ಪ್ಯಾರಾಗ್ಲೈಂಡಿಂಗ್‌ ಸಾಹಸ ಚಟುವಟಿಕೆ ಆರಂಭ

Team Udayavani, Jan 1, 2023, 6:02 PM IST

tdy-20

ಸಕಲೇಶಪುರ: ಪಶ್ಚಿಮ ಘಟ್ಟದ ರಮಣೀಯ ತಾಣದಲ್ಲಿ ಅರಣ್ಯ ಇಲಾಖೆ ಉಸ್ತುವಾರಿಯ ಗ್ರಾಮ ಅರಣ್ಯ ಸಮಿತಿ ನೇತೃತ್ವದಲ್ಲಿ ಶನಿವಾರದಿಂದ ತಾಲೂಕಿನ ಹೊಸಹಳ್ಳಿ ಗುಡ್ಡ, ಪಟ್ಲಬೆಟ್ಟದಲ್ಲಿ ಪ್ಯಾರಾಗ್ಲೈಂಡಿಂಗ್‌ ಸಾಹಸಮಯ ಚಟುವಟಿಕೆ ಆರಂಭಗೊಂಡಿದೆ.

ಸಾಹಸ ಚಟುವಟಿಕೆಗಳು ಪ್ರವಾಸದ ಖುಷಿಯನ್ನು ಇಮ್ಮಡಿಯಾಗಿಸುತ್ತವೆ. ಇಂತಹ ಖುಷಿ ಚಟುವಟಿಕೆಗಳಿಗಾಗಿಯೇ ಸಾಕಷ್ಟು ಮಂದಿ ಪ್ರವಾಸ ಕೈಗೊಳ್ಳುತ್ತಾರೆ. ಟ್ರೆಕ್ಕಿಂಗ್‌, ಕ್ಯಾಂಪಿಂಗ್‌ ಹೀಗೆ ಸಾಕಷ್ಟು ಸಾಹಸ ಚಟುವಟಿಕೆಗಳು ಪ್ರವಾಸದ ಖುಷಿ ಹೆಚ್ಚಾಗಿಸುತ್ತವೆ. ಅಂತೆಯೇ, ಇನ್ನೊಂದಷ್ಟು ಮಂದಿ ಪ್ಯಾರಾಗ್ಲೈಂಡಿಂಗ್‌ ಅವಕಾಶ ತಪ್ಪಿಸಿಕೊಳ್ಳುವುದೇ ಇಲ್ಲ. ಹೀಗೆ ಪ್ರವಾಸಿಗರಿಗೆ ಆನಂದ ನೀಡುವಂತಹ ಸಾಕಷ್ಟು ಅದ್ಭುತ ಪ್ಯಾರಾಗ್ಲೈಂಡಿಂಗ್‌ ತಾಣಗಳು ವಿಶ್ವದಲ್ಲಿವೆ. ಅಂತೆಯೇ, ಕರ್ನಾಟಕದ ಕಾಶ್ಮೀರ ಎಂಬ ಹೆಸರಿಗೆ ಖ್ಯಾತಿಯಾಗಿರುವ ಸಕಲೇಶಪುರದಲ್ಲಿ ಪ್ರಥಮ ಬಾರಿಗೆ ಪ್ಯಾರಾಗ್ಲೈಂಡಿಂಗ್‌ ಗೆ ಚಾಲನೆ ನೀಡಲಾಗಿದೆ.

ಬೆಟ್ಟಕ್ಕೆ ತೆರಳಲು ಜೀಪು ಮಾಲೀಕರಿಗೆ ಅವಕಾಶ: ತಾಲೂಕಿನ ವಳಲಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ಗುಡ್ಡ, ವನಗೂರು ಗ್ರಾಪಂ ವ್ಯಾಪ್ತಿಯ ಪಟ್ಲಬೆಟ್ಟದಲ್ಲಿ ಪರೀಕ್ಷಾರ್ಥವಾಗಿ ಪ್ಯಾರಾಗ್ಲೈಂಡಿಂಗ್‌ಗೆ ಚಾಲನೆ ನೀಡಲಾಯಿತು.

