಯುದ್ದಕ್ಕೆ ಹಾಕಿ ಸುಮಾರು 100 ಮೀ. ಉದ್ದ ರಸ್ತೆ ತುಂಬೆಲ್ಲಾ ಹಾಕು ವುದು ಸಾಮಾನ್ಯವಾಗುತ್ತಿದೆ, ಇದರಿಂದ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ದ್ವಿ ಚಕ್ರ ಸವಾ ರರು, ಕಾರು, ಜೀಪು, ಆಟೋ ಸೇರಿದಂತೆ ವಾಹನಗಳ ಸವಾರರು ಸಂಚರಿಸಲು ಹೈರಾಣಾಗಿದ್ದಾರೆ.

ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ: ರಸ್ತೆಯಲ್ಲಿ ಈ ರೀತಿ ರಾಶಿ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ. ವಾಹನ ಸವಾರರು ಹಲವು ತೊಂದರೆ ಯನ್ನು ಎದುರಿಸುವುದಲ್ಲೆ ಅಪಾಯಕ್ಕೆ ತುತ್ತಾಗುತ್ತಿದ್ದಾರೆ.ರಸ್ತೆ ಮೇಲಿನ ಒಕ್ಕಣೆಯಿಂದಾಗಿ ಸವಾರರು ಹಳ್ಳಕೊಳ್ಳಗಳಗುಂಡಿ ಬಿದ್ದಿರುವ ರಸ್ತೆ ಬದಿಯನ್ನು ಆಶ್ರಯಿಸುವ ಸ್ಥಿತಿನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಚಕ್ರಕ್ಕೆ ದವಸ ಧಾನ್ಯದಹುಲ್ಲು ಹಾಗೂ ಕಡ್ಡಿಗಳು ಸುತ್ತಿಕೊಂಡು ಬೆಂಕಿ ಉಂಟಾದರೆಮುಂದೇನು ಎಂಬ ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಕಿರಿ ಕಿರಿಯಲ್ಲಿ ಸಂಚಾರ: ರಸ್ತೆಗಳಲ್ಲಿ ಮಂಡಿಯುದ್ದ ಒಕ್ಕಣೆ ಮಾಡಲಾಗಿರುವ ಹುಲ್ಲಿನ ಮೇಲೆ ಲಘು ವಾಹನಗಳು ರಸ್ತೆಯ ಮೇಲೆ ನಿಧಾನವಾಗಿ ಭಯದ ಆತಂಕದಲ್ಲಿ ಚಲಿಸುವಂತ ಅನಿವಾರ್ಯತೆ ಎದುರಾಗಿದೆ. ಇನ್ನೊಂದೆಡೆ ಕಾರು, ಜೀಪು, ಆಟೋ ಇನ್ನಿತರ ವಾಹನ ಸಂಚರಿಸಲು ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದು, ಆರ್‌ಟಿಒ, ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ರೈತರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಅನಾಹುತ ಸಂಭವಿಸುವ ಸಾಧ್ಯತೆ: ನುಣುಪಾದ ಹುಲ್ಲಿನ ಮೇಲೆ ವಾಹನ ಸಂಚಾರ ಮಾಡು ವೇಳೆತಕ್ಷಣ ಬ್ರೇಕ್‌ ಹಾಕಿದರೆ ವಾಹನ ಚಾಲಕನ ನಿಯಂತ್ರಣಕ್ಕೆ ದಿಗದೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ, ಜತೆಗೆ ವಾಹನ ಚಕ್ರದ ತಳದಲ್ಲಿ ತಿರುಗುವಇನ್ನಿತರ ಯಂತ್ರಕ್ಕೆ ಹುಲ್ಲು ಸುತ್ತುಕೊಂಡಾಗ ಅದನ್ನುತೆಗೆಯದೆ ಹಾಗೆ ಮುಂದಕ್ಕೆ ಸಾಗಿದರೆ ಬೆಂಕಿಹತ್ತಿಕೊಂಡು ಅನಾಹುತ ಸಂಭವಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಚಾಲಕರು.

ಬಹುತೇಕ ಹಳ್ಳಿಗಳ ರೈತರಿಗೆ ಒಕ್ಕಣೆ ಮತ್ತು ರಾಶಿ ಮಾಡಲುಕಣಗಳ ಅಭಾವ ಇರುವುದರಿಂದಅನಿವಾರ್ಯವಾಗಿ ರಸ್ತೆಗಳೇಕಣವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕಣ ನಿರ್ಮಿಸಿ ಕೊಟ್ಟರೆ ರೈತರಿಗೆ ಅನುಕೂಲ ಆಗಲಿದೆ. ಕುಳ್ಳೇಗೌಡ. ಡಿಂಕ ಗ್ರಾಮ ರೈತ

ರಸ್ತೆ ಮೇಲೆ ಕೆಲ ರೈತರು ಈ ರೀತಿ ಒಕ್ಕಣೆ ಮಾಡಿತ್ತಿರುವುದರಿಂದದ್ವಿಚಕ್ರ ಹಾಗೂ ಕಾರು ಚಾಲಕರು ಸುಗಮಸಂಚಾರ ದುಸ್ಥರವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆಮುಂದಾಗಬೇಕು. ಗ್ರಾಪಂ ಅಧಿಕಾರಿಗಳು ಪ್ರತಿ ಗ್ರಾಮಕ್ಕೆ ಎನ್‌ಆರ್‌ಇಜಿ ಮೂಲಕ ಕಣ ನಿರ್ಮಾಣಕ್ಕೆ ಮುಂದಾಗಬೇಕಿದೆ.  –ಪುನೀತ್‌ಬಾಬು, ವಾಹನ ಸವಾರ ಚಿಕ್ಕಬಿಳತಿ ಗ್ರಾಮ

 

ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

9

Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫ‌ಲಪ್ರದ?

Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ

Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ

8

Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.