ಅತಿವೃಷ್ಟಿಯಿಂದ 5,395 ಹೆಕ್ಟೇರ್‌ತೋಟಗಾರಿಕೆ ಬೆಳೆಗಳು ನಾಶ
Team Udayavani, Oct 4, 2018, 1:30 PM IST
ಸಕಲೇಶಪುರ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಸುಮಾರು 5395 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ ಎಂದು ತೋಟಗಾರಿಕೆ ಅಧಿಕಾರಿ ಜಯಚಿತ್ರಾ ಹೇಳಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ ಶಾಸಕ ಎಚ್.ಕೆ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವರದಿ ನೀಡಿ, ಸುಮಾರು 28 ಹೆಕ್ಟೇರ್ ಶುಂಠಿ, 61 ಹೆಕ್ಟೇರ್ ಅಡಿಕೆ ಹಾಗೂ 5300 ಹೆಕ್ಟೇರ್ ಕಾಳು ಮೆಣಸು ಬೆಳೆ ನಾಶ ವಾಗಿದ್ದು, ಮೆಣಸು ಬೆಳೆ ಕೆಲವೆಡೆ ಶೇ.50 ರಷ್ಟು ನಾಶವಾಗಿದ್ದರೆ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿ ರುವ ಬಹುತೇಕ ಗ್ರಾಮಗಳಲ್ಲಿ ಶೇ 100 ರಷ್ಟು ನಾಶವಾಗಿದೆ ಎಂದರು.
ಅಲ್ಲದೆ ತಾಲೂಕಿನಲ್ಲಿ ಯಂತ್ರೋಪಕರಣಗಳಿಗೆ ಭಾರಿ ಬೇಡಿಕೆ ಇದೆ ಆದರೆ ಸರ್ಕಾರ ಕೇವಲ 20 ಲಕ್ಷ ರೂ. ಬಿಡುಗಡೆ ಮಾಡಿದ್ದು ಈ ಅನುದಾನ ಯಾವುದಕ್ಕೂ ಸಾಲುವುದಿಲ್ಲ ಎಂದು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ 2394 ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದ್ದು ಅಂದಾಜು 1.80 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಕೃಷಿ ಇಲಾಖೆಯಿಂದ ಈ ತಿಂಗಳ 15 ರಿಂದ ಸುಣ್ಣ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜೊತೆಗೆ ಸಸ್ಯ ಸಂರಕ್ಷಣ ಔಷಧಿ ವಿತರಣೆ ನಡೆಯುತ್ತಿದೆ ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ್ ವರದಿ ನೀಡಿ ನಂತರ ಮಾತನಾಡಿದ ಶಾಸಕರು ತಾಲೂಕಿನಲ್ಲಿ ಆಸ್ಪತ್ರೆಗಳ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಅತ್ಯುತ್ಯಮ ಆಸ್ಪತ್ರೆ ಕಟ್ಟಡಗಳು ಸೇರಿದಂತೆ ಬಹುತೇಕ ಎಲ್ಲಾ ಸವಲತ್ತು
ಹಾಗೂ ಸೌಲಭ್ಯಗಳಿವೆ. ಆದರೆ ತಾಲೂಕಿನ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೇವಲ ನಾಲ್ವರು ವೈದ್ಯರಿದ್ದರೆ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ 11 ತಜ್ಞ ವೈದ್ಯರಲ್ಲಿ ಕೇವಲ ನಾಲ್ವರು ವೈದ್ಯರು ಕೆಲಸ ಮಾಡುತ್ತಿದ್ದಾರೆ ಎಂದರು.
ಸರ್ಕಾರದ ದಿನಕ್ಕೊಂದು ಕಾನೂನು ರೂಪಿ ಸುತ್ತಿರುವುದರಿಂದಾಗಿ ಕ್ರಾಫರ್ಡ್ ಆಸ್ಪತ್ರಗೆ ಬಂದ ವೈದ್ಯರು ಸಹ ಇದೆ ಮೊದಲ ಬಾರಿಗೆ ಸರ್ಕಾರ ಜಾರಿಗೊಳಿಸಿದ ರೀ ಕೌನ್ಸಿಲಿಂಗ್‌ನಲ್ಲಿ ಈ ಆಸ್ಪತ್ರೆಯಿಂದ ಬೇರೆಡೆ ತೆರಳಿದ್ದಾರೆ. ಆದ್ದರಿಂದ ಮುಂದಿನ ಜಿಪಂ ಸಭೆಯಲ್ಲಿ ಮಾತನಾಡಿ ಹಾಸನ ವ್ಯದ್ಯಕೀಯ ಕಾಲೇಜಿನ ತಜ್ಞರು ಹಾಗೂ ವೈದ್ಯ ವಿದ್ಯಾರ್ಥಿಗಳು ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತೆ ನಿಯಮ ರೂಪಿಸ ಲಾಗುವುದು ಎಂದರು. ನಂತರ ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಿದ ಶಾಸಕರು ಕುಡಿಯುವ ನೀರಿಗೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ 14ನೇ ಹಣಕಾಸು ಯೋಜನೆಯಲ್ಲಿ ಬರುವ ಅನುದಾನವನ್ನು ಸಂಪೂರ್ಣ ಕುಡಿಯುವ ನೀರಿಗೆ ಬಳಸಬೇಕು ಎಂದು ತಿಳಿಸಿದರು.
ನಂತರ ಸಭೆಗೆ ವರದಿ ನೀಡಿದ ಕ್ಷೇತ್ರಶಿಕ್ಷಣಾಧಿಕಾರಿ ಶಿವಾನಂದ್ ತಾಲೂಕಿನಲ್ಲಿ 80 ಶಾಲಾ ಕಟ್ಟಡಗಳು ಅತಿವೃಷ್ಟಿಯಿಂದ ಹಾನಿಗೀಡಾಗಿದ್ದು ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳ ಬದಲಿಗೆ ಬೇರೆಡೆ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ವೇಳೆ ಮಾತನಾಡಿದ ಶಾಸಕ ಎಚ್.ಕೆ ಕುಮಾರಸ್ವಾಮಿ, ಜೂನಿಯರ್ ಕಾಲೇಜುಗಳ ಆಡಳಿತ ಮಂಡಳಿಗೆ ಶಾಸಕರೆ ಅಧ್ಯಕ್ಷರಾದರೂ ನಮ್ಮ ಗಮನಕ್ಕೆ ಬಾರದಂತೆ ಕೆಲವು ಕಾರ್ಯಕ್ರಮಗಳು ನಡೆಯುತ್ತಿವೆ, ಆದ್ದರಿಂದ ಈ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದರು. ತಾಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ, ಉಪಾಧ್ಯಕ್ಷ ಉದಯ್, ಜಿಪಂ ಸದಸ್ಯರಾದ ಉಜ್ಮಾರುಜ್ವಿ, ಚಂಚಲಾಕುಮಾರಸ್ವಾಮಿ, ತಹಶೀಲ್ದಾರ್ ನಾಗಭೂಷಣ್,ತಾಪಂ ಇಒ ಡಾ.ಪುನೀತ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.