ಬೆಟ್ಟಕ್ಕೆ ತೆರಳಲು ಸ್ಥಳೀಯ ಜೀಪು ಮಾಲೀಕರಿಗೆ ಅವಕಾಶ ನೀಡಲಾಗಿದ್ದು, ಕನಿಷ್ಠ ದರದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವುದರ ಜೊತೆಗೆ ಆರ್ಥಿಕಾಭಿವೃದ್ಧಿ ಮತ್ತು ಸ್ಥಳೀಯ ನಿರುದ್ಯೋಗಿ ಗಳಿಗೆ ಸಹಾಯಕಾರಿಯಾಗಿದೆ. ಈ ಚಟುವಟಿಕೆ ಆರಂಭದಿಂದ ಸ್ಥಳೀಯರಿಗೆ ಉದ್ಯೋಗ ಸಿಗುವ ಜೊತೆಗೆ ಪ್ರವಾಸಿಗರನ್ನೇ ಆಧರಿಸಿ, ನಡೆಯು ತ್ತಿರೋ ಹಲವು ಚಟುವಟಿಕೆಗೆ ಉತ್ತೇಜನ ಸಿಗಲಿದೆ.

ಬೆಟ್ಟ ಸುತ್ತಾಡಿ ಲ್ಯಾಂಡಿಗ್‌: ಪ್ರವಾಸಿಗರಿಗೆ ಹೊಸದೊಂದು ಸಾಹಸಮಯ ಚಟುವಟಿಕೆ ಮುದ ನೀಡಲಿದೆ. ಇದೀಗ ತಾಲೂಕಿನಲ್ಲಿ ಈ ರೋಮಾಂಚನ ಕ್ರೀಡೆ ಆರಂಭಗೊಂಡಿದ್ದು, ಒಬ್ಬರು ಪೈಲೆಟ್‌ ಇರುತ್ತಾರೆ. ಒಬ್ಬರು ಪ್ಯಾರಾಗ್ಲೈಂಡಿಂಗ್‌ ಇರುತ್ತಾರೆ. ಇವರು ಇಡೀ ಬೆಟ್ಟವನ್ನು ಸುತ್ತಡಿಸಿಕೊಂಡು ಬೆಟ್ಟದ ಕೆಳ ಭಾಗದಲ್ಲಿ ಬಂದು ಲ್ಯಾಂಡಿಗ್‌ ಅಗುತ್ತಾರೆ. ತಾಲೂಕಿನ ಮೂರು ಪ್ರದೇಶದಲ್ಲಿ ಈ ಬಗ್ಗೆ ಅಧ್ಯಾಯನ ಮಾಡಿ, ಕೊನೆದಾಗಿ ಹೊಸಹಳ್ಳಿ ಬೆಟ್ಟ, ಪಟ್ಲ ಬೆಟ್ಟ ಅಯ್ಕೆ ಮಾಡಲಾಗಿದೆ.

ಪ್ಯಾರಾಗ್ಲೈಂಡಿಂಗ್‌ ನಲ್ಲಿ ಮೂರು ವಿಭಾಗ: ಪ್ಯಾರಾಗ್ಲೈಂಡಿಂಗ್‌ ನ್ನು ಮೂರು ವಿಭಾಗ ಮಾಡಲಾಗಿದೆ. 12ರಿಂದ 15 ನಿಮಿಷ, 15ರಿಂದ 20 ನಿಮಿಷ ಹಾಗೂ 20 ನಿಮಿಷಕ್ಕೂ ಹೆಚ್ಚು ಸಮಯ ಆಕಾಶದಲ್ಲಿ ಹಾರಡುವ ಸಮಯ ನಿಗದಿ ಪಡಿಸಲಾಗಿದೆ. ಕ್ರಮವಾಗಿ 3000, 3500 ಹಾಗೂ 4000 ರೂ. ಗಳನ್ನು ಒಬ್ಬ ವ್ಯಕ್ತಿಗೆ ನಿಗದಿ ಮಾಡಲಾಗಿದೆ. ಪ್ಯಾರಾಗ್ಲೈಂಡಿಂಗ್‌ ವೇಳೆ ಅನಾ ಹುತ ಸಂಭವಿಸಿದರೆ ಅಗತ್ಯ ಕ್ರಮ ವಹಿಸಲಾ ಗಿದ್ದು, ಮತ್ತೂಂದು ಪ್ಯಾರಾಗ್ಲೈಂಡಿಂಗ್‌ ನ್ನು ಪ್ಯಾರ ಚೂಟ್‌ ಮೂಲಕ ರಕ್ಷಿಸಲಾಗುವುದು. ನವೆಂಬರ್‌ನಿಂದ ಮೇ ತಿಂಗಳವರೆಗೆ ಮಾತ್ರ ಈ ಚಟುವಟಿಕೆ ನಡೆಸಲಾಗುತ್ತದೆ. ಒಟ್ಟಾರೆಯಾಗಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ಯಾರಾಗ್ಲೈಂಡಿಂಗ್‌ ಆರಂಭವಾಗಿದ್ದು, ಸಾಹಸಪ್ರಿಯರಿಗೆ ಸಂತೋಷ ತಂದಿದೆ.

ಇಷ್ಟು ದಿನಗಳವರೆಗೂ ಹೊಸಹಳ್ಳಿ ಗುಡ್ಡಕ್ಕೆ ತೆರಳುವ ಪ್ರವಾಸಿಗರಿಗೆ ನಿರ್ಭಂದವಿ ರಲಿಲ್ಲ. ಆದರೆ, ಇನ್ನು ಮುಂದೆ ಅರಣ್ಯ ಇಲಾಖೆ, ಸ್ಥಳೀಯರ ನೆರವಿನಿಂದ ಗುಡ್ಡ ಹತ್ತುವ ಮೊದಲೇ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗುವುದು. ಆದಾಯ ಕ್ರೂಡೀಕರಣಕ್ಕೆ ಗ್ರಾಮ ಅರಣ್ಯ ಸಮಿತಿ ಸಲಹೆ ಪಡೆದು ಪ್ರವಾಸೋದ್ಯಮ ಉತ್ತೇಜನ ನೀಡಲಾಗುವುದು. –ಬಸವರಾಜ್‌, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ

ಪ್ಯಾರಾಗ್ಲೈಂಡಿಂಗ್‌ ಗೆ ಯಾವುದೇ ಇಂದನ ಬಳಸುವುದಿಲ್ಲ. ಜೊತೆಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಈ ಯೋಜನೆ ಸಿದ್ಧಪಡಿಸಲಾಗಿದೆ. ಅರಣ್ಯ ಪ್ರದೇಶದ ಮೇಲೆ ಹಾರಿಸುವ ಈ ಯೋಜನೆ ಕರ್ನಾಟಕದಲ್ಲೇ ಪ್ರಥಮವಾಗಿದೆ. ಪ್ಯಾರಾಗ್ಲೈಂಡಿಂಗ್‌ ನಿಯಂತ್ರಣ ಪೈಲಟ್‌ ಬಳಿ ಇರುತ್ತದೆ. ಯಾವುದೇ ಆತಂಕ ಬೇಡ. ವಿವಿಧೆಡೆ ನಾವು ಈ ಚಟುವಟಿಕೆ ನಡೆಸುತ್ತಿದ್ದೇವೆ. -ಪೃಥ್ವಿ, ವ್ಯವಸ್ಥಾಪಕ, ಪ್ಯಾರಾಗ್ಲೈಂಡಿಂಗ್‌ ಅಡ್‌ ವೆಂಚರ್‌ ಎಕ್ಸ್‌ಪ್ಲೋರರ್‌ ಕಂಪನಿ

ಪ್ಯಾರಾಗ್ಲೈಂಡಿಂಗ್‌ ಉತ್ತಮ ಯೋಜನೆ. ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಆದರೆ, ಪ್ಯಾರಾಗ್ಲೈಂಡಿಂಗ್‌ ಬೆಲೆ ವಿಚಾರದಲ್ಲಿ ವ್ಯತ್ಯಾಸವಿದೆ. ಸ್ಥಳೀಯರು ಹೆಚ್ಚು ಹಣ ನೀಡಿ ಹೋಗಲು ಸಾಧ್ಯವಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಗಮನ ಹರಿಸಬೇಕು. ಗುತ್ತಿಗೆ ಪಡೆದ ಕಂಪನಿ ಪ್ರವಾಸಿಗರ ಸುರಕ್ಷತೆಗೆ ಗಮನ ಹರಿಸಬೇಕು. -ಎಚ್‌.ಕೆ ಕುಮಾರಸ್ವಾಮಿ, ಶಾಸಕ

– ಸುಧೀರ್‌.ಎಸ್‌.ಎಲ್‌

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.